ಸೋಮವಾರ, 26 ಅಕ್ಟೋಬರ್ 2026
Trending

LPG: ರಾಜ್ಯದಲ್ಲಿ ಗ್ಯಾಸ್ ವಿತರಣೆಗೆ ಗೈಡ್‌ಲೈನ್ಸ್ ಬಿಡುಗಡೆ – ಹೋಟೆಲ್‌ಗಳಿಗೆ ಬಿಗ್ ಶಾಕ್

Advertisement

LPG: ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಆತಂಕದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಅಭಾವ ಎದುರಾಗಿದೆ. ಹಲವಡೆ ಎಲ್ಪಿಜಿ ಸಿಲಿಂಡರ್ ಸಪ್ಲೈ ಇಲ್ಲದಂತಾಗಿ ಗ್ರಾಹಕರು ಪರದಾಡುವಂತಹ ಸ್ಥಿತಿ ತಲುಪಿದೆ. ಈ ನಡುವೆ ಭಾರತಕ್ಕೆ ಒಂದರ ಹಿಂದೆ ಒಂದು ಎಲ್ಪಿಜಿ ಟ್ಯಾಂಕರ್ ಗಳು ಆಗಮಿಸುತ್ತಿದ್ದು ಎಲ್ಪಿಜಿ ಸಮಸ್ಯೆ ಕೊಂಚ ನೀಗುತ್ತಿದೆ. ಹೀಗಾಗಿ ಗ್ಯಾಸ್ ವಿತರಣೆಗೆ (LPG) ಕರ್ನಾಟಕ ಸರ್ಕಾರದಿಂದ ಗೈಡ್‌ಲೈನ್ಸ್ ಬಿಡುಗಡೆ ಮಾಡಲಾಗಿದೆ.

Sponsored

ಹೌದು, ನಾಳೆಯಿಂದ ಗ್ಯಾಸ್ ವಿತರಣೆಗೆ ಸರ್ಕಾರ ಸೂಚಿಸಿದೆ. ಅಗತ್ಯ ವಲಯಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಪರ್ಸೆಂಟೇಜ್ ಗ್ಯಾಸ್ ವಿತರಿಸಬೇಕೆಂದು ಏಜೆನ್ಸಿ ಕಂಪನಿಗಳಿಗೆ ಸರ್ಕಾರ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಹೀಗಾಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಪ್ರಾಮುಖ್ಯತೆ ನೀಡಿದ್ದು, ಶೇ.100 ಗ್ಯಾಸ್ ವಿತರಣೆಗೆ ಸೂಚನೆ ನೀಡಿದೆ. ಆದರೆ, ಹೋಟೆಲ್‌ಗಳಿಗೆ ಕೇವಲ 10% ಗ್ಯಾಸ್ ವಿತರಣೆಗೆ ಸೂಚಿಸಲಾಗಿದೆ. 

Advertisement
Advertisement

ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಗ್ಯಾಸ್?

* ಆಸ್ಪತ್ರೆ – 100%

* ಶಿಕ್ಷಣ ಸಂಸ್ಥೆಗಳಿಗೆ- 100%

* ಸೀಡ್ ಪ್ರೋಸೆಸಿಂಗ್ – 70%

* ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%

* ಏರ್ ಲೈನ್ಸ್, ರೈಲ್ವೆ – 70%

* ಸೀಡ್ ಪ್ರೋಸೆಸಿಂಗ್ – 70%

* ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%

* ಏರ್‌ಲೈನ್ಸ್, ರೈಲ್ವೆ – 70%

* ಇಂಡಸ್ಟ್ರೀಯಲ್ ಕ್ಯಾಂಟಿನ್ – 10% ಗ್ಯಾಸ್

* ಕಾರ್ಪೋರೇಟ್ ಗೆಸ್ಟ್ ಹೌಸ್ – 10%

* ಫುಡ್ ಪ್ರೋಸೆಸಿಂಗ್ ಕಂಪನಿ – 10%

* ವದ್ಧಾಶ್ರಮಗಳಿಗೆ – 70%

* ಹೋಟೆಲ್ – 10%

Advertisement
div class="ere-sticky">