ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿ, ವೃದ್ಧನ ಮೇಲೆ ಭೀಕರ ದಾಳಿ
ಬೆಳಗಾವಿ, ಆ.17: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ವಯೋವೃದ್ಧರೊಬ್ಬರ ಮೇಲೆ ನಾಯಿ ಭೀಕರವಾಗಿ ದಾಳಿ ಮಾಡಿರುವ ಘಟನೆ ಮಹಾಂತೇಶ ನಗರದ ಮುಖ್ಯ ರಸ್ತೆಯಲ್ಲಿ ನಡೆದಿದೆ. ನಾಯಿಯೊಂದಿಗೆ ಸೆಣಸಾಡಿ ವೃದ್ಧರು ಪ್ರಾಣಾಪಾಯದಿಂದ ಪಾರಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Sponsoredಭಾನುವಾರ ಬೆಳಗ್ಗೆ ವಯೋವೃದ್ಧರೊಬ್ಬರು ತಮ್ಮ ಪಾಡಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿ ದಾಳಿ ಮಾಡಿದೆ. ನಾಯಿಯ ದಾಳಿಯಿಂದ ನೆಲಕ್ಕೆ ಬಿದ್ದ ವೃದ್ಧರ ಮೇಲೆ ಮನಬಂದಂತೆ ಕಚ್ಚಲು ಮುಂದಾಗಿದೆ. ಕೊನೆಗೆ ಧೈರ್ಯದಿಂದ ನಾಯಿಯೊಂದಿಗೆ ಸೆಣಸಾಡಿದ ವೃದ್ಧರು ಅದನ್ನು ಒದ್ದಿದ್ದು, ನಾಯಿ ಅಲ್ಲಿಂದ ಓಡಿ ಹೋಗಿದೆ. ಈ ಕುರಿತ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.



