ಸೋಮವಾರ, 26 ಅಕ್ಟೋಬರ್ 2026
Trending

Personal Finance: ಮೇ.1 ರಿಂದ ಆಗಲಿದೆ ಹಲವು ಹಣಕಾಸು ನಿಯಮಗಳಲ್ಲಿ ಬದಲಾವಣೆ, ಆಗುತ್ತಾ ಗ್ಯಾಸ್ ಸಿಲಿಂಡರ್ ದರದಲ್ಲಿ ಕಡಿತ ?!

ಹಣಕಾಸು (personal finance) ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಹಾಗಿದ್ದಾಗ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆಯಾಗುತ್ತಾ?

Personal Finance
Image source: Dialabank

Personal Finance: ಏಪ್ರಿಲ್ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (LPG cylinder) ದರವನ್ನು ಇಳಿಕೆ ಮಾಡಲಾಗಿದೆ. ಇನ್ನು ಮೇ.1 ರಿಂದ ಹಲವು ಹಣಕಾಸು (personal finance) ನಿಯಮಗಳಲ್ಲಿ ಬದಲಾವಣೆ ಆಗಲಿದೆ. ಹಾಗಿದ್ದಾಗ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ದರದಲ್ಲಿ ಇಳಿಕೆಯಾಗುತ್ತಾ? ಮೇ ತಿಂಗಳಿನಲ್ಲಿ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

Sponsored

ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ, ಸಿಎನ್‌ಜಿ (CNG) ಹಾಗೂ ಪಿಎನ್‌ಜಿ ಗ್ಯಾಸ್ (PNG gas) ದರದಲ್ಲಿ ಬದಲಾವಣೆ ಆಗುತ್ತದೆ. ಕಳೆದ ತಿಂಗಳು ಎಲ್‌ಪಿಜಿ ಸಿಲಿಂಡರ್ ದರವನ್ನು ಏರಿಕೆ ಮಾಡಿಲ್ಲ. ವಾಣಿಜ್ಯ ಸಿಲಿಂಡರ್ ದರದಲ್ಲಿ ಏರಿಕೆ ಮಾಡಲಾಗಿದೆ. ಆದರೆ ಈ ಬಾರಿ ಹಬ್ಬಗಳ ನಿಮಿತ್ತ ಎಲ್‌ಪಿಜಿ ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

Advertisement
Advertisement

ಪಂಜಾಬ್ ನ್ಯಾಷನಲ್ ಬ್ಯಾಂಕ್ ನ (Punjab national bank) ಸಾರ್ವಜನಿಕ ಸಾಲದಾತ (ಪಿಎನ್‌ಬಿ) ಖಾತೆಯಲ್ಲಿ ಹಣವಿಲ್ಲದೆ ಎಟಿಎಂ ವಹಿವಾಟು ವಿಫಲವಾದರೆ ವಹಿವಾಟಿನ ಮೇಲೆ ರೂ 10+ ಜಿಎಸ್‌ಟಿ ವಿಧಿಸಲಾಗುತ್ತದೆ. ಪ್ರಿಪೇಡ್ ಕಾರ್ಡ್ ಶುಲ್ಕ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಡೆಬಿಟ್ ಕಾರ್ಡ್ (debit card), ವಾರ್ಷಿಕ ನಿಯಂತ್ರಣ ಶುಲ್ಕವನ್ನು ಬದಲಾವಣೆ ಮಾಡಿದೆ.

ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್ (mutual fund) ಕಂಪನಿಗಳು ಕೆವೈಸಿ ಮಾಡಿದ ಇ-ವ್ಯಾಲೆಟ್‌ಗಳಿಂದ ಹಣವನ್ನು ಸ್ವೀಕರಿಸುವುದನ್ನು ಖಚಿತಪಡಿಸಿಕೊಳ್ಳಲು ಕೇಳಿದೆ. ಯಾಕೆಂದರೆ, ಮೇ1 ರಿಂದ ನಿಮ್ಮ ವ್ಯಾಲೆಟ್ ಕೆವೈಸಿ ಇಲ್ಲದಿದ್ದರೆ, ನಿಮಗೆ ಅದರ ಮೂಲಕ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
100 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಇರುವ ಕಂಪನಿಗಳು ತಮ್ಮ ವಹಿವಾಟಿನ ರಸೀದಿಗಳನ್ನು ಇನ್‌ವಾಯ್ಸ್ ನೋಂದಣಿ ಪೋರ್ಟಲ್‌ನಲ್ಲಿ (ಐಆರ್‌ಪಿ) 7 ದಿನಗಳ ಅಂತರದಲ್ಲಿ ಅಪ್‌ಲೋಡ್ ಮಾಡುತ್ತವೆ. ಪ್ರಸ್ತುತ, ಸರಕುಪಟ್ಟಿ ನೋಂದಣಿಗೆ ಯಾವುದೇ ಮಿತಿಯಿಲ್ಲ.

ಕರೆ ಮತ್ತು ಎಸ್‌ಎಂಎಸ್ ಸೇವೆಯಲ್ಲಿ ಸ್ಪಾಮ್ ಫಿಲ್ಟರ್‌ಗಾಗಿ ಕೃತಕ ಬುದ್ಧಿವಂತಿಕೆ (Aritificial Intelligence -AI) ಅವಳಡಿಸುವುದನ್ನು ಟ್ರಾಯ್ (TRAI) ಟೆಲಿಕಾಂ ಸಂಸ್ಥೆಗಳಿಗೆ ಕಡ್ಡಾಯಗೊಳಿಸಿದೆ. ಎಐ ಫಿಲ್ಟರ್‌ನಿಂದಾಗಿ ಗ್ರಾಹಕರು ಸ್ಪಾಮ್, ನಕಲಿ ಕರೆಗಳನ್ನು ಸ್ವೀಕರಿಸುವ ಮೊದಲೇ ಕಂಡುಹಿಡಿಯಲು ಸಾಧ್ಯವಾಗುತ್ತದೆ.

 

ಇದನ್ನು ಓದಿ: Priyanka Chopra: ಅಯ್ಯಯ್ಯೋ! ಕದ್ದುಮುಚ್ಚಿ ಬಾತ್​ರೂಮಲ್ಲಿ ಊಟ ಮಾಡಿದ ಪ್ರಿಯಾಂಕ ಚೋಪ್ರಾ! ಇದ್ದಕ್ಕಿದ್ದಂತೆ ಏನಾಯ್ತು ಈ ದೇಸಿ ಹುಡುಗಿಗೆ? 

Advertisement

Comments are closed.