ಸೋಮವಾರ, 26 ಅಕ್ಟೋಬರ್ 2026
Trending

Ringworm: ಎಚ್ಚರ..! ಯುನೈಟೆಡ್ ಸ್ಟೇಟ್ಸ್ನಲ್ಲಿ ಇಬ್ಬರು ವ್ಯಕ್ತಿಗಳಿಗೆ ಸಾಂಕ್ರಾಮಿಕ ರಿಂಗ್ವರ್ಮ್ ರೋಗ ಪತ್ತೆ, ನಿರ್ಲಕ್ಷ್ಯಿಸದಿರಿ

Ringworm :ಯುನೈಟೆಡ್ ಸ್ಟೇಟ್ಸ್ನಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಸಾಂಕ್ರಾಮಿಕವಾಗಿ ಹರಡುವ ರಿಂಗ್ವರ್ಮ್ ಅಥವಾ ಟಿನಿಯಾ ಎಂಬ ಶಿಲೀಂಧ್ರ ರೋಗವು ದೃಢಪಟ್ಟಿದೆ.

Ringworm

Ringworm: ನವದೆಹಲಿ : ಯುನೈಟೆಡ್ ಸ್ಟೇಟ್ಸ್ನಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಸಾಂಕ್ರಾಮಿಕವಾಗಿ ಹರಡುವ ರಿಂಗ್ವರ್ಮ್ (Ringworm) ಅಥವಾ ಟಿನಿಯಾ ಎಂಬ ಶಿಲೀಂಧ್ರ ರೋಗವು ದೃಢಪಟ್ಟಿದ್ದು, 28 ಮತ್ತು 47 ವರ್ಷ ವಯಸ್ಸಿನ ಇಬ್ಬರು ಮಹಿಳೆಯರಲ್ಲಿ ಕಾಣಿಸಿಕೊಂಡಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿ ಮಾಡಿದೆ.

Sponsored

ರಿಂಗ್ವರ್ಮ್ ಎಂಬ ಸಾಂಕ್ರಾಮಿಕ ರೋಗವೂ ಚರ್ಮದ ಮೇಲೆ ಪರಿಣಾಮ ಬೀರುವ ಶಿಲೀಂಧ್ರ ಸೋಂಕು ಸಾಂಕ್ರಾಮಿಕ ರೋಗವಾಗುವ ಸಾಧ್ಯತೆಯಿದೆ ಮತ್ತು ಜಗತ್ತು ಈ ರೋಗವನ್ನು ಎದುರಿಸಲು ಸಿದ್ಧವಾಗಿಲ್ಲ ಎಂದು ಸಿಡಿಸಿಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ರಿಂಗ್ ವರ್ಮ್ ಎಂಬುದು ದುಂಡಗಿನ ತುರಿಕೆ ಕಾಣಿಸುತ್ತದೆ, ಇದು ಶಿಲೀಂಧ್ರಗಳಿಂದಾಗಿ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ.

Advertisement
Advertisement

ಸಿಡಿಸಿ ಪ್ರಕಾರ, ಸೋಂಕಿತ ಮಹಿಳೆಯರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ತುರಿಕೆ ಮತ್ತು ಕೊಬ್ಬಿನಿಂದ ಬಳಲುತ್ತಿದ್ದರು. ಕುತ್ತಿಗೆ, ಪೃಷ್ಠ, ತೊಡೆಗಳು ಮತ್ತು ಕಿಬ್ಬೊಟ್ಟೆಯ ಮೇಲೆ ಗಾಯಗಳು ಕಾಣಿಸಿಕೊಂಡವು. ಈ ಇಬ್ಬರು ರೋಗಿಗಳ ಕುಟುಂಬ ಸದಸ್ಯರಲ್ಲಿ ಕೂಡ ಈ ರೋಗ ಕಾಣಿಸಿಕೊಳ್ಳುತ್ತಿದೆ

ತುರಿಕೆ, ದುಂಡಗಿನ ದದ್ದುಗಳು, ಚರ್ಮದ ಕೆಂಪಾಗುವುದು ಮತ್ತು ಕೂದಲು ಉದುರುವುದು ರಿಂಗ್ ವರ್ಮ್ ನ ಕೆಲವು ಲಕ್ಷಣಗಳಾಗಿವೆ. ನಿಕಟ ಸಂಪರ್ಕದಿಂದ ಈ ಸೋಂಕು ಹರಡುತ್ತದೆ. ಅಧಿಕಾರಿಗಳ ಪ್ರಕಾರ, ಇದು ಚರ್ಮದ ಮೇಲೆ ದೀರ್ಘಕಾಲ ಉಳಿಯಬಹುದು.

ಸೂಚನೆ: ಮೇಲಿನ ರೋಗಲಕ್ಷಣಗಳನ್ನು ನೀವು ನೋಡಿದರೆ, ನಿ ವೈದ್ಯರನ್ನು ‘ಸಂಪರ್ಕಿಸಬೇಕು’. ಇದರ ನಂತರವೇ ರೋಗವನ್ನು ದೃಢಪಡಿಸಿ.

ಇದನ್ನೂ ಓದಿ: ಬ್ಯಾಂಕ್‌ ಗ್ರಾಹಕರೇ ಗಮನಿಸಿ: ಜೂನ್ ತಿಂಗಳಲ್ಲಿ 12 ದಿನ ರಜೆ : ಇಲ್ಲಿದೆ ಡಿಟೇಲ್ಸ್‌

Advertisement