ಶನಿವಾರ, 24 ಅಕ್ಟೋಬರ್ 2026

SHOCKING NEWS: 3 ವರ್ಷದ ಬಾಲಕಿಯ ರೇಪ್ ಮಾಡಿದ 1 ನೇ ತರಗತಿ ಬಾಲಕ!

10 ವರ್ಷದ ಬಾಲಕ ಮೂರು ವರ್ಷದ ಹುಡುಗಿಯನ್ನು ಅತ್ಯಾಚಾರ (rape) ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (uttar pradesh) ಮುಜಾಫರ್​​ನಗರ (Muzaffarnagar) ಜಿಲ್ಲೆಯಲ್ಲಿ ನಡೆದಿದೆ.

SHOCKING NEWS

Muzaffarnagar: ಇತ್ತೀಚೆಗೆ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಿದೆ. ಅಪ್ರಾಪ್ತ ವಯಸ್ಸಿನ ಹುಡುಗರು ತಮಗಿಂತ ಚಿಕ್ಕ ವಯಸ್ಸಿನ ಬಾಲಕಿಯರ ಮೇಲೆ ರೇಪ್​ ಮಾಡುವ ಕೇಸ್​ಗಳು ತಲೆ ಎತ್ತುತ್ತಿವೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು (Shocking News) ಬೆಳಕಿಗೆ ಬಂದಿದ್ದು, 10 ವರ್ಷದ ಬಾಲಕ ಮೂರು ವರ್ಷದ ಹುಡುಗಿಯನ್ನು ಅತ್ಯಾಚಾರ (rape) ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (uttar pradesh) ಮುಜಾಫರ್​​ನಗರ (Muzaffarnagar) ಜಿಲ್ಲೆಯಲ್ಲಿ ನಡೆದಿದೆ.

ಮುಜಾಫರ್ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಬಾಲಕ 1ನೇ ತರಗತಿಯಲ್ಲಿ ಓದುತ್ತಿದ್ದ. 3 ವರ್ಷದ ಬಾಲಕಿ ಅದೇ ಶಿಕ್ಷಣ ಸಂಸ್ಥೆಯ ನರ್ಸರಿ ವಿಭಾಗಕ್ಕೆ ಬರುತ್ತಿದ್ದಳು ಎಂದು ಹೇಳಲಾಗಿದೆ.

ಶನಿವಾರ ಬಾಲಕ ಈ 3 ವರ್ಷದ ಪುಟ್ಟ ಬಾಲಕಿಯನ್ನು ಶಾಲೆಯ ಮೇಲ್ಛಾವಣಿಗೆ ಕರೆದುಕೊಂಡು ಹೋಗಿದ್ದಾನೆ. ಯಾರಿಗೂ ತಿಳಿಯದಂತೆ ಕರೆದುಕೊಂಡು ಹೋಗಿ, ಆ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ವಿಷಯ ತಿಳಿದ ಬಾಲಕಿಯ ಪೋಷಕರು ಆಘಾತಕ್ಕೊಳಗಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪೋಷಕರ ದೂರಿನ ಮೇರೆಗೆ ಸದ್ಯ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಹುಡುಗಿಯನ್ನು ವೈದ್ಯಕೀಯ ತಪಾಸಣೆಗೆ ಕಳಿಸಲಾಗಿದೆ ಎಂದು ತಿಳಿದುಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ