ಸೋಮವಾರ, 26 ಅಕ್ಟೋಬರ್ 2026
Trending

Priyanka Chopra: ಅಯ್ಯಯ್ಯೋ! ಕದ್ದುಮುಚ್ಚಿ ಬಾತ್​ರೂಮಲ್ಲಿ ಊಟ ಮಾಡಿದ ಪ್ರಿಯಾಂಕ ಚೋಪ್ರಾ! ಇದ್ದಕ್ಕಿದ್ದಂತೆ ಏನಾಯ್ತು ಈ ದೇಸಿ ಹುಡುಗಿಗೆ?

ಅಮೆರಿಕದಲ್ಲಿನ ಕಹಿ ಘಟನೆಯನ್ನು ಈಗ ಶೇರ್​ ಮಾಡಿಕೊಂಡಿದ್ದಾರೆ. ಅವರು ಅದೊಂದು ಕಾರಣಕ್ಕಾಗಿ ಕದ್ದು ಮುಚ್ಚಿ ಬಾತ್​ರೂಮಲ್ಲಿ ಊಟ ಮಾಡ್ತಿದ್ರಂತೆ! ಯಾಕೆ ಗೊತ್ತಾ?

Priyanka Chopra
Image source- MensXP

Priyanka Chopra: ಹಾಲಿವುಡ್(Hollywood) ಸಿನಿಮಾ ಮಾಡೋದ್ರಲ್ಲಿ ಬ್ಯುಸಿಯಾಗಿಯೋ ನಮ್ಮ ಬಾಲಿವುಡ್(Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಚಾರಗಳಿಂದ ಸುದ್ಧಾಯಲ್ಲಿದ್ದಾರೆ. ಇದರ ಬೆನ್ನಲೇ ಪ್ರಿಯಾಂಕ ಅವರು ವಿದೇಶದಲ್ಲಿ, ಅದರಲ್ಲಿಯೂ ತಾವು ನೆಲೆಸಿರೋ ಅಮೆರಿಕದಲ್ಲಿನ ಕಹಿ ಘಟನೆಯನ್ನು ಈಗ ಶೇರ್​ ಮಾಡಿಕೊಂಡಿದ್ದಾರೆ. ಅವರು ಅದೊಂದು ಕಾರಣಕ್ಕಾಗಿ ಕದ್ದು ಮುಚ್ಚಿ ಬಾತ್​ರೂಮಲ್ಲಿ ಊಟ ಮಾಡ್ತಿದ್ರಂತೆ! ಯಾಕೆ ಗೊತ್ತಾ?

Sponsored

ಹೌದು, ಹಾಲಿವುಡ್ ಹಾಗೂ ಬಾಲಿವುಡ್ ಎರಡರಲ್ಲೂ ತಮ್ಮ ಕಾನ್ಫಿಡೆನ್ಸ್​ನಿಂದಲೇ ಫೇಮಸ್ ಆಗಿರುವ ಪ್ರಿಯಾಂಕ ಚೋಪ್ರಾ ತಮ್ಮ ಹೈಸ್ಕೂಲ್ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋದಾಗ ಅನೇಕ ತೊಂದರೆಗಳನ್ನು ಎದುರಿಸಿರುವ ಕುರಿತು ಈಗ ಮನಬಿಚ್ಚಿ ಮಾತನಾಡಿದ್ದಾರೆ. ಆ ವೇಳೆ ತಾವು ಬಾತ್ ರೂಂನಲ್ಲಿ ಕೂತು ಊಟ ಮಾಡುತ್ತಿರುವ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

Advertisement
Advertisement

ತಮ್ಮ ಓದುವ ದಿನಗಳ ಬಗ್ಗೆ ಮಾತನಾಡಿದ ಪ್ರಿಯಾಂಕ ಚೋಪ್ರಾ ಅವರು “ನಾನು ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಅಮೆರಿಕಕ್ಕೆ ಹೋದಾಗ ತುಂಬಾ ಕಷ್ಟ ಪಟ್ಟಿದ್ದೆ. ಮೊದಮೊದಲು ಅಲ್ಲಿನ ಹುಡುಗಿಯರ ಜೊತೆ ಸ್ನೇಹ ಮಾಡೋದು ಹೇಗೆ ಅಂತ ಅರ್ಥವಾಗ್ತಿರಲಿಲ್ಲ. ಆಗ ಕ್ಯಾಂಟೀನ್ ಗೆ ಹೋಗಿ ಬರೋದು ಹೇಗೆ ಅಂತ ಗೊತ್ತಿರಲಿಲ್ಲ. ಆಹಾರದ ಬಗ್ಗೆಯೂ ಹೆಚ್ಚಿಗೆ ಅರಿವು ಇರಲಿಲ್ಲ. ನಾನು ವೆಂಡಿಂಗ್ ಮೆಷಿನ್‌ನಿಂದ (Wending Machine) ತಿಂಡಿಗಳನ್ನು ತೆಗೆದುಕೊಂಡು ಯಾರೂ ನನ್ನನ್ನು ನೋಡದೆ ಸ್ನಾನಗೃಹಕ್ಕೆ ಹೋಗುತ್ತಿದ್ದೆ. ಯಾರ ಜೊತೆಗೂ ಹೋಗುತ್ತಿರಲಿಲ್ಲ. ಎಲ್ಲರ ಜೊತೆ ಹೋಗಲು ಭಯವಾಗುತ್ತಿತ್ತು. ಏಕೆಂದರೆ ಆಹಾರಗಳನ್ನು ತಿನ್ನುವುದರ ಬಗ್ಗೆ ನನಗೆ ಹೆಚ್ಚಿನ ಅರಿವು ಇರಲಿಲ್ಲ. ಇದಕ್ಕಾಗಿ ಒಟ್ಟಿಗೆ ಹೋಗಲು ಭಯದಿಂದ ಬಾತ್​ರೂಮ್​ ಒಳಗೆ ಹೋಗಿ ತಿಂಡಿ ತಿನ್ನುತ್ತಿದ್ದೆ” ಎಂದು ಹೇಳಿದ್ದಾರೆ.

ಅಲ್ಲದೆ “ನಾನು ಊಟವನ್ನೂ ಬಾತ್​ರೂಮ್​ನಲ್ಲಿ ಮಾಡುತ್ತಿದ್ದೆ. ನಾನು ಅಷ್ಟೂ ನರ್ವಸ್ ಆಗಿದ್ದೆ. ಕೆಫೆಟೇರಿಯಾಗೆ ಹೋಗುವುದು ಹೇಗೆಂದು ನನಗೆ ತಿಳಿದಿರಲಿಲ್ಲ. ವೆಂಡಿಂಗ್ ಮೆಷಿನ್​ನಿಂದ ಡೋರ್ಟಿಯಸ್ ತಿನ್ನುತ್ತಿದ್ದೆ. ಆಗ ನಾನು ಭಾರತೀಯಳು, ಅಮೆರಿಕಾದವಳು ಅಲ್ಲ ಎನ್ನುವ ಭಾವನೆ ಹೆಚ್ಚಿದ್ದರಿಂದ ಎಲ್ಲದೂ ತುಂಬಾ ಕಷ್ಟವಾಯಿತು. ತಮ್ಮ ಐಡೆಂಟಿಯನ್ನು ಬದಲಾಯಿಸಿ ಆ ಸ್ಥಳಕ್ಕೆ ಹೊಂದಿಕೊಳ್ಳಲು ತುಂಬಾ ತೊಂದರೆಯಾಯಿತು” ಎಂದಿದ್ದಾರೆ.

ಇಷ್ಟೇ ಅಲ್ಲದೆ ಬಳಿಕ ಮಾತನಾಡಿದ ಅವರು “ನಾನು ಅಮೆರಿಕದ ಸಂಸ್ಕೃತಿಗೆ ಒಗ್ಗಿಕೊಳ್ಳಲು ತುಂಬಾನೇ ಕಷ್ಟವಾಯಿತು. ಹೆಚ್ಚಿನ ಜನರ ಜೊತೆ ಬಹು ಬೇಗನೆ ಬೆರೆತುವ ಸ್ವಭಾವ ನನ್ನದಾಗಿರಲಿಲ್ಲ. ಈ ಕಾರಣದಿಂದ ನಾನು ಯಾರನ್ನಾದರೂ ಭೇಟಿಯಾಗಲು ಕಿರಿಕಿರಿಯಾಗುತ್ತಿತ್ತು. ಸುಮಾರು ನಾಲ್ಕು ವಾರಗಳ ಕಾಲ ಅಲ್ಲಿ ಎಲ್ಲವನ್ನೂ ಗಮನಿಸಿದೆ. ನಂತರ ನನಗೆ ಧೈರ್ಯ ಬಂದಿತು. ಶಾಲೆಯಲ್ಲಿ ಇತರ ಮಕ್ಕಳೊಂದಿಗೆ ಸ್ನೇಹ ಬೆಳೆಸಲು ನಾನು ಸಾಕಷ್ಟು ಬದಲಾದೆ. ಇದಲ್ಲದೆ ನಮ್ಮ ಕುಟುಂಬದಲ್ಲಿ ಡೇಟ್‌ಗಳು, ಲೇಟ್ ನೈಟ್ ಪಾರ್ಟಿ (Late Night party) ಇತ್ಯಾದಿಗಳೆಲ್ಲವೂ ನಿಷಿದ್ಧವಾಗಿದ್ದವು. ಆದ್ರೆ ಇಲ್ಲಿ ಅವೆಲ್ಲವೂ ಇದ್ದವು. ಅವೆಲ್ಲಕ್ಕೂ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟವಾಯಿತು ಎಂದು ಪ್ರಿಯಾಂಕಾ ಚೋಪ್ರಾ ಬಹಿರಂಗಪಡಿಸಿದ್ದಾರೆ.

ಅಂದಹಾಗೆ ಸದ್ಯ ಹಾಲಿವುಡ್ನಲ್ಲಿ ಮಿಂಚುತ್ತಿರೋ ಪ್ರಿಯಾಂಕ ಚೋಪ್ರಾ ಅವರು ಜೋನಸ್ ಸಿಟೆಡಾಲ್​ನಲ್ಲಿ ನಟಿಸಿದ್ದಾರೆ. ಈ ಸಿರೀಸ್ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ನಟಿ ಇದೀಗ ಪತಿ ನಿಕ್ ಹಾಗೂ ಮಗಳು ಮಾಲ್ತಿ ಜೊತೆ ಲಾಸ್ ಏಂಜಲೀಸ್​ನಲ್ಲಿ ನೆಲೆಸಿದ್ದಾರೆ.

 

ಇದನ್ನು ಓದಿ: Traffic Rules: ರಸ್ತೆಯಲ್ಲಿ ಈ ಚಿಹ್ನೆ ಕಂಡರೆ ವಾಹನ ನಿಲ್ಲಿಸಬೇಡಿ! 

Advertisement

Comments are closed.