SBI ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಇದ್ದರೆ, ಈ ಹೊಸ ಸೇವೆಗಳ ಬಗ್ಗೆ ಇಲ್ಲಿದೆ ಮಾಹಿತಿ!
ವಿಶ್ವಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ (Messaging Platform) ವಾಟ್ಸಪ್ (WhatsApp) ಇದೀಗ ತನ್ನ ಬಳಕೆದಾರರಿಗೆ ಹೊಸ ಫೀಚರ್ (feature) ಅನ್ನು ಪರಿಚಯಿಸಿದೆ.
SBI Account: SBI ಗ್ರಾಹಕರೇ, ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಇನ್ಮುಂದೆ SBI ನಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವವರು ತಮ್ಮ ಅಕೌಂಟ್ನ ಸಂಪೂರ್ಣ ಮಾಹಿತಿಯನ್ನು ವಾಟ್ಸಾಪ್ನಲ್ಲೇ ನೋಡಬಹುದು. ಹೇಗೆ ಅಂತೀರಾ? ವಿಶ್ವಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ (Messaging Platform) ವಾಟ್ಸಪ್ (WhatsApp) ಇದೀಗ ತನ್ನ ಬಳಕೆದಾರರಿಗೆ ಹೊಸ ಫೀಚರ್ (feature) ಅನ್ನು ಪರಿಚಯಿಸಿದೆ. ಈ ಫೀಚರ್ ನಿಂದಾಗಿ ಇನ್ಮುಂದೆ ಎಸ್ಬಿಐ ಅಕೌಂಟ್ (SBI Account) ಹೊಂದಿರುವವರು ತಮ್ಮ ಅಕೌಂಟ್ನ ಸಂಪೂರ್ಣ ಮಾಹಿತಿಯನ್ನು ವಾಟ್ಸಾಪ್ನಲ್ಲೇ ನೋಡಬಹುದು.
Sponsoredಭಾರತೀಯ ಸ್ಟೇಟ್ ಬ್ಯಾಂಕ್ (SBI) ಹಾಗೂ ವಾಟ್ಸಾಪ್ ಒಟ್ಟಾಗಿ ವಾಟ್ಸಾಪ್ ಬ್ಯಾಂಕಿಂಗ್ ಸರ್ವೀಸ್ ಅನ್ನು ಪ್ರಾರಂಭಿಸಿದೆ. ಈ ಹೊಸ ಫೀಚರ್ ಬಗ್ಗೆ ಎಸ್ಬಿಐ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, “SBI ಗ್ರಾಹಕರು ಇನ್ಮುಂದೆ ವಾಟ್ಸ್ಆ್ಯಪ್ ಮೂಲಕ ಖಾತೆಯ ಹಣ ಮತ್ತು ಮಿನಿ ಸ್ಟೇಟ್ಮೆಂಟ್ ಅನ್ನು ಪಡೆಯಬಹುದು” ಎಂದು ಹೇಳಿದೆ.
ವಾಟ್ಸಪ್ ನಲ್ಲಿ ಅಕೌಂಟ್ನಲ್ಲಿನ ಹಣ ಚೆಕ್ ಮಾಡೋದು ಹೇಗೆ?
• ವಾಟ್ಸಾಪ್ನಲ್ಲಿ ಹಣ ಚೆಕ್ ಮಾಡಲು, ನೀವು ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು.
• ನೋಂದಾವಣೆಗೆ ನೀವು ಬ್ಯಾಂಕ್ಗೆ (bank) ಯಾವ ಮೊಬೈಲ್ (mobile) ನಂಬರ್ ನೀಡಿರುತ್ತೀರಾ ಆ ಮೊಬೈಲ್ ಸಂಖ್ಯೆಯಿಂದ 917208933148 ಗೆ “SMS WAREG A/c No” ಈ ರೀತಿ ಟೈಪ್ ಮಾಡಿ ಕಳುಹಿಸಬೇಕು.
• ನಂತರ ಅಲ್ಲಿ ಅಕೌಂಟ್ ಬ್ಯಾಲೆನ್ಸ್, ಮಿನಿ ಸ್ಟೇಟ್ಮೆಂಟ್, ವಾಟ್ಸಾಪ್ ಬ್ಯಾಂಕಿಂಗ್ನಿಂದ ಡಿ–ರಿಜಿಸ್ಟರ್ ಮಾಡಿ ಎಂಬ ಆಯ್ಕೆಗಳು ಇರುತ್ತದೆ.
• ನಿಮಗೆ ಅಕೌಂಟ್ ಬ್ಯಾಲೆನ್ಸ್ ತಿಳಿದುಕೊಳ್ಳಬೇಕೆಂದಾದರೆ
ಒಂದನ್ನು ಟೈಪ್ ಮಾಡಿ ಸೆಂಡ್ ಮಾಡಿ. ಆಗ ನಿಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದರ ಮಾಹಿತಿ ಲಭ್ಯವಾಗುತ್ತದೆ.
ಇದನ್ನೂ ಓದಿ : ಆಂಟಿ ಪ್ರೀತ್ಸೇ! 19 ರ ಯುವಕನೊಂದಿಗೆ ಮಹಿಳೆಯೋರ್ವಳ ಲವ್




