Accident news

ಮಂಗಳೂರು : ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದ ಮಹಿಳೆಯ ಕೈ ಮೇಲೆ ಹರಿದ ಲಾರಿ ಚಕ್ರ!

ಮಂಗಳೂರು : ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದ ಮಹಿಳೆಯೊಬ್ಬರ ಕೈ ಮೇಲೆ ಲಾರಿಯೊಂದರ ಚಕ್ರ ಹರಿದು ಗಂಭೀರ ಗಾಯಗೊಂಡ ಘಟನೆ ನಗರದ ಕೆಪಿಟಿ ಜಂಕ್ಷನ್‌ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಗಾಯಗೊಂಡವರು ಮುಹಮ್ಮದ್ ಹನೀಫ್‌ರ ಪತ್ನಿ ಮರಿಯಮ್ಮ (೪೭) ಎಂದು ತಿಳಿದು ಬಂದಿದೆ. ಮುಹಮ್ಮದ್ ಹನೀಫ್ ಸೋಮವಾರ ಮಧ್ಯಾಹ್ನ 1ಕ್ಕೆ ಕೆಪಿಟಿಯ ಪೆಟ್ರೋಲ್ ಪಂಪ್‌ನಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕಿಸಿ ವಿಟ್ಲ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ೬೬ ಪ್ರವೇಶಿಸಿದ್ದರು ಎನ್ನಲಾಗಿದೆ. ಆಗ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕೊಂದು ಹನೀಫ್‌ರ …

ಮಂಗಳೂರು : ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದ ಮಹಿಳೆಯ ಕೈ ಮೇಲೆ ಹರಿದ ಲಾರಿ ಚಕ್ರ! Read More »

ಸೈಕಲ್ ಗೆ ಕಾರು ಡಿಕ್ಕಿ ಹೊಡೆದು ಬಂಟ್ವಾಳದ ಯುವಕ ಸಾವು!

ಬೆಂಗಳೂರು : ಕಾರೊಂದು ಸೈಕಲ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಮೃತಪಟ್ಟ ಯುವಕ ಬಂಟ್ವಾಳ ಕಾಮಾಜೆ ನಿವಾಸಿಶಿವಪ್ರಸಾದ್ (33). ಬೆಂಗಳೂರಿನ ಏರ್‌ಪೋರ್ಸ್‌ನಲ್ಲಿ ಅವರು ಎಸಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಕ್ವಾರ್ಟಸ್‌ನಿಂದ 250 ಮೀಟರ್ ದೂರವಿರುವ ಕಚೇರಿಗೆ ಶುಕ್ರವಾರ ಸೈಕಲ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಹಿಳೆ ಚಲಾಯಿಸಿಕೊಂಡು ಬಂದ ಕಾರೊಂದು ಹಿಂದಿನಿಂದ ಶಿವಪ್ರಸಾದ್ ಅವರ ಸೈಕಲ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಶಿವಪ್ರಸಾದ್ ಡಿವೈಡರ್ ಮೇಲೆ ಬಿದ್ದು ಗಂಭೀರ …

ಸೈಕಲ್ ಗೆ ಕಾರು ಡಿಕ್ಕಿ ಹೊಡೆದು ಬಂಟ್ವಾಳದ ಯುವಕ ಸಾವು! Read More »

ಮಂಗಳೂರು: ಚಲಿಸುತ್ತಿದ್ದ ಜೀಪ್ ಪಲ್ಟಿ ; ಯುವತಿ ಸಾವು, ಮೂವರಿಗೆ ಗಾಯ!

ಮಂಗಳೂರು: ತಿರುವಿನಲ್ಲಿ ಚಲಿಸುತ್ತಿದ್ದ ಜೀಪ್ ಪಲ್ಟಿಯಾಗಿಯುವತಿಯೊಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಮುಂಡೂರು ಸಂಕಲಕರಿಯದಲ್ಲಿ ನಡೆದಿದೆ. ಬೆಳ್ವಣ್ -ಸಂಕಲಕರಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದು, ತಿರುವಿನಲ್ಲಿ ಆಕಸ್ಮಿಕವಾಗಿ ಜೀಪ್ ಸ್ಕಿಡ್ ಆಗಿ ರಸ್ತೆಗೆ ಪಲ್ಟಿಯಾಗಿದೆ. ಘಟನೆಯ ವೇಳೆ ಜೀಪ್ ನಲ್ಲಿ ಚಾಲಕ ಸೇರಿ ಐದು ಜನರಿದ್ದರು. ಈ ಜೀಪ್ ನಾನಿಲ್ತಾರ್ ನ ಜಯರಾಮ ಎಂಬವರಿಗೆ ಸೇರಿದ್ದಾಗಿದ್ದು, ಜೀಪನ್ನು ಭಾಸ್ಕರ ಎಂಬವರುಚಲಾಯಿಸುತ್ತಿದ್ದರು. ಅಪಘಾತದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಬಂಟ್ವಾಳ : ಭೀಕರ ರಸ್ತೆ ಅಪಘಾತಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಮೃತ್ಯು!!

ಬಂಟ್ವಾಳದಲ್ಲಿ ಬೈಕ್ ಹಾಗೂ ಟಿಪ್ಪರ್ ನಡುವೆ ನಡೆದ ಭೀಕರ ರಸ್ತೆ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ಸೊರ್ನಾಡು ಎಂಬಲ್ಲಿ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದೆ. ಮೃತ ಯುವಕರನ್ನು ಲೊರೆಟ್ಟೋ ಪದವು ನಿವಾಸಿಗಳಾದ ನಿತಿನ್ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ. ಮೃತರಲ್ಲಿ ಓರ್ವ ಮೆಕ್ಯಾನಿಕ್ ಆಗಿದ್ದು, ಇನ್ನೊರ್ವ ಪಿಕ್ ಅಪ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕರ್ತವ್ಯ ಮುಗಿಸಿ ಇಬ್ಬರೂ ಒಂದೇ ಬೈಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. …

ಬಂಟ್ವಾಳ : ಭೀಕರ ರಸ್ತೆ ಅಪಘಾತಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಮೃತ್ಯು!! Read More »

ಅಂಗಡಿಗೆ ಹೋಗಿ ಬರುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ರಣ ರಕ್ಕಸ ಲಾರಿ !! | ‘ನನ್ನ ಹೊಟ್ಟೆ ಕಟ್ಟಾಗಿದೆ’ ಎನ್ನುತ್ತಲೇ ಪ್ರಾಣ ಬಿಟ್ಟ ಬಾಲಕ

ಬೆಳಗಾವಿ : ಬಾಲಕನೊಬ್ಬ ಅಂಗಡಿಗೆ ಹೋಗಿ ಬರುವಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಚಕ್ರಕ್ಕೆ ಬಾಲಕ ಸಿಲುಕಿ ಮೃತಪಟ್ಟ ಭಯಾನಕ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗೀರಗಾಂವ ಗ್ರಾಮದಲ್ಲಿ ನಡೆದಿದೆ. ಲಾರಿ ಅತೀ ವೇಗದಲ್ಲಿದ್ದ ಪರಿಣಾಮ ಬಾಲಕ ಸಮೇತ ಲಾರಿ ಚಕ್ರ ದೂರದಲ್ಲಿದ್ದ ಚರಂಡಿಯೊಳಗೆ ಹೋಗಿ ಸಿಲುಕಿಕೊಂಡಿದೆ. ದುರದೃಷ್ಟವಶಾತ್‌ ಆ ಬಾಲಕನ ದೇಹದ ಸೊಂಟದವರೆಗಿನ ಅರ್ಧ ಭಾಗ ಹೊರಗಿದ್ರೆ, ಇನ್ನಾರ್ಧ ಭಾಗ ಚರಂಡಿ ಹಾಗೂ ಲಾರಿ ಚಕ್ರದ ನಡುವೆ ಸಿಲುಕಿತ್ತು. ಅಲ್ಲಿದ್ದ ಜನರೆಲ್ಲಾ ಬಾಲಕನ್ನು ಹೊರತೆಗೆಯಲು …

ಅಂಗಡಿಗೆ ಹೋಗಿ ಬರುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ರಣ ರಕ್ಕಸ ಲಾರಿ !! | ‘ನನ್ನ ಹೊಟ್ಟೆ ಕಟ್ಟಾಗಿದೆ’ ಎನ್ನುತ್ತಲೇ ಪ್ರಾಣ ಬಿಟ್ಟ ಬಾಲಕ Read More »

ಮಂಗಳೂರು: ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ | ಭೀಕರ ಅಪಘಾತದಲ್ಲಿ ಸಾವು ಕಂಡ ಅಪ್ಪ-ಮಗಳು

ಮಂಗಳೂರು: ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿದ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಅಪ್ಪ -ಮಗಳು ದುರಂತ ಅಂತ್ಯ ಕಂಡ ಘಟನೆ ಗಂಜಿಮಠ ಬಳಿಯ ಸೂರಲ್ಪಾಡಿಯಲ್ಲಿ ನಡೆದಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ರಾಣೆಬೆನ್ನೂರಿನ ಪುಂಡಲೀಕಪ್ಪ (62) ಮತ್ತು ಅವರ ಪುತ್ರಿ ಅಶ್ವಿನಿ (29) ಎಂದು ಗುರುತಿಸಲಾಗಿದೆ. ಪುಂಡಲೀಕಪ್ಪ ಅವರಿಗೆ ಅನಾರೋಗ್ಯ ಇದ್ದುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರಿನಲ್ಲಿ ಮಂಗಳೂರಿಗೆ ಕರೆತರಲಾಗುತ್ತಿತ್ತು. ವ್ಯಾಗನಾರ್ ಕಾರಿನಲ್ಲಿ ಕುಟುಂಬ ಸಮೇತ ಜೂನ್ 2ರ ರಾತ್ರಿ ಹೊರಟಿದ್ದರು. ಮರುದಿನ ನಸುಕಿನ ಜಾವ ಕಾರು ಮೂಡುಬಿದ್ರೆ …

ಮಂಗಳೂರು: ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ | ಭೀಕರ ಅಪಘಾತದಲ್ಲಿ ಸಾವು ಕಂಡ ಅಪ್ಪ-ಮಗಳು Read More »

ಟ್ಯಾಂಕರ್ ಹಾಗೂ ಮಾರುತಿ ಕಾರಿನ ಮಧ್ಯೆ ಭೀಕರ ಅಪಘಾತ |

ಬಂಟ್ವಾಳ: ಟ್ಯಾಂಕರ್ ಹಾಗೂ ಮಾರುತಿ ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿ, ಕಾರು ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಚಂಡ್ತಿಮಾರ್ ಬಳಿ ಇಂದು ಮಧ್ಯಾಹ್ನ ನಡೆದಿದೆ. ಗಂಭೀರ ಗಾಯಗೊಂಡವರು ಮಡಂತ್ಯಾರಿನ ಕಾಟರಿಂಗ್ ಉದ್ಯಮಿ ರೋಶನ್ ಸೆರಾವೊ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಿ.ಸಿ.ರೋಡ್ ಪುಂಜಾಲಕಟ್ಟೆ ಹೆದ್ದಾರಿಯ ಬಂಟ್ವಾಳ ಸಮೀಪದ ಚಂಡ್ತಿಮಾರ್ ಎಂಬಲ್ಲಿ ಈ ಭೀಕರ ಅಪಘಾತ ನಡೆದಿದ್ದು, ಎರಡೂ ವಾಹನಗಳು ಜಖಂಗೊಂಡಿದ್ದು, ಕಾರು ರಸ್ತೆಯ ಪಕ್ಕಕ್ಕೆ ಇಳಿದಿದೆ. ಬಂಟ್ವಾಳ ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ …

ಟ್ಯಾಂಕರ್ ಹಾಗೂ ಮಾರುತಿ ಕಾರಿನ ಮಧ್ಯೆ ಭೀಕರ ಅಪಘಾತ | Read More »

ಕಾಸರಗೋಡು:ಸ್ಕೂಟರ್ ಗೆ ಪಿಕಪ್ ಡಿಕ್ಕಿ -ಸ್ಕೂಟರ್ ಸವಾರ ಸಾವು

ಕಾಸರಗೋಡು:ಹೊರವಲಯದ ಚೆಂಗಳ ನಾಲ್ಕನೇ ಮೈಲ್‌ನಲ್ಲಿ ಸ್ಕೂಟರ್ ಗೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ದುರ್ದೈವಿ ಬೋವಿಕ್ಕಾನ ಕರಿವೇಡಗದ ಅಬೂಬಕ್ಕರ್ ಸಿದ್ದಿಕ್ (24). ಮೃತರ ಜೊತೆಗಿದ್ದ ಶಮೀಸ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.ಸಿದ್ಧಿಕ್ ವಿಸಿಟಿಂಗ್ ವೀಸಾದಲ್ಲಿ ದುಬೈಗೆ ತೆರಳಿ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದನು ಎನ್ನಲಾಗಿದೆ.

ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರು|ಸ್ಥಳದಲ್ಲೇ ಮೂವರು ಮೃತ್ಯು-ಮಗುವಿನ ಸ್ಥಿತಿ ಗಂಭೀರ

ತುಮಕೂರು: ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು,ಈ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟು, ಮಗುವೊಂದು ಗಂಭೀರವಾಗಿ ಗಾಯಗೊಂಡಿದೆ. ಈ ಭೀಕರ ಅಪಘಾತ ಭಾನುವಾರ ಬೆಳಗ್ಗೆ ತುಮಕೂರು ತಾಲೂಕಿನ ಕಟ್ಟಿಗೇನಗಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಂಭವಿಸಿದ್ದು,ಕಾರಿನಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದರು. ಕಟ್ಟಿಗೇನಗಹಳ್ಳಿ ಗೇಟ್ ನ ರಸ್ತೆಬದಿ ಪೂನಾ ಕಡೆ ತೆರಳಲು ಲಾರಿಯೊಂದು ನಿಂತಿತ್ತು. ತುಮಕೂರು ಕಡೆಯಿಂದ ಶಿರಾದತ್ತ ತೆರಳುತ್ತಿದ್ದ ಕಾರು ಲಾರಿಗೆ ಡಿಕ್ಕಿಯಾಗಿದೆ.ಕಾರಿನಲ್ಲಿದ್ದವರ ಪೈಕಿ ಸ್ಥಳದಲ್ಲೇ …

ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರು|ಸ್ಥಳದಲ್ಲೇ ಮೂವರು ಮೃತ್ಯು-ಮಗುವಿನ ಸ್ಥಿತಿ ಗಂಭೀರ Read More »

ಮಂಗಳೂರು : ರಸ್ತೆ ಅಪಘಾತವೊಂದರಲ್ಲಿ ವಿದ್ಯಾರ್ಥಿ ದಾರುಣ ಸಾವು!

ಮಂಗಳೂರು : ನಗರ ಹೊರವಲಯದ ಶಕ್ತಿನಗರ ಪದವು ಎಂಬಲ್ಲಿ ಸೋಮವಾರ ಅಪರಾಹ್ನ ರಸ್ತೆ ಅಪಘಾತವೊಂದರಲ್ಲಿ ವಿದ್ಯಾರ್ಥಿ ಪ್ರಜ್ವಲ್ ಸಾಲ್ಯಾನ್ ( 18) ಮೃತಪಟ್ಟಿದ್ದಾನೆ. ಬೈಕ್ ಗೆ ಡಿಕ್ಕಿ ಹೊಡೆದ ಬಸ್ ಬಳಿಕ ಪ್ರಜ್ವಲ್ ರ ದೇಹದ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಶಕ್ತಿನಗರ ರುದ್ರಭೂಮಿ ಸಮೀಪದ ನಿವಾಸಿಯಾಗಿರುವ ಪ್ರಜ್ವಲ್ ಸಾಲ್ಯಾನ್ ನಗರದ ಶಿಕ್ಷಣ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ.

error: Content is protected !!
Scroll to Top