ಧರ್ಮಸ್ಥಳ, ಸೆ.28: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಸೆ.28 ರಿಂದ ಅ.04 ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಉದ್ಘಾಟನಾ ಸಮಾರಂಭ ಇಂದು ಶ್ರೀ ಕ್ಷೇತ್ರದ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.
Sponsoredಸುಬ್ರಹ್ಮಣ್ಯ ಜಗದ್ಗುರು ಶ್ರೂ ಮಲಾಚಾರ್ಯ ಮಹಾಸಂಸ್ಥಾನ ಶ್ರೀ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಈ ಹಿಂದೆ ಎಲ್ಲಾ ಒಂದು ಕಾರ್ಯಕ್ರಮಕ್ಕೆ ತೆರಳಿದಾಗ ಅಲ್ಲಿ ಬ್ಯಾಂಡ್ ಮಾತ್ರವೇ ಇತ್ತು. ಆದರೆ ಇಂದು ಭಜನಾರ್ಥಿಗಳು ನಮ್ಮನ್ನು ಸ್ವಾಗತಿಸಲು ಮುಂದೆ ಬರುತ್ತಾರೆ. ಇದು ಬಹಳ ಶ್ರೇಷ್ಠವಾದದ್ದು, ಕಮ್ಮಟದಲ್ಲಿ ಭಾಗವಹಿಸಲಿರುವ ಎಲ್ಲಾ ಶಿಬಿರಾರ್ಥಿಗಳ ಬದುಕು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಭಗವಂತ ಮನುಷ್ಯನಿಗೆ ಮಾನಾಡಲು ನಾಲಗೆ, ನಗುವ ಮೊಗ, ಅನುಭವಿಸುವ ಭಾವನೆ ಎಲ್ಲಾ ಕೊಟ್ಟಿದ್ದಾಣೆ. ಹೀಗೆ ಕೊಟ್ಟ ಭಗವಂತನನ್ನು ಪ್ರತಿ ದಿನ ಸ್ಮರಿಸದೇ ಇದ್ದಲ್ಲಿ ನಮ್ಮ ಬದುಕು ಅಪೂರ್ಣವಾಗುತ್ತದೆ. ಈ ಭಜನಾ ಕಮ್ಮಟ ಅತ್ಯಂತ ಶ್ರೇಷ್ಠವಾಗಿದೆ. ಇದನ್ನು ಕೊಟ್ಟ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಅದು ಪೂರ್ಣವಾಗದು ಎಂದು ಉದ್ಘಾಟನೆ ನೆರವೇರಿಸಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.
ಮಾತೃಶ್ರೀ ಡಾ.ಹೇಮಾವತಿ ವಿ ಹೆಗ್ಗಡೆಯವರು, ಡಿ.ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕು.ಸುಪ್ರೀತ ಧರ್ಮಸ್ಥಳ ಪ್ರಾರ್ಥನೆ ಹಾಡಿದರು. ವಿದುಷಿ ಶ್ರೀಮತಿ ಚೈತ್ರಾ ಧರ್ಮಸ್ಥಳ ಮತ್ತು ತಂಡದವರಿಂದ ದೃಶ್ಯರೂಪಕ ನಡೆಯಿತು. ಭಜನಾ ಕಮ್ಮಟ ಸಂಚಾಲಕರಾದ ಶ್ರೀ ಜಿ. ಸುಬ್ರಹ್ಮಣ್ಯ ಪ್ರಸಾದ್ ಅವರು ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಸಮನ್ವಯಾಧಿಕಾರಿ ಶ್ರೀ ಸಂತೋಷ್ ಪಿ ಅಳಿಯೂರು ವಂದನಾರ್ಪಣೆಗೈದರು. ಶ್ರೀ ಧ ಮಂ ಪ್ರಾಥಮಿಕ ಶಾಲೆ ಪುದುವೆಟ್ಟು ಶಿಕ್ಷಕ ಶ್ರೀ ನಿಶಾಂತ್ ಇವರು ನಿರೂಪಣೆಗೈದರು.
28ನೇ ವರ್ಷದ ಭಜನಾ ಕಮ್ಮಟದಲ್ಲಿ 200 ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು.




