ಭಾನುವಾರ, 25 ಅಕ್ಟೋಬರ್ 2026
Trending

‘ಹುಟ್ಟಿದ ಮಗುವಿಗೆ ಚಿನ್ನದುಂಗುರ’ ಯೋಜನೆಗೆ ಚಾಲನೆ ಕೊಟ್ಟ ಸಿಎಂ ವಿಜಯ್

ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವಿಗೆ ಚಿನ್ನದ ಉಂಗುರ ತೊಡಿಸುವ ಮೂಲಕ ʻತಾಯ್ ಮಾಮನ್ ತಂಗ ಮೋದಿರಂʼ (ತಾಯಿಯ ಸಹೋದರನ ಚಿನ್ನದುಂಗುರ ಯೋಜನೆ) ಯೋಜನೆಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಚಾಲನೆ ನೀಡಿದರು. 

Sponsored

ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದ ಅವರು, ಉದ್ಘಾಟನಾ ಸಮಾರಂಭದಲ್ಲಿ ಅವರು ನವಜಾತ ಶಿಶುವಿಗೆ 1 ಗ್ರಾಂ ಚಿನ್ನದ ಉಂಗುರ ತೊಡಿಸಿದರು. ಬಳಿಕ ನವಜಾತ ಶಿಶುಗಳಿಗೆ ಆಶೀರ್ವದಿಸಿದರು. ಬಳಿಕ ಶಿಶುಗಳ ಪೋಷಕರಿಗೆ ಉಂಗುರಗಳನ್ನು ವಿತರಿಸಿದರು. 

ಟಿವಿಕೆ ಪಕ್ಷ ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೊಳಿಸುವ ಬಗ್ಗೆ ಘೋಷಿಸಿತ್ತು. ಈ ಯೋಜನೆ ಅಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಶಿಶುಗಳಿಗೆ ಸರ್ಕಾರವು ಒಂದು ಗ್ರಾಂ, 22 ಕ್ಯಾರೆಟ್ ಚಿನ್ನದ ಉಂಗುರವನ್ನು ನೀಡುತ್ತದೆ. ಈ ಯೋಜನೆಗೆ ಅರ್ಹತೆ ಪಡೆಯಲು, ನವಜಾತ ಶಿಶುಗಳ ತಾಯಂದಿರು ತಮಿಳುನಾಡಿನ ಖಾಯಂ ನಿವಾಸಿಗಳಾಗಿರಬೇಕು. 

ಈ ಯೋಜನೆಗಾಗಿ ರಾಜ್ಯ ಸರ್ಕಾರ ವಾರ್ಷಿಕ 755.83 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈಗಾಗಲೇ 1.28 ಲಕ್ಷ ಉಂಗುರಗಳನ್ನು ಈಗಾಗಲೇ ಸಿದ್ಧಪಡಿಸಿ ಇಡಲಾಗಿದೆ. ಈ ಉಂಗುರಗಳು ವಿಶಿಷ್ಟ ಸರಣಿ ಸಂಖ್ಯೆಗಳನ್ನು ಹೊಂದಿರುತ್ತವೆ.