Advertisement
Advertisement
ಅಮೆರಿಕ: ಒಂಭತ್ತು ಜನರಿದ್ದ ಬಿಸಿನೆಸ್ ಜೆಟ್ ಭಾನುವಾರ ದಕ್ಷಿಣ ಫ್ಲೋರಿಡಾದಲ್ಲಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಎಲ್ಲರೂ ಸಾವಿಗೀಡಾಗಿದ್ದಾರೆ ಎಂದು ಸಾರಿಗೆ ಕಾರ್ಯದರ್ಶಿ ಹೇಳಿದ್ದಾರೆ. ಬಹಾಮಾಸ್‌ಗೆ ತೆರಳುತ್ತಿದ್ದ ವಿಮಾನವು ಆಕಾಶದಿಂದ ಬಿದ್ದು ರಸ್ತೆಯ ಬಳಿ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ.
Sponsoredಎಫ್‌ಎಎ ಪ್ರಕಾರ, ಟೆಕ್ಸಾಸ್‌ನ ಆಸ್ಟಿನ್-ಬರ್ಗ್‌ಸ್ಟ್ರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಬಹಾಮಾಸ್‌ನ ನಾರ್ತ್ ಎಲ್ಯೂಥೆರಾ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ಈ ವಿಮಾನವು ಮಧ್ಯಾಹ್ನ 12.50ರ ಸುಮಾರಿ ಕ್ರೆಸ್ಟ್‌ಹೇವನ್ ಬಳಿ ಪತನಗೊಂಡಿದೆ. ಒಂಭತ್ತು ಮಂದಿಯೂ ಸಾವಿಗೀಡಾಗಿದ್ದಾರೆ ಎಂದು ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ತಿಳಿಸಿದ್ದಾರೆ.