ದೇವರಗುಡ್ಡ ಕಾರ್ಣಿಕ ನುಡಿ ಭಾರೀ ಸಂಚಲನ: ಸಾಧು-ಸಂತರು ದೇಶದ ಪ್ರಧಾನಿಯಾಗುತ್ತಾರೆ!

ಹಾಸನ, ಅ.19: ದಸರಾ ಮತ್ತು ನವರಾತ್ರಿ ಮಹೋತ್ಸವದ ಅಂಗವಾಗಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನುಡಿಯಲಾದ ಮಾಲತೇಶ (ಮೈಲಾರಲಿಂಗೇಶ್ವರ) ದೇವರ ಕಾರ್ಣಿಕ ದೈವವಾಣಿ ಭಾರೀ ಸಂಚಲನ ಸೃಷ್ಟಸಿದೆ.
Sponsored“ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್…”ಎಂದು ನುಡಿಯಲಾದ ಈ ವರ್ಷದ ದೈವವಾಣಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ವಿಶ್ಲೇಷಣೆ ನೀಡಿದ್ದಾರೆ.
ಕೆಂಪುಕೋಟೆ ಎಂಬುದು ದೇಶದ ಅತ್ಯುನ್ನತ ಆಡಳಿತ ಮತ್ತು ನಾಯಕತ್ವದ ಶಕ್ತಿಕೇಂದ್ರ, ಈ ದೈವವಾಣಿಯ ಪ್ರಕಾರ, ಮುಂದಿನ ದಿನಗಳಲ್ಲಿ ಕೆಂಪುಕೋಟೆಯ ಮೇಲೆ ಸಾಧು ಸಂತರು ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ. ಅಂದರೆ ಭಾರತ ದೇಶವನ್ನು ಸಾಧು-ಸಂತರು ಮುನ್ನಡೆಸಲಿದ್ದಾರೆ ಹಾಗೂ ಅವರೇ ದೇಶದ ಪ್ರಧಾನ ಮಂತ್ರಿಯಾಗುವ ಸ್ಪಷ್ಟ ಮುನ್ಸೂಚನೆಯನ್ನು ಮಾಲತೇಶ ದೇವರು ನೀಡಿದ್ದಾರೆ. ದೇಶದ ಚುಕ್ಕಾಣಿ ಸಂತರ ಕೈಸೇರಲಿದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.




