Kabzaa: ಕಾಂತಾರ, ಕೆಜಿಎಫ್ ದಾಖಲೆಗಳನ್ನೇ ಕಬ್ಜಾ ಮಾಡಿದ ‘ಕಬ್ಜ’ ಚಿತ್ರ ! ಫಸ್ಟ್ ಡೇ 50 ಕೋಟಿ ಕಲೆಕ್ಷನೊಂದಿಗೆ ಎಲ್ಲಾ ರೆಕಾರ್ಡ್ ಪುಡಿ ಉಡಿಸ್!

Kabzaa :ಕಳೆದ ಕೆಲವು ವರ್ಷಗಳಿಂದ ಕನ್ನಡದ ಸಿನಿಮಾಗಳು ಸೃಷ್ಟಿಸುತ್ತಿರೋ ಕ್ರೇಜ್, ಭಾರತ ಮಾತ್ರವಲ್ಲ, ಇಡೀ ವಿಶ್ವದ ಚಿತ್ರರಂಗವೇ ಸ್ಯಾಂಡಲ್ ವುಡ್(Sandalwood) ಕಡೆ ತಿರುಗಿ ನೋಡುವಂತಾಗಿದೆ. ಕೆಜಿಎಫ್(KGF), ಕಾಂತಾರ(Kantara) ಸಿನಿಮಾಗಳು ಮಾಡಿದ ಮೋಡಿ, ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದರಿಂದ ಕನ್ನಡದ ಸಿನಿಮಾಗಳಿಗೋಸ್ಕರ ಜಗತ್ತಿನಾದ್ಯಂತ ಸಿನಿ ರಸಿಕರು ಕಾದು ಕೂರುವಂತಾಗಿದೆ. ಅಂತೆಯೇ ಇದೀಗ ಮತ್ತೊಂದು ಕನ್ನಡ ಸಿನಿಮಾವಾದ ‘ಕಬ್ಜ'(Kabzaa) ಭಾರತೀಯ ಸಿನಿ ರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ನಿನ್ನೆ ರಿಲೀಸ್ ಆದ ಈ ಚಿತ್ರ ಕನ್ನಡದ ಕೆಜಿಎಫ್, ಕಾಂತಾರದ ದಾಖಲೆಗಳನ್ನೇ ‘ಕಬ್ಜ’ ಮಾಡಿದೆ.

ಹೌದು, ಆರ್.ಚಂದ್ರು(R Chandru) ನಿರ್ದೇಶನದ, ಸೂಪರ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜ’ (Kabzaa) ಸಿನಿಮಾದ ಮೊದಲ ದಿನದ ಕಲೆಕ್ಷನ್ ಕಾಂತಾರ ಮತ್ತು ಕೆಜಿಎಫ್ 1 ಚಿತ್ರಕ್ಕಿಂತ ಹೆಚ್ಚು ಗಳಿಕೆ ಮಾಡಿದೆ. ಈ ಮೂಲಕ ಕನ್ನಡ ಸಿನಿಮಾಗಳ ದಾಖಲೆಯನ್ನು ಕನ್ನಡದ ಸಿನಿಮಾವೇ ಕಬ್ಜ ಮಾಡಿಬಿಟ್ಟಿದೆ. ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಬಾಕ್ಸ್ ಆಫೀಸ್(Box Office) ನಲ್ಲಿ ಧೂಳೆಬ್ಬಿಸೋ ನಿಟ್ಟಿನಲ್ಲಿ ಎಂಟ್ರಿ ಕೊಟ್ಟು, ತನ್ನದೇ ಹವಾ ಕ್ರಿಯೆಟ್ ಮಾಡಿದ ಈ ಚಿತ್ರ ಮೊದಲ ದಿನವೇ ಬರೋಬ್ಬರಿ 50 ಕೋಟಿ ಕಲೆಕ್ಷನ್ (Collection) ಮಾಡಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಂದು ದಾಖಲೆ ಸೃಷ್ಟಿಸೋದ್ರೊಂದಿಗೆ ಕನ್ನಡಿಗರೆಲ್ಲರಿಗೂ ಹೆಮ್ಮೆ ತಂದುಕೊಟ್ಟಿದೆ.

ಕಬ್ಜಕ್ಕೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಿಗರೂ ಫಿದಾ ಆಗಿಬಿಟ್ಟಿದ್ದಾರೆ. ವಿದೇಶಗಳಿಂದಲೂ ಹಣದ ಸುರಿಮಳೆ ಹರಿದು ಬರುತ್ತಿದ್ದು, ಹತ್ತು ಕೋಟಿಗೂ ಹೆಚ್ಚು ಗಳಿಕೆಯನ್ನು ಕಬ್ಜ, ಕಬ್ಜ ಮಾಡಿಬಿಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನಿನ್ನೆ ಬಿಡುಗಡೆಯಾದಾಗ ಕೆಲವು ಕಡೆ ಫಸ್ಟ್ ಶೋಗೆ ಪ್ರತಿಕ್ರಿಯೆ ಭಾರೀ ಪ್ರಮಾಣದಲ್ಲಿ ಇಲ್ಲವೆಂದು ಹೇಳಲಾಗಿತ್ತು. ಆದರೆ, ಸಂಜೆ ಅಷ್ಟೊತ್ತಿಗೆ ಅಷ್ಟೂ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಮಧ್ಯಾಹ್ನದಿಂದ ಥಿಯೇಟರ್ ಸಂಖ್ಯೆ ಹಾಗೂ ಶೋಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ.

ಸಿನಿಮಾ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ವಿಮರ್ಶಕರು ನಿರ್ದೇಶಕ ಆರ್.ಚಂದ್ರು ಅವರನ್ನು ಹಾಡಿಹೊಗಳಿದ್ದಾರೆ. ಚಂದ್ರು ಹೀಗೂ ಸಿನಿಮಾ ಮಾಡುವುದಕ್ಕೆ ಸಾಧ್ಯವಾ? ಎಂದು ಬಣ್ಣಿಸಿದ್ದಾರೆ. ಅದರಲ್ಲೂ ಸಿನಿಮಾದ ಸೆಕೆಂಡ್ ಆಫ್ ಬಗ್ಗೆ ಪ್ರಂಶಸೆ ವ್ಯಕ್ತ ಪಡಿಸಿದ್ದಾರೆ. ಸುದೀಪ್ ಮತ್ತು ಶಿವರಾಜ್ ಕುಮಾರ್ ಮಾಡಿದ ಪಾತ್ರಗಳ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸುವಂತೆ ಬರೆದಿದ್ದಾರೆ.

ಉಪೇಂದ್ರ (Upendra) ಸ್ವತಃ ನಿರ್ದೇಶಕರಾಗಿದ್ದರೂ ಮೇಕಿಂಗ್ ಬಗ್ಗೆ ಮಾತನಾಡುತ್ತಾ, ಭಾರತೀಯ ಸಿನಿಮಾ ರಂಗಕ್ಕೆ ಮತ್ತೊಬ್ಬ ಅದ್ಭುತ ನಿರ್ದೇಶಕ ಸಿಕ್ಕಿದ್ದಾರೆ ಎಂದು ಮಾಧ್ಯಮಗಳ ಮುಂದೆಯೇ ಆರ್.ಚಂದ್ರು ಅವರನ್ನು ಹೊಗಳಿದ್ದಾರೆ. ಬಾಲಿವುಡ್ ನಲ್ಲೂ ಕಬ್ಜ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅನುಪಮ್ ಖೇರ್ ಸೇರಿದಂತೆ ಅನೇಕ ಬಾಲಿವುಡ್ ಸಿಲೆಬ್ರಿಟಿಗಳು ಕನ್ನಡ ಸಿನಿಮಾವನ್ನು ಮೆಚ್ಚಿ ಮಾತನಾಡಿದ್ದಾರೆ. ನಿರ್ದೇಶಕ ಚಂದ್ರು ಅವರನ್ನು ಬಾಲಿವುಡ್ ಗೆ ಸ್ವಾಗತ ಎಂದು ಆಹ್ವಾನಿಸಿದ್ದಾರೆ.

ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್ ಹಾಗೂ ಶಿವಣ್ಣ ಅವರು ನಟಿಸಿದ್ದಾರೆ. ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆದಿತ್ತು. ಈಗ ‘ಕಬ್ಜ’ ಚಿತ್ರದ ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಫ್ಯಾನ್ಸ್ ರಿಯಾಕ್ಷನ್ ಕೊಟ್ಟಿದ್ದಾರೆ. ‘ಈ ಚಿತ್ರದ ಬಿಜಿಎಂ ನೆಕ್ಸ್ಟ್​ ಲೆವೆಲ್​. ಕ್ಲೈಮ್ಯಾಕ್ಸ್​ ಅಂತೂ ಮಿಸ್ ಮಾಡಿಕೊಳ್ಳಲೇ ಬಾರದು’ ಎಂದು ಫ್ಯಾನ್ಸ್ ಪ್ರತಿಕ್ರಿಯೆಯಲ್ಲಿ ಹೇಳಿಕೊಂಡಿದ್ದಾರೆ.

ನಿನ್ನೆ ಬರೋಬ್ಬರಿ 4000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜನ ಸಿನಿಮಾವನ್ನು ವೀಕ್ಷಿಸಿ ಆನಂದಿಸಿದ್ದಾರೆ. ರಿಲೀಸ್ ಆದ ದಿನವೇ 535 ಪ್ರದರ್ಶನಗಳನ್ನು ಪಡೆದ ಕಬ್ಜವು, ಈ ವರ್ಷ ಬಿಡುಗಡೆಯ ದಿನ ಬೆಂಗಳೂರಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ನಂಬರ್ ಒನ್ ಎನಿಸಿಕೊಳ್ಳಲು ಪಠಾಣ್ ಸಿನಿಮಾದ 821 ಪ್ರದರ್ಶನಗಳ ದಾಖಲೆಯನ್ನು ಹಿಂದಿಕ್ಕಲು ರಣಬೇಟೆ ಶುರುಮಾಡಿದೆ.

Leave A Reply

Your email address will not be published.