ಶನಿವಾರ, 24 ಅಕ್ಟೋಬರ್ 2026

ಮಾಡೂರು ಇಸುಬು ಹತ್ಯೆ ಪ್ರಕರಣ: ಐವರು ಆರೋಪಿಗಳು ದೋಷಿ, ಮಂಗಳೂರು ಕೋರ್ಟ್‌ ಘೋಷಣೆ

ಮಂಗಳೂರು ಜೈಲಿನಲ್ಲಿ 2015ರಲ್ಲಿ ನಡೆದ ಮಾಡೂರು ಇಸುಬು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು ದೋಷಿಗಳೆಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.

02-11-2015 ರಂದು ನಡೆದ ಘಟನೆ ಬಗ್ಗೆ ನಗರದ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ವಿಚಾರಣೆ ನಡೆದ ಬಳಿಕ ಸೆ.28 ರಂದು ಆರೋಪಿಗಳಾದ ಲಿತೇಶ್‌ ಪೂಜಾರಿ, ಶೋಭರಾಜ್‌, ಯುವರಾಜ್‌, ಪ್ರದೀಪ್‌, ಉಮೇಶ್‌ ಕೊಂಬಾರ್‌ ಎಂಬುವವರ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಘೋಷಿಸಲಾಗಿದ್ದು, ಉಳಿದ ಆರೋಪಿಗಳಾದ ಶರಣ್‌ ಪೂಜಾರಿ, ಮಹೇಶ್‌ ಕುಮಾರ್‌, ಕಮಲಾಕ್ಷ ಪೂಜಾರಿ, ಸತೀಶ್‌ ಪೂಜಾರಿ (ಪ್ರಸ್ತುತ ಮರಣ ಹೊಂದಿರುತ್ತಾರೆ) ಮತ್ತು ಲತೀಶ್‌ ಎಂಬುವವರನ್ನು ಆರೋಪದಿಂದ ಖುಲಾಸೆ ಮಾಡಲಾಗಿದೆ. ಈ ಪ್ರಕರಣದ ಶಿಕ್ಷೆಯ ಪ್ರಮಾಣ ಪ್ರಕಟ ಮಾಡಲು ಬಾಕಿ ಇರುತ್ತದೆ.