ಶನಿವಾರ, 24 ಅಕ್ಟೋಬರ್ 2026

ಸರಕಾರಿ ಕಚೇರಿಯ ಕೊಳಕು ಶೌಚಾಲಯ ಸ್ವತಃ ಸ್ವಚ್ಛಗೊಳಿಸಿದ ಸಚಿವ!

ತೆಲಂಗಾಣ ಸಚಿವ ಜುಪಲ್ಲಿ ಕೃಷ್ಣರಾವ್‌ ಅವರು ಶುಕ್ರವಾರ ನಾಗರ್‌ಕುರ್ನೂಲ್‌ ಜಿಲ್ಲೆಯ ಪೆಂಟ್ಲವೆಲ್ಲಿ ತಹಶೀಲ್ದಾರ್‌ ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ವೇಳೆ ಕೊಳಕಾಗಿದ್ದ ಶೌಚಾಲಯವನ್ನು ಕಂಡು ಸ್ವತಃ ಸ್ವಚ್ಛ ಮಾಡಿದ ಘಟನೆ ನಡೆದಿದೆ.

ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಸ್ವಚ್ಛತಾ ವ್ಯವಸ್ಥೆ ನಿರ್ವಹಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.