Bantwala

ಬಂಟ್ವಾಳ : ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ವಿದ್ಯಾರ್ಥಿ ಮೃತ್ಯು!

ಬಂಟ್ವಾಳ : ಕಾಲೇಜಿಗೆ ರಜೆ ಎಂದು ನೇತ್ರಾವತಿ ನದಿಗೆ ಹೋಗಿದ್ದ ವಿದ್ಯಾರ್ಥಿಯೋರ್ವ ನಿನ್ನೆ ಕಾಲು ಜಾರಿ ನೀರುಪಾಲಾಗಿದ್ದ. ಈತನನ್ನು ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾನೆ. ಈ ಘಟನೆ ಬರಿಮಾರು ಗ್ರಾಮದ ಕಾಗೆಕಾನ ಎಂಬಲ್ಲಿ ನಡೆದಿದೆ. ಬರಿಮಾರ್ ಗ್ರಾಮದ ಪಾಪೆತ್ತಿಮಾರು ನಿವಾಸಿ ರಕ್ಷಣ್(16) ನೀರಿಗೆ ಬಿದ್ದುಸಾವು ಕಂಡ ವಿದ್ಯಾರ್ಥಿ. ಈತ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಕಾಲೇಜ್ ಗೆ ರಜೆ ಇದ್ದ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ಬಳಿಗೆ ಹೋಗಿದ್ದಾಗ ಈ ಘಟನೆ …

ಬಂಟ್ವಾಳ : ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ವಿದ್ಯಾರ್ಥಿ ಮೃತ್ಯು! Read More »

ಬಂಟ್ವಾಳ : ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ | 14 ವಿದ್ಯಾರ್ಥಿಗಳಿಗೆ ತೀವ್ರವಾದ ಹಲ್ಲೆ, ದೂರು ದಾಖಲು

ಬಂಟ್ವಾಳ : ಬಿಸಿಎಂ ಹಾಸ್ಟೆಲ್‌ನ 14 ವಿದ್ಯಾರ್ಥಿಗಳಿಗೆ ಅದೇ ಹಾಸ್ಟೆಲ್ ನ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ. ಜು.20 ರಂದು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ವಾಮದಪದವಿನಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲ್ಲೆಗೊಳಗಾದವರು. 14 ಪಿಯುಸಿ ವಿದ್ಯಾರ್ಥಿಗಳಿಗೆ ಬೆಲ್ಟ್, ವಿಕೇಟ್ ಗಳದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಾಗೂ ಇದರ ಬಗ್ಗೆ ಯಾರಿಗಾದರೂ ದೂರು ನೀಡಿದರೆ ಮತ್ತೆ ಹೊಡೆಯುವುದಾಗಿ ಜೀವ ಬೆದರಿಕೆ …

ಬಂಟ್ವಾಳ : ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಾರಾಮಾರಿ | 14 ವಿದ್ಯಾರ್ಥಿಗಳಿಗೆ ತೀವ್ರವಾದ ಹಲ್ಲೆ, ದೂರು ದಾಖಲು Read More »

ಬಂಟ್ವಾಳ : ನರ್ತೆ( ಶಂಕುಹುಳು) ಹೆಕ್ಕಲು ಹೋಗಿ ಯುವಕ ಜಾರಿ ಬಿದ್ದು ಕೆಸರಿನಲ್ಲಿ ಹೂತು ದಾರುಣ ಸಾವು

ಬಂಟ್ವಾಳ : ಯುವಕನೋರ್ವ ಗದ್ದೆಯಲ್ಲಿ ನರ್ತೆ ( ಶಂಕುಹುಳು) ಹೆಕ್ಕುವ ಸಂದರ್ಭದಲ್ಲಿ ನೀರು ಹಾಗೂ ಕೆಸರಿನಲ್ಲಿ ಹೂತು ಮೃತಪಟ್ಟ ದಾರುಣ ಘಟನೆಯೊಂದು ನಡೆದಿದೆ. ಪೊಳಲಿ ಸಮೀಪದ ಕಲ್ಕುಟದ ಗದ್ದೆಯೊಂದರಲ್ಲಿ ಈ ಘಟನೆ ನಡೆದಿದೆ. ಕರಿಯಂಗಳ ಗ್ರಾಮದ ಸಾಣೂರುಪದವು ನಿವಾಸಿ ದಾಮೋದರ್(31) ಮೃತಪಟ್ಟ ಯುವಕ. ಗದ್ದೆಯ ಬದುವಿನಲ್ಲಿ ಕೂತು ನರ್ತೆ ಹೆಕ್ಕುತ್ತಿದ್ದ ವೇಳೆ ದಾಮೋದರ್ ಅವರು ಆಯತಪ್ಪಿ ಗದ್ದೆಗೆ ಬಿದ್ದು ಬಿಟ್ಟಿದ್ದಾರೆ. ಆದರೆ ಗದ್ದೆಯಲ್ಲಿ ನೀರಿನ ಜತೆಗೆ ಕೆಸರು ಕೂಡ ತುಂಬಿಕೊಂಡಿದ್ದರಿಂದ, ಅವರು ಕುತ್ತಿಗೆವರೆಗೂ ಹೂತು ಹೋಗಿದ್ದಾರೆ. ಪ್ರಯತ್ನಪಟ್ಟರೂ …

ಬಂಟ್ವಾಳ : ನರ್ತೆ( ಶಂಕುಹುಳು) ಹೆಕ್ಕಲು ಹೋಗಿ ಯುವಕ ಜಾರಿ ಬಿದ್ದು ಕೆಸರಿನಲ್ಲಿ ಹೂತು ದಾರುಣ ಸಾವು Read More »

ಬಂಟ್ವಾಳ : ಸ್ನಾನಕ್ಕೆಂದು ಹೋದ ವ್ಯಕ್ತಿ ವಿದ್ಯುತ್ ಖಾಯಿಲ್ ಶಾಕ್ ಹೊಡೆದು ಸಾವು!!!

ಬಂಟ್ವಾಳ : ವಿದ್ಯುತ್ ಖಾಯಿಲ್ ನಿಂದಾಗಿ ಶಾಕ್ ಹೊಡೆದು ವ್ಯಕ್ತಿಯೋರ್ವರು ಸ್ನಾನಗೃಹದಲ್ಲೇ ಮೃತಪಟ್ಟ ಘಟನೆಯೊಂದು ಬ್ರಹ್ಮರಕೊಟ್ಲು ಎಂಬಲ್ಲಿ ನಡೆದಿದೆ. ನೀರುಮಾರ್ಗ ನಿವಾಸಿಯಾಗಿರುವ ಆದರೆ ಬ್ರಹ್ಮರಕೊಟ್ಲು ಕಳ್ಳಿಗೆ ಚಂದ್ರಿಗೆಯ ಪರಿಯೋಡಿಬೀಡು ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿರುವ ಹೇಮಚಂದ್ರ (49) ಎಂಬವರೇ ಮೃತಪಟ್ಟ ವ್ಯಕ್ತಿ. ಹೇಮಚಂದ್ರ ಅವರ ಪತ್ನಿ ಮನೆ ಚಂದ್ರಿಗೆಯಲ್ಲಿದೆ. ಅಲ್ಲೇ ಸಮೀಪ ಪೆರಿಯೋಡಿಬೀಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಲ್ಲಿಂದಲೇ ಇಬ್ಬರು ಮಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಎಂದಿನಂತೆ ರಾತ್ರಿ ಕೆಲಸ ಮುಗಿಸಿ ಹೇಮಚಂದ್ರ ಅವರು ಮನೆಗೆ …

ಬಂಟ್ವಾಳ : ಸ್ನಾನಕ್ಕೆಂದು ಹೋದ ವ್ಯಕ್ತಿ ವಿದ್ಯುತ್ ಖಾಯಿಲ್ ಶಾಕ್ ಹೊಡೆದು ಸಾವು!!! Read More »

ಬಂಟ್ವಾಳ : ದ್ವಿಚಕ್ರ ಸವಾರನೋರ್ವನಿಂದ ಕ್ಷುಲ್ಲಕ ಕಾರಣಕ್ಕೆ ಸರಕಾರಿ ಅಧಿಕಾರಿಗಳ ಜೊತೆ ಗಲಾಟೆ, ವಾಹನ ಜಖಂ| ದೂರು ದಾಖಲು

ಬಂಟ್ವಾಳ : ದ್ವಿಚಕ್ರ ವಾಹನ ಸವಾರನೋರರ್ವ ಕ್ಷುಲ್ಲಕ ಕಾರಣಕ್ಕಾಗಿ ಸರಕಾರಿ ವಾಹನವೊಂದರ ಮಿರರ್ ಪುಡಿ ಮಾಡಿದ್ದಲ್ಲದೆ, ಸರಕಾರಿ ಅಧಿಕಾರಿಗಳಿಗೆ ಹಲ್ಲೆ ಮಾಡಲು ಮುಂದಾಗಿದ್ದು, ಅಷ್ಟು ಮಾತ್ರವಲ್ಲದೇ ಅವ್ಯಾಚ್ಯ ಶಬ್ದಗಳಿಂದ ಬೈದಿರುವ ಘಟನೆ ಇಂದು ಬೆಳಿಗ್ಗೆ ತುಂಬಿ ಎಂಬಲ್ಲಿ ನಡೆದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿ.ಪಂ.ಕಚೇರಿಯ ವಾಹನವೊಂದರ ಚಾಲಕ ದೇವದಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕಾರಿನಲ್ಲಿ ಮೂವರು ಸರಕಾರಿ ಅಧಿಕಾರಿಗಳು ಪುತ್ತೂರಿನಲ್ಲಿ ನಡೆಯುವ ಅಗತ್ಯ ಮೀಟಿಂಗ್ …

ಬಂಟ್ವಾಳ : ದ್ವಿಚಕ್ರ ಸವಾರನೋರ್ವನಿಂದ ಕ್ಷುಲ್ಲಕ ಕಾರಣಕ್ಕೆ ಸರಕಾರಿ ಅಧಿಕಾರಿಗಳ ಜೊತೆ ಗಲಾಟೆ, ವಾಹನ ಜಖಂ| ದೂರು ದಾಖಲು Read More »

ಬಂಟ್ವಾಳ : ಶೆಡ್ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು

ಬಂಟ್ವಾಳ: ಕಾರ್ಮಿಕರು ವಾಸವಾಗಿದ್ದ ಮನೆಯ ಮೇಲೆ ಗುಡ್ಡವೊಂದು ಕುಸಿದು, ಶೆಡ್ ನೊಳಗೆ ಸಿಲುಕಿಕೊಂಡು ನಾಲ್ವರು ಕಾರ್ಮಿಕರ ಪೈಕಿ ಮೂವರು ಮೃತಪಟ್ಟಿದ್ದು, ಓರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಿಜು ಪಾಲಕ್ಕಾಡ್ (45), ಸಂತೋಷ್ ಆಲಕ್ಕುಯ್ಯ(46) , ಬಾಬು ಕೊಟ್ಟಾಯಂ ಮೃತ ಕಾರ್ಮಿಕರಾಗಿದ್ದು (46 ಜಾನಿ ಕಣ್ಣೂರು ಎಂಬಾತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು. ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಹೆನ್ರಿ ಕಾರ್ಲೊ ಎಂಬವರ ಮನೆಯ ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದ ಐವರ …

ಬಂಟ್ವಾಳ : ಶೆಡ್ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು Read More »

ಸೈಕಲ್ ಗೆ ಕಾರು ಡಿಕ್ಕಿ ಹೊಡೆದು ಬಂಟ್ವಾಳದ ಯುವಕ ಸಾವು!

ಬೆಂಗಳೂರು : ಕಾರೊಂದು ಸೈಕಲ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಮೃತಪಟ್ಟ ಯುವಕ ಬಂಟ್ವಾಳ ಕಾಮಾಜೆ ನಿವಾಸಿಶಿವಪ್ರಸಾದ್ (33). ಬೆಂಗಳೂರಿನ ಏರ್‌ಪೋರ್ಸ್‌ನಲ್ಲಿ ಅವರು ಎಸಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಕ್ವಾರ್ಟಸ್‌ನಿಂದ 250 ಮೀಟರ್ ದೂರವಿರುವ ಕಚೇರಿಗೆ ಶುಕ್ರವಾರ ಸೈಕಲ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಹಿಳೆ ಚಲಾಯಿಸಿಕೊಂಡು ಬಂದ ಕಾರೊಂದು ಹಿಂದಿನಿಂದ ಶಿವಪ್ರಸಾದ್ ಅವರ ಸೈಕಲ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಶಿವಪ್ರಸಾದ್ ಡಿವೈಡರ್ ಮೇಲೆ ಬಿದ್ದು ಗಂಭೀರ …

ಸೈಕಲ್ ಗೆ ಕಾರು ಡಿಕ್ಕಿ ಹೊಡೆದು ಬಂಟ್ವಾಳದ ಯುವಕ ಸಾವು! Read More »

ಪುತ್ತೂರು: ತಡರಾತ್ರಿ ಸ್ನೇಹಿತನನ್ನು ಮನೆಗೆ ಬಿಟ್ಟು ಬರುವಾಗ ಬೈಕ್ ಅಪಘಾತ!! ಗಂಭೀರ ಗಾಯಗೊಂಡಿದ್ದ ಸವಾರ ಮೃತ್ಯು

ಬಂಟ್ವಾಳ: ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ನೇರಳಕಟ್ಟೆಯಲ್ಲಿ ಮೇ.27 ರಂದು ಸಂಜೆ ಅಪಘಾತದಲ್ಲಿ ಸಂಭವಿಸಿತ್ತು. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರನನ್ನು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತರನ್ನು ಕಬಕ ಸಮೀಪದ ಅರ್ಕ ನಿವಾಸಿ ಸೇಸಪ್ಪ ನಾಯ್ಕ ರ ಪುತ್ರ ಕಿಶೋರ್ ಎಂದು ಗುರುತಿಸಲಾಗಿದೆ. ಕಿಶೋರ್ ಮೇ.27 ರಂದು ತಡರಾತ್ರಿ ಕಬಕದಿಂದ ತನ್ನ ಸ್ನೇಹಿತನನ್ನು …

ಪುತ್ತೂರು: ತಡರಾತ್ರಿ ಸ್ನೇಹಿತನನ್ನು ಮನೆಗೆ ಬಿಟ್ಟು ಬರುವಾಗ ಬೈಕ್ ಅಪಘಾತ!! ಗಂಭೀರ ಗಾಯಗೊಂಡಿದ್ದ ಸವಾರ ಮೃತ್ಯು Read More »

ಬಂಟ್ವಾಳ : ಎಸ್ ವಿಎಸ್ ಕಾಲೇಜ್ ನಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ | ಸಂಚಾಲಕ ಹಾಗೂ ಪ್ರಾಂಶುಪಾಲರನ್ನು ಎತ್ತಂಗಡಿ ಮಾಡಬೇಕು ಎಂದು ಒತ್ತಾಯ

ಬಂಟ್ವಾಳ : ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ಕಾಲೇಜಿನ ಅವ್ಯವಸ್ಥೆ ಹಾಗೂ ಆಡಳಿತ ಮಂಡಳಿಯ ವಿರುದ್ಧ ಬಂಟ್ವಾಳದ ಎಸ್‌ ವಿಎಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಮಹಿಳಾ ಪ್ರಾಧ್ಯಾಪಕಿಗೆ ಕಿರುಕುಳ ಕೊಟ್ಟು ಬಂಧನಕ್ಕೊಳಗಾಗಿದ್ದ ಎಸ್ ವಿಎಸ್ ಕಾಲೇಜಿನ ಸಂಚಾಲಕ ಪ್ರಕಾಶ್ ಶೆಣೈಯನ್ನು ಹುದ್ದೆಯಿಂದ ತೆಗೆದು ಹಾಕಬೇಕು. ಆತನಿಗೆ ಬೆಂಬಲ ನೀಡುತ್ತಿರುವ ಕಾಲೇಜಿನ ಪ್ರಾಂಶುಪಾಲರನ್ನೂ ಎತ್ತಂಗಡಿ ಮಾಡಬೇಕು ಎಂದು ಒತ್ತಾಯಿಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ …

ಬಂಟ್ವಾಳ : ಎಸ್ ವಿಎಸ್ ಕಾಲೇಜ್ ನಲ್ಲಿ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ | ಸಂಚಾಲಕ ಹಾಗೂ ಪ್ರಾಂಶುಪಾಲರನ್ನು ಎತ್ತಂಗಡಿ ಮಾಡಬೇಕು ಎಂದು ಒತ್ತಾಯ Read More »

ಬಂಟ್ವಾಳ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆಗೆ ಶರಣು

ಬಾವಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳದ ಬೊಂಡಾಲದಲ್ಲಿ ನಡೆದಿದೆ. ಗೋಳ್ತಮಜಲು ಗ್ರಾಮದ ಕಲ್ಲಡ್ಕ ನಿವಾಸಿ ನಾಗವೇಣಿ ಎಂಬುವವರ ಪುತ್ರಿ ಮಲ್ಲಿಕಾ (32) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಲ್ಲಿಕಾ ಸುಮಾರು 10 ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರಿಂದ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top