ಬುಧವಾರ, 4 ನವೆಂಬರ್ 2026

ಮಂಗಳೂರು: ಬೈಕಂಪಾಡಿಯಲ್ಲಿ ಅಕ್ರಮ ಗೋ ಸಾಗಾಟ ಪತ್ತೆ: 16 ಗೋವುಗಳ ರಕ್ಷಣೆ, ಲಾರಿ ವಶಕ್ಕೆ

Advertisement
Advertisement

ಮಂಗಳೂರು: ಬೈಕಂಪಾಡಿ ಸಮೀಪ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪಣಂಬೂರು ಪೊಲೀಸರು ತಡೆದು ಅದರಲ್ಲಿದ್ದ 16 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.

Sponsored

ಬುಧವಾರ ಮುಂಜಾನೆ ಬಜರಂಗಳದ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬೈಕಂಪಾಡಿ ಪರಿಸರದಲ್ಲಿ ಕೆಎ 19 ಎಬ 2715 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ತಪಾಸಣೆ ಮಾಡಿದಾಗ, ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಸಾಗಾಟ ಮಾಡುವುದು ಕಂಡು ಬಂದಿದೆ.

Advertisement
Advertisement

ತಕ್ಷಣ ಕಾರ್ಯಾಚರಣೆ ಮಾಡಿದ ಪಣಂಬೂರು ಪೊಲೀಸರು ಲಾರಿಯಲ್ಲಿದ್ದ 16 ಗೋವುಗಳನ್ನು ರಕ್ಷಣೆ ಮಾಡಿದ್ದು, ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Advertisement

ಪ್ರಕರಣಕ್ಕೆ ಕುರಿತಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Advertisement
Advertisement