Dakshina Kannada (Bantwala): ಯೂನಿಫಾರಂ ಹಾಕದೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ರಿಕ್ಷಾ ಚಾಲನೆ, ದಂಡ ಹಾಕಿದ ಪೊಲೀಸ್‌; ಬೆಂಕಿ ಹಚ್ಚಲು ಮುಂದಾದ ಆಟೋ ಚಾಲಕ

Bantwala: ಆಟೋ ರಿಕ್ಷಾವನ್ನು ಕಾನೂನು ಬಾಹಿರವಾಗಿ ಓಡಿಸುತ್ತಿದ್ದ ಎಂಬ ಕಾರಣಕ್ಕೆ ಟ್ರಾಫಿಕ್‌ ಪೊಲೀಸರು ತಡೆದು ದಂಡ ಹಾಕಿದ್ದು, ಇದರಿಂದ ಸಿಟ್ಟುಗೊಂಡ ಚಾಲಕ ಟ್ರಾಫಿಕ್‌ ಎಸ್‌.ಐ. ಹಾಗೂ ಸರಕಾರಿ ವಾಹನಕ್ಕೆ ಮತ್ತು ಆಟೋ ರಿಕ್ಷಾಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆಯೊಂದು ನಡೆದಿದೆ.

Dakshina Kannada (Bantwala)
Dakshina Kannada (Bantwala): ಯೂನಿಫಾರಂ ಹಾಕದೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ರಿಕ್ಷಾ ಚಾಲನೆ, ದಂಡ ಹಾಕಿದ ಪೊಲೀಸ್‌; ಬೆಂಕಿ ಹಚ್ಚಲು ಮುಂದಾದ ಆಟೋ ಚಾಲಕ

ಇದನ್ನೂ ಓದಿ: Mangaluru: ಕಾಂಗ್ರೆಸ್‌ನ ರಕ್ಷಿತ್‌ ಶಿವರಾಂಗೆ ಬೆಂಬಲ ನೀಡಿ ಎಂದು ಕರೆ ಕೊಟ್ಟ ಬಿಜೆಪಿ ಶಾಸಕ ಉಮಾನಾಥ್‌ ಕೋಟ್ಯಾನ್‌

ಈ ಘಟನೆ ನಡೆದಿರುವುದು ಬಿಸಿರೋಡಿನ ಕೈಕಂಬ ಎಂಬಲ್ಲಿ. ಇಂದು (ಸೋಮವಾರ ಮಾ.11) ಬೆಳಗ್ಗೆ ಈ ಘಟನೆ ನಡೆದಿದೆ. ಇದೀಗ ಚಾಲಕನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಡಿನಬಳಿ ನಿವಾಸಿ ಮಹಮ್ಮದ್‌ ಅನ್ಸಾರ್‌ ಎಂಬುವವರೇ ಪ್ರಕರಣದ ಆರೋಪಿ. ಇವರು ಸದ್ಯಕ್ಕೆ ತಲೆಮರೆಸಿಕೊಂಡಿದ್ದಾರ ಎಂದು ವರದಿಯಾಗಿದೆ.

ಯೂನಿಫಾರ್ಮ್‌ ಹಾಕದೆ, ಮೊಬೈಲ್‌ನಲ್ಲಿ ಮಾತಾಡಿಕೊಂಡು ರಿಕ್ಷಾವನ್ನು ಓಡಿಸುತ್ತಿದ್ದ ಚಾಲಕನನ್ನು ಟ್ರಾಫಿಕ್‌ ಎಸ್‌ಐ ಸುತೇಶ್‌ ಅವರು ಕೈಕಂಬದಲ್ಲಿ ವಾಹನ ತಪಾಸಣೆ ಸಂದರ್ಭ ನಿಲ್ಲಿಸಿದ್ದಾರೆ. ನಂತರ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ ಕಾರಣದಿಂದ ಎರಡು ಸಾವಿರ ದಂಡ ಹಾಕಿ ನೋಟಿಸ್‌ ನೀಡಿದ್ದಾರೆ. ಇದಕ್ಕೆ ಸಿಟ್ಟುಗೊಂಡ ಚಾಲಕ, ಗಲಾಟೆ ಮಾಡಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಮಾತ್ರವಲ್ಲದೇ ರಿಕ್ಷಾವನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.

ನಂತರ ಜೀಪ್‌, ಎಸ್‌ಐ ಗೆ ಪೆಟ್ರೋಲ್‌ ಸುರಿದು ಬೆಂಕಿ ನೀಡಲು ಮಂದಾಗಿದ್ದ. ಇದೀಗ ಎಸ್‌ಐ ಅವರು ದೂರು ನೀಡಿದ್ದು, ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.