Bantwala: ಬಂಟ್ವಾಳ; ಮಹಡಿ ಮೇಲಿಂದ ಬಿದ್ದು ಬಾಲಕ ಸಾವು

Bantwala: ಮನೆಯ ಮಹಡಿಯ ಮೇಲಿನಿಂದ ಕೆಳಗೆ ಬಾಲಕನೋರ್ವ ಬಿದ್ದು ಮೃತ ಹೊಂದಿದ ಘಟನೆಯೊಂದು ಎ.1 ರ ಮುಂಜಾನೆ ನಡೆದಿದೆ.

ಇದನ್ನೂ ಓದಿ: Puttur: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಬಂಟ್ವಾಳ ಜಕ್ತಿಬೆಟ್ಟು ನಿವಾಸಿ ದಿನೇಶ್‌ ಪೂಜಾರಿ ಅವರ ಪುತ್ರ ಆದಿಶ್‌ (15) ಎಂಬುವವನೇ ಮೃತ ಬಾಲಕ. ದೊಡ್ಡಮ್ಮನ ಜೊತೆ ಮಲಗಿದ್ದ ಇತ, ಮುಂಜಾನೆ ಎದ್ದುಕೊಂಡು ಮೊಬೈಲ್‌ ಹಿಡಿದು ಹೊರಗೆ ಬಂದಿದ್ದಾನೆ. ಆದರೆ ಬೆಳಗ್ಗೆ ಮನೆ ಮಂದಿಯೆಲ್ಲ ಎದ್ದು ನೋಡುವಾಗ ಈತ ಕೆಳಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆತಂದರೂ ಆತ ಅದಾಗಲೇ ಮೃತ ಹೊಂದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Puttur: ಗೆಜ್ಜೆಗಿರಿ ನಂದನ ಬಿತ್ತಿಲ್, ಪಡುಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ಚುನಾವಣಾ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

ಬಂಟ್ವಾಳ ನಗರ ಪೊಲೀಸ್‌ ಪ್ರಕರಣದ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ.

Leave A Reply

Your email address will not be published.