ಭಾನುವಾರ, 25 ಅಕ್ಟೋಬರ್ 2026

ಬಂಟ್ವಾಳ: ರಸ್ತೆ ದಾಟುವಾಗ ಸ್ಕೂಟರ್‌ ಡಿಕ್ಕಿ, ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ಬಂಟ್ವಾಳ: ತಾಲೂಕಿನ ಬಿ ಮೂಡ ಗ್ರಾಮದ ತಲಪಾಡಿಯಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಸ್ಕೂಟರ್‌ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

Sponsored

ಫಾತಿಮತ್‌ ಜೊಹರಾ (51) ಮೃತ ಮಹಿಳೆ. ಸೆ.27 ರಂದು ರಾತ್ರಿ ಘಟನೆ ನಡೆದಿದ್ದು, ಬಿಸಿ ರೋಡ್‌ನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಹಮ್ಮದ್‌ ಹಾಫೀನ್‌ ಎಂಬುವವರ ಸ್ಕೂಟರ್‌ ಡಿಕ್ಕಿ ಹೊಡೆದಿದೆ ಎಂದು ದೂರಲಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಫಾತಿಮತ್‌ ಜೊಹರಾ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟರು.

Marriage AdMarriage AdSponsored