ಶನಿವಾರ, 24 ಅಕ್ಟೋಬರ್ 2026

ರಕ್ಷಣೆ ಮಾಡಿ ಕಾಡಿಗೆ ಬಿಟ್ಟರೂ, ಮತ್ತೆ ಅದೇ ಸ್ಥಳಕ್ಕೆ ಬಂದ ಹಾವು!

Snake Bite

ನಾಗರಹಾವೊಂದನ್ನು ಅರಣ್ಯ ಇಲಾಖೆಯು ರಕ್ಷಣೆ ಮಾಡಿ ನಂತರ ಕಾಡಿಗೆ ಬಿಟ್ಟರೂ ಅದು ಕೆಲವೇ ಸಮಯದಲ್ಲಿ ಮತ್ತೆ ಅದೇ ಸ್ಥಳಕ್ಕೆ ಮರಳಿದೆ. ಇದರ ನಂತರ ನಾಗಪಂಚಮಿಯಂದು ಇಲ್ಲಿ ಸಾವಿರಾರು ಜನರ ಸಾಗರವೇ ಹರಿದು ಬಂದಿದ್ದಾರೆ. ಈ ಘಟನೆ ನಡೆದಿದ್ದು, ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಸಾಲಿ ಗ್ರಾಮದಲ್ಲಿ.

ಗಂಧವಾನಿ ಪ್ರದೇಶದ ಪುಟ್ಟ ಗ್ರಾಮ ಸಾಲಿಯಲ್ಲಿ ನಾಗರಹಾವಿನ ಸುದ್ದಿಯೋ ಸುದ್ದಿ. ಗ್ರಾಮದ ರಸ್ತೆ ಬದಿಯ ಒಂದು ಸ್ಥಳದಲ್ಲಿ ಹಲವು ದಿನಗಳಿಂದ ಹಾವು ಕಾಣಿಸಿಕೊಳ್ಳುತ್ತಿದ್ದು, ಇದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಂಡವು ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಗ್ರಾಮದಿಂದ ದೂರವಿರುವ ಕಾಡಿಗೆ ಬಿಟ್ಟಿತ್ತು. ಆದರೆ ಕಾಡಿಗೆ ಬಿಟ್ಟ ಕೆಲವೇ ಗಂಟೆಗಳಲ್ಲಿ ಹಾವು ಮತ್ತೆ ಅದೇ ಸ್ಥಳದಲ್ಲಿ ಕಾಣಿಸಿದೆ ಎಂದು ಸ್ಥಳೀಯರ ಹೇಳಿಕೆ.

ಅಂದಿನಿಂದ ಅದು ಅಲ್ಲಿಂದ ಹೋಗುತ್ತಿಲ್ಲ. ಹಗಲು ರಾತ್ರಿ ಹೆಚ್ಚಾಗಿ ಅದೇ ಸ್ಥಳದಲ್ಲೇ ಇರುತ್ತದೆ. ಇದೇ ಕಾರಣಕ್ಕೆ ಜನರ ಗಮನ ಸತತವಾಗಿ ಅದರತ್ತ ಹೋಗುತ್ತಿದೆ. ಆದರೆ ಹಾವು ಅದೇ ಸ್ಥಳಕ್ಕೆ ಮರಳಲು ಕಾರಣವೇನು ಎನ್ನುವುದು ಇನ್ನೂ ಯಾವುದೇ ವೈಜ್ಞಾನಿಕ ಕಾರಣ ಲಭ್ಯವಾಗಿಲ್ಲ.

ನಾಗರಪಂಚಮಿಯ ದಿನ ಭಾರೀ ಜನ ಇದನ್ನು ನೋಡಲು ಇಲ್ಲಿಗೆ ಬಂದಿದ್ದು, ಇದನ್ನು ಭಗವಾನ್‌ ಭೀಲತ್‌ ದೇವ್‌ ಪವಾಡ ಎಂದು ನಂಬಿದ್ದಾರೆ. ಹಾವು ಕುಳಿತುಕೊಂಡ ಸ್ಥಳದಲ್ಲಿ ಭೀಲತ್‌ ದೇವರ ದೇವಸ್ಥಾನವನ್ನು ನಿರ್ಮಿಸಲು ಸಿದ್ಧತೆಗಳು ನಡೆಯುತ್ತಿರುವ ವಿಷಯವೂ ಬಹಿರಂಗವಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆಗಳ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿ, ಹಾವು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ವನ್ಯಜೀವಿ ತಜ್ಞರ ದೃಷ್ಟಿಕೋನದಿಂದ ಯಾವುದೇ ಹಾವು ಒಂದು ನಿರ್ದಿಷ್ಟ ಸ್ಥಳದ ಸುತ್ತಮುತ್ತ ದೀರ್ಘಕಾಲ ಇರಲು ಕಾರಣ ಅಲ್ಲಿನ ಸುರಕ್ಷಿತ ವಾತಾವರಣ, ಆಹಾರ, ತಾಪಮಾನ, ಅಡಗಿಕೊಳ್ಳಲು ಇರುವ ಸ್ಥಳದಂತಹ ನೈಸರ್ಗಿಕ ಕಾರಣಗಳಿರಬಹುದು. ಆದರೆ ಸದ್ಯಕ್ಕಂತಲೂ ಸಾಲಿ ಗ್ರಾಮ ಎಲ್ಲರ ಕೇಂದ್ರ ಬಿಂದುವಾಗಿದೆ.