ದಿನಾಂಕ 30 9 2026 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಾಪುರ ಇಲ್ಲಿ ಮಕ್ಕಳ ಕಲಿಕೆಗೆ ಸಹಾಯಕವಾಗುವಂತೆ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ನವರು ನೀಡಿದ ಮೂರು ಕಂಪ್ಯೂಟರ್ ಹಾಗೂ ಒಂದು ಪ್ರಿಂಟರ್ ಹಸ್ತಾಂತರಿಸಲಾಯಿತು.
Sponsoredಮಂಗಳೂರು ವಲಯದ ಸಿ ಎಸ್ ಆರ್ ಯೋಜನೆಯ ಮುಖ್ಯಸ್ಥರಾದ ಶ್ರೀ ಪ್ರಸಾದ್ ಕುಮಾರ್ ಇವರು ಮುಖ್ಯ ಶಿಕ್ಷಕರಾದ ಸೋಮ ನಾಯಕ್ ಮತ್ತು ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಪ್ರಸಾದ್ ಶೆಟ್ಟಿ ಇವರಿಗೆ ಹಸ್ತಾಂತರಿಸಿದರು.
ಶ್ರೀ ನೆಲ್ಸನ್ ಡಿಸೋಜ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಉಡುಪಿ ಕ್ಲಸ್ಟರ್ನ ಮುಖ್ಯಸ್ಥರನ್ನು ಶ್ರೀ ಸಂಪಿಗೆಡಿ ಸಂಜೀವ್ ಶೆಟ್ಟಿ ಇವರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಮುತ್ತೂಟ್ ಫೈನಾನ್ಸ್ನ ಪ್ರವೀಣ್ ಪ್ರಾಂಕ್, ಮುತ್ತೂಟ್ ಫೈನಾನ್ಸ್ ಸಿದ್ದಾಪುರ ಶಾಖೆಯ ಮುಖ್ಯಸ್ಥರಾದ ಸಂದೀಪ್ ಖಾರ್ವಿ ಉಪಸ್ಥಿತರಿದ್ದರು.
ಶಾಲಾ ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಸಂಪಿಗೇಡಿ ಸಂಜೀವ ಶೆಟ್ಟಿ ಮಾತನಾಡಿ ಶಾಲೆಯ ಉತ್ತರೋತ್ತರ ಪ್ರಗತಿಯನ್ನು ಕೊಂಡಾಡಿದರು. ಈ ಎಲ್ಲಾ ಪ್ರಗತಿಗೆ ಕಾರಣೀಕರ್ತರಾದ ವಾರ್ಷಿಕೋತ್ಸವ ಸಮಿತಿ ಮತ್ತು ಎಸ್ಡಿಎಂಸಿಯನ್ನು ಅಭಿನಂದಿಸಿದರು. ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ನಾಯಕ್ ಇವರು ಸಿಎಸ್ಆರ್ ಸಹಾಯಧನವನ್ನು ಶಾಲೆಗೆ ತಂದ ಬಗೆಯನ್ನು ವಿವರಿಸಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಪ್ರಸಾದ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವ ಸಮಿತಿಯ ಖಜಾಂಚಿಯಾದ ಶ್ರೀ ಗಣೇಶ್ ಶೇಟ್, ಕಾರ್ಯದರ್ಶಿಯಾದ ಶ್ರೀ ಸತ್ಯನಾಥ ಆಚಾರ್ಯ, ಸರ್ಕಾರಿ ಪ್ರೌಢಶಾಲೆಯ ಶ್ರೀ ಉದಯ್ ಬಳಗಾರ್, ಶ್ರೀ ಗೋಪಾಲ್ ಕಾಂಚನ್, ಶ್ರೀ ಭಾಸ್ಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಸೋಮ ನಾಯ್ಕ ಇವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀಧರ್ ಎಸ್ ಸಿದ್ದಾಪುರ ನಿರೂಪಿಸಿದರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸುಂದರ್ ನಾಯ್ಕ ವಂದಿಸಿದರು.




