ಸೋಮವಾರ, 2 ನವೆಂಬರ್ 2026

ಗರಗಸ ಬಳಸಿ ಶಾಲಾ ಬಾಲಕಿ ಮೇಲೆ ದಾಳಿ ಪ್ರಕರಣ: ಗುಂಡು ಹಾರಿಸಿ ಆರೋಫಿಯ ಬಂಧನ

Advertisement
Advertisement

ಆಂಧ್ರಪ್ರದೇಶ (ಅನಂತಪುರ): ತರಗತಿ ಕೊಠಡಿಯಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಗರಗಸ ಬಳಸಿ ದಾಳಿ ನಡೆಸಿದ ಆರೋಪಿಯನ್ನು ಅತ್ಮಕೂರು ಅರಣ್ಯ ಪ್ರದೇಶದಲ್ಲಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Sponsored

ಹೇಮಂತ್‌ ಎಂದು ಗುರುತಿಸಲಾದ ಆರೋಪಿ ಅ.31 ರಂದು ರಾಪ್ತದುವಿನ ಸರಕಾರಿ ಶಾಲೆಯೊಂದರಲ್ಲಿ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆಸಿದ್ದ, ಶನಿವಾರದಿಂದ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಭಾನುವಾರ ಸಂಜೆ 6 ರಿಂದ 6.30 ರ ನಡುವೆ ಅರಣ್ಯ ಪ್ರದೇಶದ ಹೊರವಲಯದಲ್ಲಿ ಅಡಗಿಕೊಂಡಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

Advertisement
Advertisement

ಈ ಮಾಹಿತಿಯ ಆಧಾರದಲ್ಲಿ 15 ಪೊಲೀಸ್‌ ತಂಡಗಳನ್ನು ರಚನೆ ಮಾಡಲಾಗಿತ್ತು ಮತ್ತು ಎರಡು ತಂಡಗಳನ್ನು ಅರಣ್ಯ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಹೇಮಂತ್‌ ಅಮಲಿನಲ್ಲಿದ್ದ ಮತ್ತು ಆತನ ಕೈಯಲ್ಲಿ ಚಾಕು ಇತ್ತು ಎಂದು ಎಸ್‌ಪಿ ಹೇಳಿದ್ದಾರೆ. ಆರೋಪಿಗೆ ಎಚ್ಚರಿಕೆ ನIಡಿ, ಆತನನ್ನು ನಿಯಂತ್ರಣಕ್ಕೆ ತರಲು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಆದರೆ ಆತ ಪ್ರತಿರೋಧ ಮಾಡಿ, ಪೊಲೀಸ್‌ ಒಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಾನೆ ಎಂದು ಎಸ್‌ಪಿ ತಿಳಿಸಿದರು.

Advertisement

ಆತನ ದೇಹದ ಕೆಳಭಾಗಕ್ಕೆ ಗುಂಡೇಟು ಬಿದ್ದಿದ್ದು, ಚಿಕಿತ್ಸೆಗೆ ಅನಂತರಪುರದ ಸರಕಾರ ಸಾಮಾನ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿಯ ದಾಳಿಗೆ ಒಳಗಾದ ಇಬ್ಬರು ಬಾಲಕಿಯರಲ್ಲಿ ಒಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯ ಬಲಗೈ ಕತ್ತರಿಸಲ್ಪಟ್ಟಿದ್ದು, ದೇಹದ ಹಲವು ಮೂಳೆ ಮುರಿತಕ್ಕೊಳಗಾಗಿದೆ. ಇನ್ನೋರ್ವ ಬಾಲಕಿ ತನ್ನ ಸಹಪಾಠಿಯನ್ನು ರಕ್ಷಿಸಲೆಂದು ಹೋಗಿ ಗಾಯಗೊಂಡಿದ್ದಾಳೆ.

Advertisement
Advertisement