ಮಂಗಳವಾರ, 27 ಅಕ್ಟೋಬರ್ 2026
Trending

Petrol : ಪೆಟ್ರೋಲಿಯಂ ಸಪ್ಲೈ ಸಡನ್ ನಿಂತರೆ ಭಾರತದಲ್ಲಿ ಎಷ್ಟು ದಿನಗಳಿಗಾಗುವಷ್ಟು ಪೆಟ್ರೋಲ್ ಸಂಗ್ರಹವಿರುತ್ತೆ?

CREATOR: gd-jpeg v1.0 (using IJG JPEG v62), default quality?

Petrol : ಭಾರತವು ಅಮೆರಿಕಾದೊಂದಿಗೆ ತೈಲ ಒಪ್ಪಂದವನ್ನು ಮಾಡಿಕೊಂಡ ಬಳಿಕ ಪೆಟ್ರೋಲಿಯಂ ಸಂಗ್ರಹದ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. ವಿಶ್ವದಲ್ಲಿ ಅತಿಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನ ಪಡೆಯುತ್ತದೆ. ಅತಿಹೆಚ್ಚು ಕಚ್ಚಾ ತೈಲ ಸಂಸ್ಕರಿಸುವ ನಾಲ್ಕನೇ ದೇಶ ಭಾರತವಾಗಿದೆ. ಇದೆಲ್ಲದರ ಹೊರತಾಗಿಯೂ ಒಂದು ವೇಳೆ ಭಾರತಕ್ಕೆ ದಿಡೀರ್ ಎಂದು ಪೆಟ್ರೋಲ್ ಸಪ್ಲೈ ನಿಂತು ಹೋದರೆ, ಭಾರತದಲ್ಲಿ ಎಷ್ಟು ದಿನಗಳಿಗಾಗುವಷ್ಟು ಪೆಟ್ರೋಲ್ ಸಂಗ್ರಹ ಇರುತ್ತದೆ ಎಂಬುದು ಗೊತ್ತೇ?

Sponsored

ಭಾರತದಲ್ಲಿ ಪೆಟ್ರೋಲಿಯಂ ಸಂಗ್ರಹ (Strategic Petroleum Reserves) ಎಷ್ಟಿದೆ? ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರ್ದೀಪ್ ಸಿಂಗ್ ಪುರಿ (Hardeep Singh Puri) ಸೋಮವಾರ ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಅವರ ಪ್ರಕಾರ ಭಾರತದಲ್ಲಿ ಸುಮಾರು 74 ದಿನಗಳಿಗೆ ಆಗುವಷ್ಟು ಪೆಟ್ರೋಲ್ ಅನ್ನು ಸಂಗ್ರಹಿಸಿ ಇಡಲಾಗುತ್ತದೆ.

Advertisement
Advertisement

ಯಸ್,  ಭಾರತದಲ್ಲಿ ಒಟ್ಟು 5.33 ಮಿಲಿಯನ್ ಮೆಟ್ರಿಕ್ ಟನ್​ಗಳಷ್ಟು (ಎಂಎಂಟಿ) ಕಚ್ಚಾ ತೈಲ ಸಂಗ್ರಹ ಇದೆ. ಕರ್ನಾಟಕ ಮತ್ತು ಆಂಧ್ರದಲ್ಲಿ ಮೂರು ಸ್ಥಳಗಳಲ್ಲಿ ಪೆಟ್ರೋಲಿಯಂ ಸಂಗ್ರಹ ಇದೆ. ಕರ್ನಾಟಕದಲ್ಲಿ ಮಂಗಳೂರು ಹಾಗೂ ಉಡುಪಿಯಲ್ಲಿ ತೈಲ ಸಂಗ್ರಹ ಇರಿಸಲಾಗಿದೆ. ಈ ಮೂರು ಕಡೆಯಲ್ಲಿ ಕಚ್ಚಾ ತೈಲ ಸಂಸ್ಕರಣೆ ಮಾಡಿ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಈ ತೈಲ ಸಂಗ್ರಹವು 74 ದಿನಗಳ ಬಳಕೆಗೆ ಆಗುವಷ್ಟು ಇದೆ. ಎಂದಿದ್ದಾರೆ.

ಯೂರೋಪ್ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು 90 ದಿನಗಳಿಗಾಗುವಷ್ಟು ಪೆಟ್ರೋಲಿಯಂ ಸಂಗ್ರಹದ ಗುರಿ ಹೊಂದಿವೆ. ಅಕಸ್ಮಾತ್ ಜಾಗತಿಕ ಪ್ರಕ್ಷುಬ್ದತೆಯ ಪರಿಸ್ಥಿತಿ ಬಂದು ತೈಲ ಪೂರೈಕೆ ಸ್ಥಗಿತಗೊಂಡರೆ ಕನಿಷ್ಠ 90 ದಿನಗಳಿಗಾಗುವಷ್ಟಾದರೂ ಪೆಟ್ರೋಲ್ ಲಭ್ಯ ಇರಬೇಕು ಎನ್ನುವುದು ಈ ಗುರಿಯ ಉದ್ದೇಶ.ಮುಂಬರುವ ವರ್ಷಗಳಲ್ಲಿ ಪೆಟ್ರೋಲ್ ಸಂಗ್ರಹವನ್ನು 90 ದಿನಗಳ ಬಳಕೆಗೆ ಆಗುವಷ್ಟು ಹೆಚ್ಚಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಇನ್ನೂ ಪ್ರತೀ ವರ್ಷ 260 ಎಂಎಂಟಿಯಷ್ಟು ತೈಲ ಸಂಸ್ಕರಣೆ ಮಾಡಲಾಗುತ್ತಿದೆ. ಹೀಗೆ ಸಂಸ್ಕರಣೆ ಮಾಡಿ ತಯಾರಿಸಲಾದ ಪೆಟ್ರೋಲಿಯಂ ಉತ್ಪನ್ನಗಳನ್ನು ದೇಶೀಯ ಬಳಕೆಗೂ ಹಾಗೂ ರಫ್ತಿಗೂ ಉಪಯೋಗಿಸಲಾಗುತ್ತದೆ. ಈ ರೀತಿಯಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಅತಿಹೆಚ್ಚು ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಪಡೆಯುತ್ತದೆ.

Advertisement