ಸೋಮವಾರ, 26 ಅಕ್ಟೋಬರ್ 2026
Trending

Aqua Titan: ಚೀನಾಗೆ ತೆರಳುತ್ತಿದ್ದ ರಷ್ಯಾ ತೈಲ ಟ್ಯಾಂಕರ್‌ ಸಮುದ್ರ ನಡುವೆ ಮಂಗಳೂರಿನ ಕಡೆಗೆ ಯೂಟರ್ನ್‌!!

Advertisement

Aqua Titan: ರಷ್ಯಾದಿಂದ (Russia)ಚೀನಾಕ್ಕೆ (China) ತೆರಳುತ್ತಿದ್ದ ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ಯೂಟರ್ನ್‌ ಹೊಡೆದು ಮಂಗಳೂರಿನತ್ತ ಬರುತ್ತಿದೆ.

Sponsored

ಹೌದು, ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರದ ಬಂದರಿನಿಂದ ಯುರಲ್ಸ್ ಕಚ್ಚಾತೈಲವನ್ನು ಅಕ್ವಾ ಟೈಟಾನ್‌ (Aqua Titan) ಹಡಗಿಗೆ ಲೋಡ್‌ ಮಾಡಿಕೊಂಡು ಚೀನಾಕ್ಕೆ (China) ತೆರಳುತ್ತಿದ್ದ ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ಯೂಟರ್ನ್‌ ಹೊಡೆದು ಮಂಗಳೂರಿನತ್ತ ಬರುತ್ತಿದೆ. ಮಾರ್ಚ್‌ 21 ರಂದು ನವಮಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ.

Advertisement
Advertisement

ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ತೈಲ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಾರ ಭಾರತ ರಷ್ಯಾದಿಂದ 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ. ಹೀಗಾಗಿ ವೋರ್ಟೆಕ್ಸಾ ಲಿಮಿಟೆಡ್ ಪ್ರಕಾರ ರಷ್ಯಾದ ತೈಲವನ್ನು ಹೊತ್ತುಕೊಂಡು ಚೀನಾಗೆ ಸಾಗಿಸುತ್ತಿದ್ದ ಕನಿಷ್ಠ ಏಳು ಟ್ಯಾಂಕರ್‌ಗಳು ಪ್ರಯಾಣ ಮಧ್ಯೆ ಗಮ್ಯಸ್ಥಾನವನ್ನು ಬದಲಾಯಿಸಿ ಭಾರತದತ್ತ ಪ್ರಯಾಣಿಸುತ್ತಿವೆ.

Advertisement
div class="ere-sticky">