ಬುಧವಾರ, 4 ನವೆಂಬರ್ 2026

ಸೋನಂ ವಾಂಗ್ಚುಕ್‌ ಶಾಲೆಯ ಚಟುವಟಿಕೆ ಸ್ಥಗಿತ- ಲಡಾಖ್‌ ಆಡಳಿತ ಆದೇಶ

Advertisement
Advertisement

ಲಡಾಕ್ ಆಡಳಿತವು ಖ್ಯಾತ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಅಧಿಕೃತ ಆದೇಶ ನೀಡಿದೆ.

Sponsored

ಸೋನಮ್ ವಾಂಗ್ಚುಕ್ ಸ್ಥಾಪಿಸಿರುವ ‘ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ ಲಡಾಕ್’ ಸಂಸ್ಥೆಯ ಅಡಿಯಲ್ಲಿ ಲೇಹ್‌ನ ಫಿಯಾಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡೆಸರ್ಟ್ ಫ್ಲವರ್ ಸ್ಕೂಲ್’ ಚಟುವಟಿಕೆಗಳನ್ನು ನಿಲ್ಲಿಸಲು ಸೂಚಿಸಲಾಗಿದೆ.
​
ಲೇಹ್‌ನ ತಹಶೀಲ್ದಾರ್ ಕಚೇರಿಯು ನವೆಂಬರ್ 1 ರಂದು ಈ ನೋಟೀಸ್/ಆದೇಶವನ್ನು ಹೊರಡಿಸಿದೆ. ಇದನ್ನು HIAL ನ ಸಹ-ಸಂಸ್ಥಾಪಕಿ ಮತ್ತು CEO ಆಗಿರುವ ಗೀತಾಂಜಲಿ ಜೆ. ಅಂಗಮೋ ಅವರಿಗೆ ತಲುಪಿಸಲಾಗಿದೆ.
​ಕಾರಣವೇನು? ಸಂಬಂಧಪಟ್ಟ ಅಧಿಕೃತ ಪ್ರಾಧಿಕಾರಗಳಿಂದ ಯಾವುದೇ ಪೂರ್ವಾನುಮತಿ, ಕಾನೂನುಬದ್ಧ ಒಪ್ಪಿಗೆ ಅಥವಾ ಅನುಮೋದನೆಗಳನ್ನು ಪಡೆಯದೆ ಶಾಲೆಯಲ್ಲಿ ತರಗತಿಗಳು ಹಾಗೂ ಇತ್ತೀಚಿನ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Advertisement
Advertisement

ಈ ಭೂಮಿ ಮತ್ತು ಸಂಸ್ಥೆಗೆ ಸಂಬಂಧಿಸಿದ ವಿವಾದದ ಪ್ರಕರಣವು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಹೈಕೋರ್ಟ್‌ನ ಅಂತಿಮ ತೀರ್ಪು ಬರುವವರೆಗೆ ಅಥವಾ ಮುಂದಿನ ಆದೇಶದವರೆಗೆ ಶಾಲೆಯ ಯಾವುದೇ ಚಟುವಟಿಕೆಗಳನ್ನು ಮುಂದುವರಿಸದಂತೆ ಈ ಆದೇಶದಲ್ಲಿ ನಿರ್ಬಂಧಿಸಲಾಗಿದೆ. ​ಆಡಳಿತದ ಈ ಕ್ರಮವು ಲಡಾಕ್‌ನಲ್ಲಿ ರಾಜಕೀಯ ಹಾಗೂ ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement
Advertisement
Advertisement