ಸೋಮವಾರ, 26 ಅಕ್ಟೋಬರ್ 2026
Trending

Supreme Court : ಮುಟ್ಟಿನ ರಜೆ ಕಡ್ಡಾಯ ವಿಚಾರ- ‘ಯಾರೂ ಮಹಿಳೆಯರನ್ನ ಕೆಲಸಕ್ಕೆ ಸೇರಿಸಿಕೊಳ್ಳಲ್ಲ’ ಎಂದ ಸುಪ್ರೀಂ ಕೋರ್ಟ್!!

Supreme Court : ‘ವೇತನ ಸಹಿತ ಮುಟ್ಟಿನ ರಜೆ’ ನೀತಿಯನ್ನು ಕಾನೂನುಬದ್ಧಗೊಳಿಸುವುದರಿಂದ ಅದು ಮಹಿಳೆಯರ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. 

Sponsored

ಮಹಿಳಾ ಉದ್ಯೋಗಿಗಳು ಮತ್ತು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ನೀತಿಯೊಂದನ್ನು ರೂಪಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಅವರಿದ್ದ ನ್ಯಾಯಪೀಠವು “ಮುಟ್ಟಿನ ರಜೆಗಾಗಿ ಕಡ್ಡಾಯ ಕಾನೂನು ತರಬೇಕು ಎನ್ನುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ‘ಮಾಲೀಕರು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂಜರಿಯಬಹುದು, ಮತ್ತು ಮಹಿಳೆಯರಲ್ಲಿ ಕೀಳರಿಮೆ ಬೆಳೆಯಬಹುದು. ಇಂತಹ ಕಾನೂನು ಅವರ ವೃತ್ತಿಜೀವನವನ್ನು ಅಂತ್ಯಗೊಳಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘’ಇಂತಹ ಅರ್ಜಿಗಳು ಕೆಲವೊಮ್ಮೆ ಮಹಿಳೆಯರನ್ನು ‘ದುರ್ಬಲರು’ ಎಂದು ಬಿಂಬಿಸುವ ಭಯವನ್ನೂ ಉಂಟುಮಾಡಬಹುದು. ಮಾಸಿಕ ಮುಟ್ಟಿನಿಂದ ಮಹಿಳೆಯರಲ್ಲಿ ಕೀಳರಿಮೆ ಅಥವಾ ತಮಗೇನೋ ಕೆಟ್ಟದಾಗುತ್ತಿದೆ ಎಂಬ ಭಾವನೆ ಮೂಡಿಸುವ ರೀತಿಯಲ್ಲಿ ಈ ವಿಚಾರವನ್ನ ನೋಡಬಾರದು’’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.