ಶನಿವಾರ, 24 ಅಕ್ಟೋಬರ್ 2026

ದ.ಕ ಕರಾವಳಿಯಲ್ಲಿ ದೈತ್ಯ ಅಲೆಗಳ ಭೀತಿ-ಮುನ್ನೆಚ್ಚರಿಕೆ ಸಂದೇಶ

Tunisia Sandy Beach

ಮಂಗಳೂರು: ಮುಲ್ಕಿಯಿಂದ ಮಂಗಳೂರು ನಡುವಿನ ಕರಾವಳಿ ತೀರದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿರುವ ಕಾರಣ, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (ಐಎನ್‌ಸಿಓಐಎಸ್‌) ಅಧಿಕೃತ ಮುನ್ನೆಚ್ಚರಿಕೆ ಸಂದೇಶ ಹೊರಡಿಸಿದೆ.

ಹವಾಮಾನ ವೈಪರೀತ್ಯದಿಂದಾಗಿ ಬೃಹತ್‌ ಅಲೆಗಳು ತೀರಕ್ಕೆ ಅಪ್ಪಳಿಗೆ ಸಾಧ್ಯತೆಯಿದ್ದು ಸೆ 27 ರ ಸಂಜೆಯಿಂದ ಸೆ 29 ರ ರಾತ್ರಿಯವರೆಗೆ ಎತ್ತರದವರೆಗೆ ಅಲೆಗಳು ಏಳಬಹುದು. ಈ ಹಿನ್ನೆಲೆಯಲ್ಲಿ ಕಡಲತೀರದ ತಾಣಗಳಲ್ಲಿ ಸಮುದ್ರದ ನೀರು ದಿಢೀರನೆ ದಡಕ್ಕೆ ನುಗ್ಗುವ ಭೀತಿ ಇದ್ದು, ತೀರ ಪ್ರದೇಶದಲ್ಲಿ ಚಲಿಸುವ ದೋಣಿಗಳು, ದೋಣಿ ಚಾಲಕರು ಅತ್ಯಂತ ಜಾಗರೂಕತೆಯಿಂದ ಸಂಚರಿಸಬೇಕು ಎಂದು ಸೂಚಿಸಲಾಗಿದೆ.

ಪ್ರವಾಸಿಗರು ಮತ್ತು ಕಡಲತೀರಕ್ಕೆ ತೆರಳುವ ಸಾರ್ವಜನಿಕರು ನೀರಿಗಿಳಿಯದೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಡಳಿತ ಮಂಡಳಿ ಹಾಗೂ ಹವಾಮಾನ ಇಲಾಖೆ ತಿಳಿಸಿದೆ.