Lip Lock Viral Video: ಚಲಿಸೋ ಕಾರಿನ ಮೇಲೆ ‘ಸರಸ’ವಾಡಿದ ಜೋಡಿಗಳು – ವೈರಲ್ ಆಯ್ತು ಲಿಪ್’ಲಾಕ್ ವೀಡಿಯೋ

Viral video Hyderabad couple kisses over car sun roof video goes Viral

Lip Lock Viral Video: ಇತ್ತಿಚೆಗೆ ವಾಹನಗಳಲ್ಲಿ ಪ್ರಯಾಣಿಸುವ ಹೆಚ್ಚಿನ ಮಂದಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಬೈಕಿನಲ್ಲಿ, ರೊಮ್ಯಾನ್ಸ್ ಮಾಡುವ ವಿಡಿಯೋಗಳು ಆಗಾಗ ಕಾಣಸಿಗುತ್ತವೆ. ಇದೀಗ, ಚಲಿಸುತ್ತಿರುವ ಕಾರಿನ (car)ಮೇಲೆ ಕೂತು ರೋಮ್ಯಾನ್ಸ್ (Romance)ಮಾಡಿರುವ ವೀಡಿಯೋ ವೈರಲ್(Viral Video)ಆಗಿದ್ದು, ಈ ವೀಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಹೈದರಾಬಾದ್ನಲ್ಲಿ(Hyderabad) ಚಲಿಸುತ್ತಿರುವ ಕಾರಿನ ಮೇಲೆ (ಸನ್‌ ರೂಫ್) ಮೇಲೆ ಕುಳಿತ ಕೂತು ಜೋಡಿಯೊಂದು ಪರಸ್ಪರ ಚುಂಬಿಸುತ್ತ, ಲಿಪ್‌ ಲಾಕ್‌( Lip lock)ಮಾಡಿಕೊಂಡು ಹಾಯಾಗಿ ಹೋಗುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ(Social media)ವೈರಲ್‌ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.ಈ ಘಟನೆ ಹೈದರಾಬಾದ್‌ನಲ್ಲಿರುವ ಪಿವಿ ನರಸಿಂಹರಾವ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ ಎನ್ನಲಾಗಿದೆ. ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ವಾಹನ ಚಾಲನೆ ಮಾಡುವ ಜೊತೆಗೆ ಅಸಭ್ಯವಾಗಿ ವರ್ತಿಸುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಈ ನಡುವೆ ಈ ಜೋಡಿಯ ಹುಚ್ಚಾಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸಂಚಾರ ನಿಯಮವನ್ನು ಉಲ್ಲಂಘನೆಯ ಜೊತೆಗೆ ಸಂಚಾರ ನಡೆಸುವ ರಸ್ತೆಯಲ್ಲಿ ಹುಚ್ಚಾಟ ನಡೆಸಿ ಅಪಾಯಕ್ಕೆ ಆಹ್ವಾನ ಮಾಡಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದರ ನಡುವೆ, ಈ ರೀತಿ ಬೇಜವಾಬ್ದಾರಿ ಧೋರಣೆಯಿಂದ ಅಜಾಗರೂಕರಾಗಿ ಚಾಲನೆ ಮಾಡಿದವರ ವಿರುದ್ಧ ಹೈದರಾಬಾದ್ ಪೊಲೀಸರು ಕ್ರಮಕೈಗೊಳ್ಳಬೇಕೆಂದು ನೆಟ್ಟಿಗರು ಮನವಿ ಮಾಡಿದ್ದಾರೆ.

 

ಇದನ್ನು ಓದಿ: Katrina Kaif Tiger 3 Trailer: ಕತ್ರಿನಾ ಕೈಫ್‌ ಸಿಂಗಲ್‌ ಟವೆಲ್‌ ಫೈಟಿಂಗ್‌!! ಅಭಿಮಾನಿಗಳ ಹೃದಯ ಬಡಿತ ಸ್ಟಾಪ್‌, ವಿಡಿಯೋ ನೋಡಿದವರು ಫುಲ್‌ ಶಾಕ್‌!

Leave A Reply

Your email address will not be published.