Mangaluru: ಕಾಂಗ್ರೆಸ್‌ನ ರಕ್ಷಿತ್‌ ಶಿವರಾಂಗೆ ಬೆಂಬಲ ನೀಡಿ ಎಂದು ಕರೆ ಕೊಟ್ಟ ಬಿಜೆಪಿ ಶಾಸಕ ಉಮಾನಾಥ್‌ ಕೋಟ್ಯಾನ್‌

Mangaluru Umanath Kotian: ಲೋಕಸಭಾ ಚುನಾವಣೆಗೆ ತಯಾರಿ ಶುರು ಆಗಿದೆ. ಕರ್ನಾಟಕದ ಚುಕ್ಕಾಣಿ ಹಿಡಿಯಲು ಬಿಜೆಪಿ, ಕಾಂಗ್ರೆಸ್‌ ತಮ್ಮ ತಮ್ಮ ತಂತ್ರಗಳನ್ನು ಹೆಣೆಯುತ್ತಿದೆ. ಇತ್ತ ಕಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಾದ ಉಮಾನಾಥ್‌ ಕೋಟ್ಯಾನ್‌ ಅವರು ಕಾಂಗ್ರೆಸ್‌ನ ರಕ್ಷಿತ್‌ ಶಿವರಾಂ (Rakshit Shivaram) ಅವರನ್ನು ಬೆಂಬಲ ಮಾಡಿ ಎಂಬ ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: Minister Dinesh Gundurao: ರಾಜ್ಯಾದ್ಯಂತ ಕಾಟನ್‌ ಕ್ಯಾಂಡಿ ಬ್ಯಾನ್‌, ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಬಳಸುವಂತಿಲ್ಲ-ಸಚಿವ ದಿನೇಶ್‌ ಗುಂಡೂರಾವ್‌ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕ ಉಮಾನಾಥ್‌ ಕೋಟ್ಯಾನ್‌ ಅವರು ಈ ರೀತಿ ತಮ್ಮ ಅಸಮಾಧಾನ ಹೊರ ಹಾಕಿದ್ದು, ಅಚ್ಚರಿ ಉಂಟು ಮಾಡಿದ್ದಾರೆ. ತನ್ನ ಸಮಾಜದ ಕಾಂಗ್ರೆಸ್‌ ನಾಯಕ ಸೋತ ಎಂಬ ಕಾರಣಕ್ಕೆ ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ್‌ ಕೋಟ್ಯಾನ್‌ ಅವರು ಪಕ್ಷ ಭೇದ ಮರೆತು ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.

 

ಬೆಳ್ತಂಗಡಿಯಲ್ಲಿ ಬಿಲ್ಲವ ಅಭ್ಯರ್ಥಿ ರಕ್ಷಿತ್‌ ಶಿವರಾಂ ಚುನಾವಣೆ ಎದುರಿಸಿ ಸೋತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತ ಬಿಲ್ಲವೇ ಇರುವಾಗ ರಕ್ಷಿತ್‌ ಯಾಕೆ ಸೋತಿದ್ದಾರೆ. ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ಕೊಡೋದಕ್ಕೆ ನಿಮಗೆ ಧೈರ್ಯ ಬರೋದಿಲ್ಲ. ಉಮಾನಾಥ್ ಕೋಟ್ಯಾನ್ ಹತ್ರ ಮಾತನಾಡಿದ್ರೆ ನನ್ನ ಪಕ್ಷದವರು ಏನಾದ್ರೂ ಹೇಳ್ತಾರಾ ಎಂಬ ಭಯ.ಕಾಂಗ್ರೆಸ್ನ ವಿನಯ ಕುಮಾರ್ ಸೊರಕೆ ಹತ್ರ ಮಾತನಾಡಿದ್ರೆ ಏನಾದರೂ ತೊಂದರೆಯಾಗುತ್ತೆ ಎಂಬ ಭಯ. ಇಂತಹ ಹಿಂಜರಿಕೆ ಇಟ್ಟುಕೊಂಡರೆ ಬಿಲ್ಲವ ಸಮಾಜ ಕಟ್ಟಲು ಹೇಗೆ ಸಾಧ್ಯ? ಅದ್ಯಾಕೆ ಬಿಲ್ಲವ ಸಮಾಜದವರಿಗೆ ಈ ಹಿಂಜರಿಕೆ? ಚುನಾವಣೆ ಎದುರಿಸುವ ನಮ್ಮ ಜನಪ್ರತಿನಿಧಿಗಳಿಗೆ ಬಿಲ್ಲವ ಸಮಾಜ ಎಷ್ಟು ನೈತಿಕ ಬೆಂಬಲ ನೀಡುತ್ತೆ ಅನ್ನೋದು ಮುಖ್ಯ. ಯಾವುದೇ ರಾಜಕೀಯ ಪಕ್ಷವಿರಲಿ ಬಿಲ್ಲವ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಎಂದು ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಕರೆ ನೀಡಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

Leave A Reply

Your email address will not be published.