ಮಂಗಳವಾರ, 27 ಅಕ್ಟೋಬರ್ 2026
Trending

Avatar 2 on OTT date Fixed: ಈ ಒಟಿಟಿಗಳಲ್ಲಿ ಅವತಾರ್​ – 2 ಚಿತ್ರ ವೀಕ್ಷಣೆಗೆ ಲಭ್ಯ, ರಿಲೀಸ್ ದಿನಾಂಕ ಗಮನಿಸಿ !

ಅವತಾರ್‌ 2 ಚಿತ್ರವನ್ನು ಈಗ ಮನೆಯಲ್ಲಿಯೇ ನೋಡಬಹುದು. ಈ ಚಿತ್ರ ಇದೀಗ ಒಟಿಟಿಗೆ ಬರಲು ವೇದಿಕೆ ತಯಾರಾಗಿದೆ.

Avatar 2 on OTT date Fixed: ಇಡೀ ವಿಶ್ವದ ಸಿನಿಮಾ ಪ್ರೇಮಿಗಳ ನಿದ್ದೆಗೆಡಿಸಿದ್ದ ಅವತಾರ್: ದಿ ವೇ ಆಫ್ ವಾಟರ್ (Avatar 2, The way of Water) ಚಿತ್ರ ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯ ಭಾಗ್ಯ ಕಂಡಿತ್ತು. ಆನಂತರ ಚಿತ್ರವು ಆಕಾಶ ನೌಕೆಯ ಥರ ಓಡಿತ್ತು. ಅದು ಡಿಸೆಂಬರ್‌ 16 ರಂದು ಬಿಡುಗಡೆ ಆಗಿದ ತಕ್ಷಣ ಕೋಟಿ ಕೋಟಿ ಹಣವನ್ನೂ ಬಾಚಿಕೊಂಡಿತ್ತು. ಚಿತ್ರಮಂದಿರದಲ್ಲಿ 3 D ಯಲ್ಲಿ ಬಿಡುಗಡೆ ಆಗಿದ್ದ ಅವತಾರ್‌ 2 (Avatar 2 on OTT) ಚಿತ್ರವನ್ನು ಈಗ ಮನೆಯಲ್ಲಿಯೇ ನೋಡಬಹುದು. ಈ ಚಿತ್ರ ಇದೀಗ ಒಟಿಟಿಗೆ ಬರಲು ವೇದಿಕೆ ತಯಾರಾಗಿದೆ.

Sponsored

ಎಲ್ಲಾ ಚಿತ್ರಮಂದಿರದಲ್ಲಿ 3D ಯಲ್ಲಿ ಬಿಡುಗಡೆ ಆಗಿದ್ದ ಈ ಚಿತ್ರವನ್ನು ಕಪ್ಪು ಕನ್ನಡಕದ ಒಳಗೆ ಕುಳಿತು ಜಗತ್ತು ವೀಕ್ಷಿಸಿತ್ತು. ಈಗ ಮನೆಯಲ್ಲಿಯೇ ಕೂತು ಈ ಚಿತ್ರವನ್ನು ನೋಡಬಹುದು. ಹಾಗಾದ್ರೆ ಯಾವಾಗ ಈ ಚಿತ್ರ ಡಿಜಿ ಪ್ಲಾಟ್ ಫಾರ್ಮ್ ಗೆ ಬರಲಿದೆ? ಎಲಿ ಪ್ರಸಾರಾ ಆಗಲಿದೆ ಎನ್ನುವುದೇ ಸದ್ಯದ ಕುತೂಹಲ. ಈಗ ಲಭ್ಯ ಅಧಿಕೃತ ಮಾಹಿತಿಗಳ ಪ್ರಕಾರ ಇದೇ ತಿಂಗಳ ಮಾ. 28 ರಂದು ಅವತಾರ್: ದಿ ವೇ ಆಫ್ ವಾಟರ್ ಚಿತ್ರ ಸ್ಟ್ರೀಮಿಂಗ್‌ ಆರಂಭಿಸಲಿದೆ ಎನ್ನುವ ಮಾಹಿತಿ ಲಭ್ಯ ಆಗಿದೆ.

Advertisement
Advertisement

ಯಾವ ಒಟಿಟಿಯಲ್ಲಿ ಪ್ರತ್ಯಕ್ಷ ಆಗಲಿದೆ ಅವತಾರ್ ?
ಈಗ ಈ ಪ್ರಶ್ನೆಗೂ ಇದಕ್ಕೂ ಉತ್ತರ ದೊರಕಿದೆ. ಈ ಚುತ್ರವು ಸಾಮಾನ್ಯ ಚಿತ್ರಗಳಂತೆ ಒಂದೇ ಒಟಿಟಿಯಲ್ಲಿ ರಿಲೀಸ್‌ ಆಗುವ ಬದಲು ಹಲವು ಒಟಿಟಿಗಳಲ್ಲಿ ಏಕಕಾಲದಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈಗಾಗಲೇ ಅಮೆಜಾನ್‌ ಪ್ರೈಮ್ ವಿಡಿಯೋ, ಆಪಲ್ ಟಿವಿ, ಮೂವೀಸ್ ಎನಿವೇರ್‌ ಮತ್ತು ವುಡು ಒಟಿಟಿಗಳು ಚಿತ್ರದ ಡಿಜಿಟಲ್‌ ಹಕ್ಕುಗಳನ್ನು ಖರೀದಿಸಿದ್ದು, ಚಿತ್ರವನ್ನು ಅಲ್ಲಿಯೇ ವೀಕ್ಷಿಸಬಹುದಾಗಿದೆ. ಇಲ್ಲಿರುವ ಇನ್ನೊಂದು ವಿಶೇಷವೆಂದರೆ ಈ ಚಿತ್ರವು 4 K ಅಲ್ಟ್ರಾ HD ಗುಣಮಟ್ಟದಲ್ಲಿ ಡಾಲ್ಬಿ ಅಟ್ಮಾಸ್ ಆಡಿಯೋದೊಂದಿಗೆ ಲಭ್ಯವಿರುತ್ತದೆ. ಆದ್ದರಿಂದ ಸಿನಿಮಾವನ್ನು ಥಿಯೇಟರಿನಲ್ಲಿ ನೋಡಿದ ಅನುಭವಕ್ಕೆ ಸಮನಾದ ಖುಷಿಯನ್ನು ಚಿತ್ರವು ನೀಡಲಿದೆ.

ಆದರೆ ನೀವು ಈಗಾಗಲೇ ಅಮೆಜಾನ್‌ ಪ್ರೈಂ ಮೆಂಬರ್‌ಶಿಪ್‌ ಹೊಂದಿದ್ದರೆ, ನೇರವಾಗಿ ಅಲ್ಲಿ ಈ ಸಿನಿಮಾ ಲಭ್ಯವಾಗುವುದಿಲ್ಲ. ಬದಲಿಗೆ ರೆಂಟಲ್‌ ಮೂಲಕ ಸಿನಿಮಾ ವೀಕ್ಷಣೆ ಮಾಡಬಹುದು ಎನ್ನಲಾಗಿದೆ. ಈ ವಿಚಾರವನ್ನು ಹಕ್ಕು ಪಡೆದ ಒಟಿಟಿ ಸಂಸ್ಥೆ ಹೇಳಿಕೊಂಡಿಲ್ಲವಾದರೂ, ಬಿಡುಗಡೆ ಸನಿಹ ಬರುತ್ತಿದ್ದಂತೆ ಈ ವಿಚಾರವನ್ನು ಘೋಷಿಸಲಿದೆ ಎನ್ನುತ್ತಿದೆ ಓಟಿಟಿ ವಲಯಗಳು.

ಸಿನಿ ಮಾಂತ್ರಿಕ ಜೇಮ್ಸ್‌ ಕ್ಯಾಮರಾನ್‌ ಮೂಡಿಬಂದ ಈ ಸಿನಿಮಾ ಕೇವಲ ಇಂಗ್ಲಿಷ್‌ ಮಾತ್ರವಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಡಬ್‌ ಆಗಿ ಬಿಡುಗಡೆ ಆಗಿತ್ತು. ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಡಬ್ ಆಗಿ ಒಟ್ಟಾರೆ 18,683 ಕೋತಿ ರೂಪಾಯಿಗಳನ್ನು ಈ ಚಿತ್ರ ಬಾಚಿಕೊಂಡಿತ್ತು. ಭಾರತದಲ್ಲಿಯೇ ಈ ಚಿತ್ರವು 473 ಕೋಟಿಗಳಷ್ಟು ಹಣವನ್ನುಗುಡ್ಡೆ ಹಾಕಿತ್ತು. ಚಿತ್ರದಲ್ಲಿ ಕೇಟ್ ವಿನ್ಸ್ಲೆಟ್, ಸ್ಯಾಮ್ ವರ್ತಿಂಗ್ಟನ್, ಜೊಯ್ ಸಲ್ಡಾನಾ, ಸಿಗೌರ್ನಿ ವೀವರ್ ಮತ್ತು ಸ್ಟೀಫನ್ ಲ್ಯಾಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement