Advertisement
Advertisement
ಚೆನ್ನೈ: ಕರ್ನಾಟಕದಲ್ಲಿ ನಾಡಧ್ವಜಕ್ಕೆ ಕುರಿತಂತೆ ಕಾನೂನು ಜಾರಿ ಮಾಡಲು ಸರಕಾರ ಮುಂದಾಗಿರುವ ಬೆನ್ನಲ್ಲೇ ತಮಿಳುನಾಡಲ್ಲೂ ಪ್ರತ್ಯೇಕ ನಾಡಧ್ವಜಕ್ಕೆ ಬೇಡಿಕೆ ಹೆಚ್ಚಿದೆ.
Sponsoredತಮಿಳುನಾಡು ಕ್ರೀಡಾ ಸಚಿವ ಆಧವ್ ಅರ್ಜುನ್ ಈ ಕುರಿತು ಮಾತನಾಡಿದ್ದು, ರಾಜ್ಯವು ತನ್ನದೇ ಆದ ನಾಡಧ್ವಜ ಹೊಂದಿರಬೇಕು. ರಾಷ್ಟ್ರಧ್ವಜದ ಜೊತೆ ಹಾರಿಸುವ ಅನುಮತಿ ಇರಬೇಕು. ಹೀಗೆ ಇದ್ದಾಗ ಮಾತ್ರ ಸಮಾನತೆ ಇರುತ್ತದೆ ಎಂದು ಹೇಳಿದ್ದಾರೆ.
ಸಚಿವರ ಈ ಹೇಳಿಕೆ ಪ್ರತ್ಯೇಕತಾವಾದಿ ಮನಸ್ಥಿತಿಯಿಂದ ಬಂದಿರುವ ಹೇಳಿಕೆ ಎಂದು ಬಿಜೆಪಿ ನಾಯಕ ವಿನೋದ್ ಪಿ ಸೆಲ್ವಂ ಖಂಡಿಸಿದ್ದಾರೆ.