ಬುಧವಾರ, 4 ನವೆಂಬರ್ 2026

ದರ್ಶನ್‌ ವಿರುದ್ಧ ಮಾಫಿ ಸಾಕ್ಷಿ ನುಡಿದ ಪ್ರದೋಷ್‌ಗೆ ಮಧ್ಯಂತರ ಜಾಮೀನು ಮಂಜೂರು

Advertisement
Advertisement

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊ*** ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್‌ ರಾವ್‌ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌, ಅವರ ತಂದೆಯ ವಾರ್ಷಿಕ ಪಿತೃಕಾರ್ಯದಲ್ಲಿ ಭಾಗವಹಿಸಲು ಕಠಿಣ ಷರತ್ತುಗಳೊಂದಿಗೆ ಅನುಮತಿ ನೀಡಿ ಆದೇಶಿಸಿದೆ.

Sponsored

20 ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಬೇಕೆಂದು ಕೋರಿ ಮಾಫಿ ಸಾಕ್ಷಿ ಪ್ರದೋಷ್‌ ರಾವ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಈ ಅರ್ಜಿಯ ಸುದೀರ್ಘ ವಿಚಾರಣೆ ಮಾಡಿ, ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ನ.7 ರಿಂದ ನ.12 ರವರೆಗೆ ಪಿತೃಕಾರ್ಯದಲ್ಲಿ ಭಾಗವಹಿಸಲು ಸಮ್ಮತಿ ನೀಡಿದೆ.

Advertisement
Advertisement

ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಜೈಲಿನಿಂದ ಪ್ರದೋಷ್‌ನನ್ನು ಕರೆತಂದು, ಪಿತೃಕಾರ್ಯ ಮುಗಿದ ನಂತರ ಸಂಜೆ 6 ಗಂಟೆಗೆ ಮರಳಿ ಜೈಲಿಗೆ ಕರೆದೊಯ್ಯಬೇಕು. ಜೈಲಿನಿಂದ ಕರೆತರುವಾಗ ಮತ್ತು ಕರೆದೊಯ್ಯುವಾಗ ʼನಗರ ಸಶಸತ್ರ ರಿಸರ್ವ್‌ʼ ಪೊಲೀಸ್‌ ಬೆಂಗಾವಲು ಪಡೆ ಇರಬೇಕು.

Advertisement

ಪಿತೃಕಾರ್ಯದಲ್ಲಿ ಭಾಗವಹಿಸುವ ಕುಟುಂಬಸ್ಥರು/ ಸಂಬಂಧಿಕರು ಹಾಗೂ ಪೂಜೆ ನಡೆಸಿಕೊಡುವ ಪುರೋಹಿತರ ಹೆಸರುಗಳ ಸಂಪೂರ್ಣ ಪಟ್ಟಿ ಪೊಲೀಸರಿಗೆ ನೀಡಬೇಕು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಕುರಿತು ಯಾವುದೇ ವ್ಯಕ್ತಿಗಳು, ಸಾಕ್ಷಿಗಳು, ಆರೋಪಿಗಳನ್ನು ಭೇಟಿಯಾಗಲು ಸಂಪರ್ಕಿಸಲು ಅವಕಾಶವಿಲ್ಲ.

Advertisement
Advertisement