ಶನಿವಾರ, 24 ಅಕ್ಟೋಬರ್ 2026

ಪುದುವೆಟ್ಟು: ಕಾಡಾನೆ ಸಂಚಾರ

Elephant Balarama

ಬೆಳ್ತಂಗಡಿ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ಪುದುವೆಟ್ಟು ಗ್ರಾಮದ ಮಡ್ಯಾ ಪರಿಸರದಲ್ಲಿ ಒಂಟಿ ಕಾಡಾನೆಯೊಂದು ಕಳೆದ ರಾತ್ರಿಯಿಂದ ಬೀಡು ಬಿಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕಾಡಾನೆ ಸೋಮವಾರ ರಾತ್ರಿ ಮಡ್ಯಾ ಪರಿಸರಕ್ಕೆ ಆಗಮಿಸಿದ್ದು, ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಯವರೆಗೂ ಸಂಚರಿಸುತ್ತಿರುವುದು ಕಂಡು ಬಂದಿದೆ. ಕಾಡಾನೆ ಅದೇ ಪರಿಸರದಲ್ಲಿ ಇದೆ ಎನ್ನುವ ಶಂಕೆ ಗ್ರಾಮಸ್ಥರಲ್ಲಿದೆ.

ಕಾಡಾನೆ ಇರುವ ಸ್ಥಳದ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿ, ಅದರ ಚಲನವಲನ ಪತ್ತೆಹಚ್ಚಿ, ಜನರಿಗೆ ಎಚ್ಚರಿಕೆ ನೀಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.