ಸೋಮವಾರ, 26 ಅಕ್ಟೋಬರ್ 2026
Trending

NRI : ಭಾರತೀಯರಿಗೆ ಸಿಹಿಸುದ್ದಿ ; ಈ ದೇಶಗಳು ಸರಾಗಗೊಳಿಸಿತು ವೀಸಾ ಪ್ರಕ್ರಿಯೆ!!

ಸದ್ಯ ನಾಲ್ಕು ದೇಶಗಳು ಪ್ರವೇಶ ಪರವಾನಗಿಗಳನ್ನು ಬಯಸುವ ಭಾರತೀಯರಿಗೆ ವೀಸಾ (visa) ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಯೋಜನೆಗಳು ಅಥವಾ ಉದ್ದೇಶಗಳನ್ನು ಘೋಷಿಸಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.

NRI

NRI : ದೇಶದ ಜನರು ವಿದೇಶಗಳಲ್ಲಿಯೂ ವಾಸಿಸುತ್ತಿದ್ದಾರೆ. ಭಾರತೀಯರು (Indians) ಪ್ರೇಕ್ಷಣೀಯ ಸ್ಥಳ, ವಿದೇಶದ ಸೊಬಗು ಆನಂದಿಸಲು ಅಥವಾ ಕೆಲಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಇದೀಗ ಕೆಲವು ರಾಷ್ಟ್ರಗಳು ಭಾರತೀಯರಿಗೆಂದೇ ವೀಸಾ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತಿದೆ (NRI).

Sponsored

ಹಲವು ದೇಶಗಳು ಭಾರತೀಯ ಪಾಸ್‌ಪೋರ್ಟ್ (Indian passport) ಹೊಂದಿರುವವರಿಗೆ ಸುಲಭ ಪ್ರವೇಶವನ್ನು ಒದಗಿಸಲು ಸಿದ್ಧವಿದೆ. ಸದ್ಯ ನಾಲ್ಕು ದೇಶಗಳು ಪ್ರವೇಶ ಪರವಾನಗಿಗಳನ್ನು ಬಯಸುವ ಭಾರತೀಯರಿಗೆ ವೀಸಾ (visa) ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಯೋಜನೆಗಳು ಅಥವಾ ಉದ್ದೇಶಗಳನ್ನು ಘೋಷಿಸಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.

Advertisement
Advertisement

ಇಂಗ್ಲೆಂಡ್ (England): ಯುಕೆ ಮತ್ತು ಭಾರತವು (india) ಯುವ ವೃತ್ತಿಪರರ ಯೋಜನೆಯನ್ನು (YPS) ಪರಿಚಯಿಸಿದೆ. ಇದರ ಅಡಿಯಲ್ಲಿ, 18 ರಿಂದ 30 ವರ್ಷದೊಳಗಿನ ಭಾರತೀಯ ಮತ್ತು ಬ್ರಿಟಿಷ್ ಪ್ರಜೆಗಳು ಎರಡು ವರ್ಷಗಳವರೆಗೆ ಎರಡೂ ದೇಶಗಳಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ನಿರ್ದಿಷ್ಟ ಮಾನದಂಡಗಳನ್ನು ಹೊಂದಿರಲಿದ್ದು, ಶುಲ್ಕವನ್ನು 720 ಪೌಂಡ್‌’ಗಳಿಗೆ ನಿಗದಿಪಡಿಸಲಾಗಿದೆ. ಈ ಬಗ್ಗೆ ಅರ್ಜಿದಾರರ ವಿವರಗಳೊಂದಿಗೆ ಭಾರತೀಯ ಹೈಕಮಿಷನ್ ವೆಬ್‌ಸೈಟ್’ನಲ್ಲಿ ಮಾಹಿತಿ ನೀಡಲಾಗಿದೆ. E-1 ವೀಸಾ ಅಡಿಯಲ್ಲಿ ಅರ್ಜಿಯನ್ನು VFS ಗ್ಲೋಬಲ್ ವೀಸಾ ಸೇವಾ ಪೂರೈಕೆದಾರರ ಮೂಲಕ ಮಾಡಲಾಗುತ್ತದೆ. ಅರ್ಜಿಯನ್ನು ಸಲ್ಲಿಸುವಾಗ ಪ್ರತಿ ಅರ್ಜಿದಾರರು ಕನಿಷ್ಠ 30 ದಿನಗಳವರೆಗೆ ಹಿಡಿದಿರುವ ರೂ.250,000 ಗೆ ಸಮನಾದ ಹಣವನ್ನು ಸಲ್ಲಿಸಬೇಕು.

ರಷ್ಯಾ (Russia): ರಾಜ್ಯ ಸುದ್ದಿ ಸಂಸ್ಥೆ TASS, ಭಾರತ, ಸಿರಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಆರು ದೇಶಗಳಿಗೆ ವೀಸಾ ಕಾರ್ಯವಿಧಾನಗಳನ್ನು ಸರಾಗಗೊಳಿಸುವ ಬಗ್ಗೆ ರಷ್ಯಾ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಮಾಡಿದ್ದು, ಸೌದಿ ಅರೇಬಿಯಾ, ಬಾರ್ಬಡೋಸ್, ಹೈಟಿ, ಜಾಂಬಿಯಾ, ಕುವೈತ್, ಮಲೇಷ್ಯಾ, ಮೆಕ್ಸಿಕೊ ಮತ್ತು ಟ್ರಿನಿಡಾಡ್ ಸೇರಿದಂತೆ 11 ದೇಶಗಳೊಂದಿಗೆ ವೀಸಾ ಮುಕ್ತ ಪ್ರಯಾಣದ ಕುರಿತು ರಷ್ಯಾ ಅಂತರ್‌ಸರ್ಕಾರಿ ಒಪ್ಪಂದಗಳನ್ನು ಸಹ ಸಿದ್ಧಪಡಿಸುತ್ತಿದೆ ಎಂದು TASS ತಿಳಿಸಿದೆ. “ಭಾರತದ ಹೊರತಾಗಿ ಅಂಗೋಲಾ, ವಿಯೆಟ್ನಾಂ, ಇಂಡೋನೇಷ್ಯಾ, ಸಿರಿಯಾ ಮತ್ತು ಫಿಲಿಪೈನ್ಸ್‌ನೊಂದಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಅಲ್ಲಿನ ಸಚಿವಾಲಯ ತಿಳಿಸಿದೆ.

ಜರ್ಮನಿ: ಜರ್ಮನಿಯ ಪ್ರಧಾನ ಮಂತ್ರಿ ಓಲಾಫ್ ಸ್ಕೋಲ್ಜ್ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದು, ಈ ವೇಳೆ ನುರಿತ ಕೆಲಸಗಾರರ ಕೊರತೆಯಿಂದ ದೇಶವು ಹೆಣಗಾಡುತ್ತಿದ್ದು, ಇದರಿಂದಾಗಿ ಭಾರತದಿಂದ ಐಟಿ ವೃತ್ತಿಪರರು ಜರ್ಮನಿಯಲ್ಲಿ ಕೆಲಸದ ವೀಸಾವನ್ನು ಪಡೆಯಲು ತಮ್ಮ ಸರ್ಕಾರವು ಬಯಸಿದೆ ಎಂದು ಹೇಳಿದರು. ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಕೋಲ್ಸ್, “ವೀಸಾ ನೀಡಿಕೆಯನ್ನು ಸುಲಭಗೊಳಿಸಲು ನಾವು ಬಯಸುತ್ತೇವೆ ” ಎಂದು ಹೇಳಿದರು.

ಅಮೇರಿಕಾ (America): ಭಾರತದಲ್ಲಿ ಯುಎಸ್ ವೀಸಾಗಳಿಗಾಗಿ ಹೆಚ್ಚು ಕಾಲ ಕಾಯುವ ಸಮಯವನ್ನು ಉದ್ದೇಶಿಸಿ ಮಾತನಾಡಿದ ಯುಎಸ್ ಅಧಿಕಾರಿಯೊಬ್ಬರು, ಈ ವರ್ಷದ ನಂತರ, H-1 ಮತ್ತು L-1 ವೀಸಾಗಳನ್ನು ಒಳಗೊಂಡಂತೆ ವೀಸಾ ಅಪ್ಡೇಟ್’ಗಳಿಗಾಗಿ ಯುನೈಟೆಡ್ ಸ್ಟೇಟ್ಸ್ ವೀಸಾ ಸ್ಟಾಂಪಿಂಗ್ ಕಾರ್ಯಕ್ರಮವನ್ನು ಪ್ರಾರಂಭಿಸುತ್ತದೆ ಎಂದು ಹೇಳಿದರು. ಪ್ರಾಯೋಗಿಕ ಆಧಾರದ ಮೇಲೆ ಕೆಲವು ವಿಭಾಗಗಳಲ್ಲಿ ದೇಶೀಯ ವೀಸಾ ಮರುಮೌಲ್ಯಮಾಪನವನ್ನು ತ್ವರಿತಗೊಳಿಸುವ ಪ್ರಯತ್ನಗಳಿವೆ ಎಂದು ವಿದೇಶಾಂಗ ಇಲಾಖೆಯ ಪ್ರತಿನಿಧಿ ಸುದ್ದಿಗಾರರಿಗೆ ತಿಳಿಸಿದರು. ವ್ಯಾಪಾರಕ್ಕಾಗಿ ಬೇರೆ ದೇಶಕ್ಕೆ ಪ್ರಯಾಣಿಸುವ ಭಾರತೀಯ ಅರ್ಜಿದಾರರು ಯುಎಸ್ ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Comments are closed.