ಬೆಂಗಳೂರಿನ ಅತಿದೊಡ್ಡ ಅಂತರರಾಷ್ಟ್ರೀಯ ಕಲಾ ಪ್ರದರ್ಶನ

Bangalore: ಜೈನ್ (ಡೀಮ್ಡ್-ಟು-ಬಿ) ಯೂನಿವರ್ಸಿಟಿಯ ಶಾಂತಮಣಿ ಕಲಾಕೇಂದ್ರ ಹಾಗೂ ದಿ ಸ್ಕೂಲ್ ಆಫ್ ಡಿಸ್ಟ್ಸ್ ಒಗ್ಗೂಡಿ ಆಯೋಜಿಸಿದ್ದ ಬೆಂಗಳೂರಿನ ಅತಿದೊಡ್ಡ ಅಂತರರಾಷ್ಟ್ರೀಯ ಕಲಾ ಪ್ರದರ್ಶನವು ಡಿಸೆಂಬರ್ 28 ರಿಂದ 30 ರವರೆಗೆ ಜೈನ್ ಗ್ರೂಪ್ ನ ಒಂದು ಭಾಗವಾದ ನಾಲೆಡ್ಜಿಎಂ ಅಕಾಡೆಮಿಯಲ್ಲಿ ನಡೆಯಿತು.
ಈ ವಿಶೇಷ ಕಲಾ ಪ್ರದರ್ಶನವು ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುವುದರೊಂದಿಗೆ ದೇಶದಾದ್ಯಂತ 144 ಕಲಾವಿದರನ್ನು ಒಟ್ಟುಗೂಡಿಸಿತು. ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಫೋಟೋಗ್ರಫಿ ಮತ್ತು ಡಿಜಿಟಲ್ ಕಲೆ ಸೇರಿದಂತೆ ಅಪೂರ್ವ ಕಲಾಕೃತಿಗಳ ಪ್ರದರ್ಶನವನ್ನು ಪ್ರದರ್ಶಿಸಿ ನಗರದಾದ್ಯಂತದ ಕಲಾ ಪ್ರೇಮಿಗಳನ್ನು ಮತ್ತು ಕುಟುಂಬಗಳನ್ನು ಆಕರ್ಷಿಸಿತು.