Bantwala: ಲಾರಿ-ರಿಕ್ಷಾ ಅಪಘಾತ; ರಿಕ್ಷಾ ಜಖಂ, ಚಾಲಕ ಆಸ್ಪತ್ರೆಗೆ ದಾಖಲು

Share the Article

Bantwala: ಲಾರಿ ಮತ್ತು ರಿಕ್ಷಾ ನಡುವೆ ಜಕ್ರಿಬೆಟ್ಟು ಎಂಬಲ್ಲಿ ಅಪಘಾತವಾಗಿದ್ದು, ರಿಕ್ಷಾ ಚಾಲಕ ಗಾಯಗೊಂಡ ಘಟನೆಯೊಂದು ನಡೆದಿದೆ. ರಿಕ್ಷಾ ಚಾಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಭಾನುವಾರ ರಾತ್ರಿ ನಡೆದಿದೆ.

ಪೊಳಲಿ, ಬೆಳಂದೂರು ನಿವಾಸಿ ರಿಕ್ಷಾ ಚಾಲಕ ಚೇತನ್‌ ಎಂಬಾತನೇ ಗಾಯಗೊಂಡ ವ್ಯಕ್ತಿ. ಚೇತನ್‌ ಬಡ್ಡಕಟ್ಟೆಯಿಂದ ಜಕ್ರಿಬೆಟ್ಟು ಕಡೆಗೆ ಹೋಗುತ್ತಿದ್ದ ಸಮಯದಲ್ಲಿ ಬಂಟ್ವಾಳ ಜಕ್ರಿಬೆಟ್ಟು ಪಂಪ್‌ ಹೌಸ್‌ ಮುಂದೆ ಬಂಟ್ವಾಳ ಪೇಟೆಯಿಂದ ಹೆದ್ದಾರಿಗೆ ಕ್ರಾಸ್‌ ಮಾಡುವ ವೇಳೆ ಬೆಳ್ತಂಗಡಿ ಕಡೆಯಿಂದ ಮರದ ದಿಮ್ಮಿಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಜಖಂಗೊಂಡಿದೆ. ಚಾಲಕ ಚೇತನ್‌ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ಟ್ರಾಫಿಕ್‌ ಪೊಲೀಸರು ಭೇಟಿ ನೀಡಿದ್ದಾರೆ.

Leave A Reply