ಸೋಮವಾರ, 2 ನವೆಂಬರ್ 2026

ಮಂಗಳೂರು: ಮಧ್ಯರಾತ್ರಿ ಸಮುದ್ರಕ್ಕೆ ಬಿದ್ದ ಮೀನುಗಾರ-ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದನೆ ಮಾಡಿದ ಇಂಡಿಯನ್‌ ಕೋಸ್ಟ್‌ ಗಾರ್ಡ್‌

Sea ​​wave
Advertisement
Advertisement

ಮಂಗಳೂರು: ಸಮುದ್ರದಲ್ಲಿ ಮೀನುಗಾರಿಕಾ ಬಲೆ ಎಳೆಯುವ ವೇಳೆ ನೀರಿಗೆ ಬಿದ್ದು ಗಾಯಗೊಂಡ ಮೀನುಗಾರನನ್ನು ದೋಣಿಯಲ್ಲಿದ್ದ ಮೀನುಗಾರರು ರಕ್ಷಣೆ ಮಾಡಿದರೂ, ತೀವ್ರ ಅಸ್ವಸ್ಥಗೊಂಡ ಮೀನುಗಾರರನ್ನು ಭಾರತೀಯ ಕರಾವಳಿ ಕಾವಲು ಪಡೆ ಮಧ್ಯರಾತ್ರಿ ರಕ್ಷಣೆ ಮಾಡಿದ ಘಟನೆ ನ.1 ರಂದು ನಡೆದಿದೆ.

Sponsored

ಮಂಗಳೂರಿನಿಂದ ಸುಮಾರು 54 ನಾಟಿಕಲ್‌ ಮೈಲು (100 ಕಿ.ಮೀ) ದೂರದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ʼಐಎಫ್‌ಬಿ ಶಿವಸಾಗರ್‌ʼ ಎಂಬ ಮೀನುಗಾರಿಕಾ ದೋಣಿಯಿಂದ ವಿಎಚ್‌ಎಫ್‌ ಮೂಲಕ ತುರ್ತು ಸಂದೇಶ ರವಾನೆಯಾಗಿತ್ತು. ಮೀನುಗಾರಿಕಾ ಬಲೆ ಎಳೆಯುತ್ತಿದ್ದ ಸಂದರ್ಭದಲ್ಲಿ ಮೀನುಗಾರರೊಬ್ಬರು ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದರು. ನಂತರ ದೋಣಿಯಲ್ಲಿದ್ದ ಇತರ ಮೀನುಗಾರರು ಅವರನ್ನು ಮೇಲೆಕ್ಕೆತ್ತಿದ್ದರೂ, ಅವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿತ್ತು.

Advertisement
Advertisement

ಈ ಕುರಿತು ತುರ್ತು ಸಂದೇಶ ಸ್ವೀಕರಿಸಿದ ಭಾರತೀಯ ಕರಾವಳಿ ಕಾವಲು ಪಡೆಯ ಜಿಲ್ಲಾ ಕೇಂದ್ರ -3 ಕಾರ್ಯಪ್ರವೃತ್ತವಾಯಿತು. ಕೂಡಲೇ ಗಸ್ತು ದೋಣಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಸಮುದ್ರದಲ್ಲಿ ಕತ್ತಲು ಆವರಿಸಿದ್ದರೂ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಕಾರ್ಯಾಚರಣೆ ಮಾಡಿ, ಮೀನುಗಾರಿಕಾ ದೋಣಿಯನ್ನು ಪತ್ತೆ ಹಚ್ಚಿ, ನಂತರ ಅಸ್ವಸ್ಥ ಮೀನುಗಾರನನ್ನು ಗಸ್ತು ದೋಣಿಗೆ ಸ್ಥಳಾಂತರ ಮಾಡಿ ಪ್ರಥಮ ಚಿಕಿತ್ಸೆ ನೀಡಿದರು.

Advertisement

ಅನಂತರ ನವಮಂಗಳೂರು ಬಂದರು ಪ್ರಾಧಿಕಾರದ ಜೆಟ್ಟಿಗೆ ಮೀನುಗಾರನನ್ನು ಕರೆತಂದು ಹೆಚ್ಚಿನ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ತ್ವರಿತ ಸಂದರ್ಭದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಮೀನುಗಾರನ ರಕ್ಷಣೆ ಮಾಡುವಲ್ಲಿ ಯಶಸ್ವಿಗೊಂಡಿದೆ.

Advertisement
Advertisement