ಸೋಮವಾರ, 26 ಅಕ್ಟೋಬರ್ 2026
Trending

General Coach: ರೈಲುಗಳಲ್ಲಿ ಜನರಲ್ ಕೋಚ್ ಹಿಂಭಾಗ, ಮುಂಭಾಗದಲ್ಲೇ ಇರುವುದೇಕೆ? ಮಧ್ಯ ಏಕಿರಲ್ಲ?

 

Sponsored

General Coach: ಭಾರತೀಯ ರೈಲುಗಳಲ್ಲಿ ಸ್ಲೀಪರ್ ಕೋಚ್ ಗಳಲ್ಲಿ ಪ್ರಯಾಣಿಕರು ಹೆಚ್ಚಾಗಿ ಪ್ರಯಾಣಿಸಿದರು ಕೂಡ ಬೇಡಿಕೆ ಹೆಚ್ಚಾಗಿರುವುದು ಜನರಲ್ ಕೋಚ್ ಗಳಿಗೆ. ದಿನನಿತ್ಯವೂ ಪ್ರಯಾಣ ಮಾಡುವವರು, ಕೆಲಸ ಕಾರ್ಯಗಳಿಗೆ ತೆರಳುವವರು ಈ ಜನರಲ್ ಕೋಚ್ ಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ. ಆದರೆ ರೈಲುಗಳಲ್ಲಿ ಜನರಲ್ ಕೋಚ್ ಹಿಂಭಾಗ ಮತ್ತು ಮುಂಭಾಗದಲ್ಲಿ ಮಾತ್ರ ಇರುತ್ತದೆ. ಮಧ್ಯದಲ್ಲಿ ಸ್ಲೀಪರ್ಗಳು ಇರುತ್ತದೆ. ಯಾಕೆ ಹೀಗೆ?

Advertisement
Advertisement

ಯಸ್, ರೈಲಿನಲ್ಲಿ ಜನರಲ್ ಕೋಚ್ ಯಾವಾಗಲೂ ರೈಲಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಇರುತ್ತದೆ ಯಾಕೆ? ಎಂದು ನೀವೇನಾದರೂ ಯೋಚಿಸಿದ್ದಲ್ಲಿ ಅದಕ್ಕೆ ಇಲ್ಲಿದೆ ನೋಡಿ ಉತ್ತರ. ಜನರಲ್‌ ಬೋರ್ಡಿಂಗ್ ಮಧ್ಯದಲ್ಲಿದ್ದರೆ, ದಟ್ಟಣೆಯಿಂದಾಗಿ ಕಾಯ್ದಿರಿಸಿದ ಬೋರ್ಡಿಂಗ್ ವಿಭಾಗದ ಪ್ರಯಾಣಿಕರಿಗೆ ಮತ್ತು ರೈಲ್ವೆ ಸಿಬ್ಬಂದಿಗೆ ಬೋರ್ಡಿಂಗ್ ಅಥವಾ ಇಳಿಯುವಾಗ ಅಡಚಣೆ ಉಂಟಾಗಬಹುದು. ಬೋರ್ಡಿಂಗ್ ಕೊನೆಯಲ್ಲಿರುವುದರಿಂದ ಈ ವ್ಯವಸ್ಥೆ ಸುಗಮವಾಗಿರುತ್ತದೆ.

ಮತ್ತೊಂದು ಕಾರಣವೆಂದರೆ ಜನರಲ್ ಕೋಚ್‌ಗಳನ್ನು ರೈಲಿನ ಮಧ್ಯದಲ್ಲಿ ಇರಿಸಿದರೆ, ಹೆಚ್ಚುವರಿ ತೂಕವು ಇಡೀ ರೈಲಿನ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಕೋಚ್‌ಗಳು ಇರುವುದರಿಂದ, ತೂಕವು ಸಮಾನವಾಗಿ ಸಮತೋಲನದಲ್ಲಿರುತ್ತದೆ. ಇದು ರೈಲು ಸುರಕ್ಷಿತವಾಗಿ ಚಲಿಸುವಂತೆ ಮಾಡುತ್ತದೆ. ಜನರಲ್‌ ವಿಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಈ ವಿಭಾಗಗಳು ಎರಡೂ ತುದಿಗಳಲ್ಲಿ ವಿಂಗಡಿಸಲ್ಪಟ್ಟಿರುವುದರಿಂದ, ಒಂದೇ ಸ್ಥಳದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಜನಸಂದಣಿ ಇರುವುದಿಲ್ಲ. ಪ್ಲಾಟ್‌ಫಾರ್ಮ್‌ನ ಮಧ್ಯದಲ್ಲಿ ತೂಕ ಕಡಿಮೆ ಇರುವುದರಿಂದ ರೈಲಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇದು ಇತರ ಪ್ರಯಾಣಿಕರಿಗೆ ಹತ್ತಲು ಮತ್ತು ಇಳಿಯಲು ಸುಲಭವಾಗುತ್ತದೆ.

ಅಲ್ಲದೆ ಗಾರ್ಡ್ ಕಣ್ಗಾವಲು ಸಲುವಾಗಿ ರೈಲಿನ ಕೊನೆಯಲ್ಲಿ ಜನರಲ್‌ ವಿಭಾಗದ ಉಪಸ್ಥಿತಿಯು ಗಾರ್ಡ್‌ಗೆ ಇಡೀ ರೈಲನ್ನು ಮತ್ತು ಪ್ರಯಾಣಿಕರ ಚಲನವಲನಗಳನ್ನು ಗಮನಿಸಲು ಸುಲಭಗೊಳಿಸುತ್ತದೆ. ಇದು ತುರ್ತು ಸಂದರ್ಭಗಳಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ

Advertisement