Kabzaa Collection breaking all records: 2ನೇ ದಿನಕ್ಕೆ 100 ಕೋಟಿ ಬಾಚಿದ ‘ಕಬ್ಜ’ ; ಅಕೇಶ್ವರನ ಅಬ್ಬರಕ್ಕೆ ದಾಖಲೆಗಳೆಲ್ಲಾ ಉಡೀಸ್ !

Kabzaa Collection breaking records : 50 ದೇಶ, 5 ಭಾಷೆ, 4000 ಸ್ಕ್ರೀನ್ ನಲ್ಲಿ ವಿಶ್ವದ ಮೂಲೆ‌ ಮೂಲೆಯಲ್ಲೂ ಪ್ರದರ್ಶನಗೊಳ್ಳುತ್ತಿದೆ ಅಕೇಶ್ವರನ ಘರ್ಜನೆಗೆ ‘ಕಬ್ಜ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಝಣ್ ಝಣ್ ದುಡ್ಡು ಬಾಚಿಕೊಂಡು ಕಮಾಲ್ (Kabzaa Collection breaking records)ಸೃಷ್ಟಿಸಿದೆ. ಕಬ್ಜ ಚಿತ್ರವು ಬಿಡುಗಡೆಯಾಗಿ ಕೇವಲ 2ನೇ ದಿನಕ್ಕೆ100 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಆ ಮೂಲಕ ದೊಡ್ಡ ಯಶಸ್ಸು ಕನ್ನಡದ ಇನ್ನೊಂದು ಚಿತ್ರಕ್ಕೆ ಪ್ರಾಪ್ತವಾಗಿದೆ. 120 ಕೋಟಿ ಬಜೆಟ್ಟಿನಲ್ಲಿ ನಿರ್ಮಾಣವಾದ ಈ ಚಿತ್ರವು ಇದೀಗ ಭಾನುವಾರ ಮಧ್ಯಾಹ್ನದ ಹೊತ್ತಿಗೆ ಕೇವಲ ಎರಡುವರೆ ದಿನಗಳಲ್ಲಿ ಹೂಡಿಕೆಯನ್ನು ವಾಪಸ್ಸು ತಂದುಕೊಟ್ಟಿದೆ.

100 ಕೋಟಿ ರೂಪಾಯಿ ಬಾಚಿದ ‘ಕಬ್ಜ’ ದ ಸುದ್ದಿ ಕೇಳಿದ ಕಬ್ಜ ಸಿನಿಮಾ ತಂಡದ ಸೆಲೆಬ್ರೇಷನ್​ ಶುರುವಾಗಿದೆ. ನಿರಂತರ 4 ವರ್ಷದ ಸತತ ಪರಿಶ್ರಮಕ್ಕೆ ಫಲ ಸಿಕ್ಕಿದೆ. ನಿರ್ದೇಶಕ ಆರ್​. ಚಂದ್ರು (R. Chandru) ಅವರ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ ಅಂದರೆ ಮಾರ್ಚ್​ 17 ರಂದು ಭರ್ಜರಿ ಓಪನಿಂಗ್ ಪಡೆದು ಕೊಂಡಿತ್ತು. ಎರಡನೇ ದಿನವೂ ಸಿನಿಮಾ 2ನೇ ದಿನವೂ ಅಬ್ಬರಿಸಿ ಓಡುತ್ತಿದ್ದು, ಈಗ 100 ಕೋಟಿ ರೂಪಾಯಿಗಳನ್ನು ತಿಜೋರಿಗೆ ಹಾಕಿಕೊಂಡು ಕುಳಿತಿದೆ. ಆ ಮೂಲಕ ನಿರ್ಮಾಪಕರಿಗೆ ಭಾರಿ ಲಾಭ ಮಾಡಿಕೊಟ್ಟಿದೆ. ‘ಕಬ್ಜ’ ಸಿನಿಮಾದ 2ನೇ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​ ರಿಪೋರ್ಟ್​ ಲಭ್ಯವಾಗಿದ್ದು, ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್​ (Kabzaa Box Office Collection) ಮಾಡುವ ಮೂಲಕ ಈ ಸಿನಿಮಾ ಜಯಭೇರಿ ಬಾರಿಸಿದೆ. ಹಲವು ವರ್ಷಗಳ ಬಿಡುವಿನ ನಂತರ ಉಪೇಂದ್ರ ಅವರ ವೃತ್ತಿಜೀವನದ ಬಹುದೊಡ್ಡ ಸಿನಿಮಾವಾಗಿ ಈ ಚಿತ್ರ ಹೊರಹೊಮ್ಮಿದೆ. ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​ ಅಭಿಮಾನಿಗಳು ಕೂಡ ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಈ ಚಿತ್ರ 4 ಸಾವಿರ ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ‘ಕಬ್ಜ’ ಸಿನಿಮಾ ಮೂಡಿಬಂದಿದೆ. ಮೊದಲ ದಿನ ಬರೋಬ್ಬರಿ 54 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಎರಡೇ ದಿನದ ಕಲೆಕ್ಷನ್​ ಸೇರಿ ಒಟ್ಟು 100 ಕೋಟಿ ರೂಪಾಯಿ ಆಗಿದೆ ಎಂದು ಚಿತ್ರತಂಡದಿಂದ ಮಾಹಿತಿ ಬರುತ್ತಿದೆ.

Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ
‘ಕಬ್ಜ’ ಚಿತ್ರ ಸೂಪರ್​ ಹಿಟ್​ ಆಗಲು ಹಲವು ಕಾರಣಗಳಿವೆ. ಇದೊಂದು ಮಲ್ಟಿ ಸ್ಟಾರ್ ಅವರ ಚಿತ್ರವಾಗಿದ್ದು ಮೂರು ಜನ ಕನ್ನಡದ ದೊಡ್ಡ ನಾಯಕರುಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಶಿವರಾಜ್ ಕುಮಾರ್ ಮತ್ತು ಸುದೀಪ್ ಈ ಮೂರು ಜನರಿಗೆ ದೊಡ್ಡ ಫ್ಯಾನ್ ಬಳಗವಿದೆ. ಒಂದು ಚಿತ್ರವನ್ನು ಗೆಲ್ಲಿಸಲು ಈ ಮೂರು ಫ್ಯಾನ್ ಬಳಗವೇ ಸಾಕು. ಅದಲ್ಲದೆ, ಮುಖ್ಯವಾಗಿ ನಿರ್ದೇಶಕ ಆರ್​. ಚಂದ್ರು ಅವರ ಶ್ರಮ, ಸ್ಟಾರ್​ ಹೀರೋಗಳ ಸಿನಿಮಾ ಎಂಬ ಕ್ರೇಜ್​, ತೆರೆ ಹಿಂದಿನ ತಂತ್ರಜ್ಞರ ಮ್ಯಾಜಿಕ್, ಚಿತ್ರದ ಮೇಕಿಂಗ್ ಸೇರಿದಂತೆ ಹಲವು ಅಂಶಗಳಿಂದಾಗಿ ಈ ಸಿನಿಮಾ ಗೆದ್ದಿದೆ ಎನ್ನಬಹುದು.

ಉಪೇಂದ್ರ, ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​ ಅವರನ್ನು ಒಟ್ಟಿಗೆ ನೋಡಿ ಅಭಿಮಾನಿಗಳಿಗೆ ಥ್ರಿಲ್​ ಆಗಿದೆ. ಶುಕ್ರವಾರ ಮತ್ತು ಶನಿವಾರ ಮಾತ್ರವಲ್ಲದೇ ಇಂದು ಭಾನುವಾರ (ಮಾ.19) ಕೂಡ ‘ಕಬ್ಜ’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಪರಭಾಷೆಯ ಸೆಲೆಬ್ರಿಟಿಗಳು ಕೂಡ ಈ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ಹೀಗೆಯೇ ಮುಂದುವರಿದರೆ ಈ ಚಿತ್ರ ಹೊಸ ಹೊಸ ದಾಖಲೆಗಳನ್ನು ಬರೆಯಲಿದೆ. ಸಿನಿಮಾದ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಕ್ಸಸ್​ ಮೀಟ್​ ಮಾಡಲಾಗುತ್ತಿದೆಯಂತೆ.

ಇದನ್ನೂ ಓದಿ : Kabzaa: ಕಾಂತಾರ, ಕೆಜಿಎಫ್ ದಾಖಲೆಗಳನ್ನೇ ಕಬ್ಜಾ ಮಾಡಿದ ‘ಕಬ್ಜ’ ಚಿತ್ರ!

Leave A Reply

Your email address will not be published.