ಒಡಿಶಾದ ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ಓಡಾಡುತ್ತಿದ್ದ ವೇಳೆ ಸುಮಾರು ಎರಡು ವರ್ಷ ವಯಸ್ಸಿನ ಅಪರೂಪದ ಒರಾಂಗುಟಾನ್ ಮರಿಗಳು ಕಂಡುಬಂದಿದ್ದು, ಅವುಗಳನ್ನು ಈಗ ರಕ್ಷಣೆ ಮಾಡಲಾಗಿದೆ. ಆಶ್ಚರ್ಯವೇನೆಂದರೆ ಬರೋಬ್ಬರಿ 4,500 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಇವು ಭಾರತಕ್ಕೆ ಬಂದಿದೆ. ಇಷ್ಟೊಂದು ದೂರವನ್ನು ಕ್ರಮಿಸಿ ಇವು ಭಾರತಕ್ಕೆ ಬಂದದ್ದಾದರೂ ಹೇಗೆ? ಎಂಬ ಬಾರಿ ಕುತೂಹಲ ಇದೀಗ ಕೆರಳಿದೆ. ಜೊತೆಗೆ ದೊಡ್ಡ ಸಮಸ್ಯೆಯನ್ನು ಕೂಡ ತಂದೊಡ್ಡಿವೆ.


ಹೌದು, ಸೆಪ್ಟೆಂಬರ್ 08ರಂದು ಒಡಿಶಾದ ಬಾಲಸೋರ್ ಜಿಲ್ಲೆಯ ಉದಯಪುರ-ತಲ್ಸಾರಿ ಅರಣ್ಯ ಪ್ರದೇಶದ ಕ್ಯಾಸುರಿನಾ ತೋಟದಲ್ಲಿ ಸುಮಾರು ಎರಡು ವರ್ಷ ವಯಸ್ಸಿನ ಒರಾಂಗುಟಾನ್ 5 ಮರಿಗಳನ್ನು ಕಂಡ ಅರಣ್ಯ ಅಧಿಕಾರಿಗಳು ಆರಂಭದಲ್ಲಿ ಶಾಕ್ ಆಗಿದ್ದಾರೆ. ಯಾಕೆಂದರೆ ಭಾರತದ ಯಾವ ಪ್ರದೇಶದಲ್ಲೂ ಕಂಡ ಬರೆದ ಈ ಮರಿಗಳು ಅವರಿಗೆ ದಿಡೀರ್ ಎಂದು ಪ್ರತ್ಯಕ್ಷವಾಗಿವೆ. ಆದರೂ ಕೂಡ ಅವನ್ನು ರಕ್ಷಣೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಸಿಸಿಎಫ್ ಪ್ರಕಾಶ್ ಚಂದ್ ಅವರು, ನಾವು ಎಲ್ಲಾ ಮರಿಗಳನ್ನು ರಕ್ಷಣೆ ಮಾಡಿದ್ದೇವೆ. ಇದರಲ್ಲಿ ಮೂರು ಗಂಡು ಮತ್ತು ಎರಡಯ ಹೆಣ್ಣು ಮರಿಗಳಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಮರಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಪ್ರಾಣಿ ಸಂಗ್ರಹಾಲಯಕ್ಕೆ ಶಿಫ್ಟ್ ಮಾಡಿದ್ದಾರೆ. ಐದು ಮರಿಗಳಲ್ಲಿ 6 ತಿಂಗಳಿನಿಂದ ಎರಡು ವರ್ಷದ ವರೆಗೂ ವಯಸ್ಸು ಇದ್ದು, ಯಾವುದೇ ಗಾಯಗಳು ಆಗಿಲ್ಲ. ಆದರೆ ನಾವು ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಅವುಗಳನ್ನು ನಂದಂಕಣನ್ಗೆ ಶಿಫ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಂದಹಾಗೇ, ಭಾರತದಿಂದ ಸುಮಾರು 4500 ಕಿಲೋ ಮೀಟರ್ ದೂರದಲ್ಲಿರುವ ಇಂಡೋನೇಷ್ಯಾ ಮತ್ತು ಮಲೇಷ್ಯಾ ಕಾಡುಗಳಲ್ಲಿ ಈ ಒರಾಂಗುಟನ್ಗಳು ಕಂಡು ಬರುತ್ತವೆ. ಆದರೆ ಇದು ಭಾರತದಲ್ಲಿ ಕಂಡು ಬರುವುದಿಲ್ಲ. ಅದರಲ್ಲೂ ಒಟ್ಟಿಗೆ ಇಷ್ಟು ಮರಿಗಳು ಮಾತ್ರ ಕಾಣಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳ್ಳಸಾಗಣೆ ಮಾಡುವ ಸಂದರ್ಭದಲ್ಲಿ ವಿಫಲವಾಗಿ ಇಲ್ಲಿ ತಂದು ಬಿಟ್ಟಿರುವ ಸಾಧ್ಯತೆ ಇದೆ. ಈ ಸಂಬಂಧ ಪ್ರಕರಣದ ದಾಖಲು ಮಾಡಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತಂಡ ರಚನೆ ಮಾಡುವುದಾಗಿ ಒಡಿಶಾ ಅರಣ್ಯ ಇಲಾಖೆ ಸಚಿವ ಗಣೇಶ್ ರಾಮ್ ಸಿಂಗ್ ತಿಳಿಸಿದ್ದಾರೆ.
ಇನ್ನೂ ಒರಾಂಗುಟನ್ಗಳು ಅಳಿವಿನಿಂನಲ್ಲಿರುವ ದೊಡ್ಡ ವಾನರ ಪ್ರಭೇದ ಎಂದು ವಿಶ್ವಸಂಸ್ಥೆ ಗುರುತಿಸಿದೆ. ಆದರೆ ಅವುಗಳ ಆವಾಸಸ್ಥಾನದಿಂದ ಹೊರಗೆ ಕಂಡು ಬಂದಿರುವುದ ಕಳವಳಕಾರಿ ವಿಚಾರ ಎಂದು ಪರಿಸರ ಪ್ರೇಮಿಗಳು ಆತಂಖ ವ್ಯಕ್ತಪಡಿಸಿದ್ದಾರೆ.

