CBSE ಶಾಲೆಗಳಿಗೆ ಮುಖ್ಯವಾದ ಮಾಹಿತಿ!

CBSE: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ಎಲ್ಲಾ ಸಂಯೋಜಿತ ಶಾಲೆಗಳಿಗೆ ಏಪ್ರಿಲ್ 1 ರಿಂದ ಶೈಕ್ಷಣಿಕ ಅಧಿವೇಶನವನ್ನು ಪ್ರಾರಂಭಿಸಲು ಒತ್ತಾಯ ಹೇರಿದ್ದು ಮಾತ್ರವಲ್ಲದೆ, ನೋಟಿಸ್(Notice) ನೀಡಿ ಇದಕ್ಕೂ ಮೊದಲು ಶಾಲೆಗಳನ್ನು ಆರಂಭ ಮಾಡದಂತೆ ಸೂಚನೆ ನೀಡಿದೆ.

ಸದ್ಯ, ಸಿಬಿಎಸ್‌ಇ(CBSE) 10 ಮತ್ತು 12 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿದ್ದು, ಎರಡೂ ತರಗತಿಗಳ ಪರೀಕ್ಷೆಗಳು ಫೆಬ್ರವರಿ 15 ರಿಂದ ಶುರುವಾಗಲಿದೆ. 10 ನೇ ತರಗತಿ ಪರೀಕ್ಷೆಗಳು ಮಾರ್ಚ್ 21 ರಂದು ಮುಕ್ತಾಯ ಗೊಳ್ಳಲಿದೆ.12 ನೇ ತರಗತಿ ಪರೀಕ್ಷೆಗಳು ಏಪ್ರಿಲ್ 5 ರಂದು ಮುಗಿಯಲಿದೆ. ಈ ನಡುವೆ, ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗಿನ ಶೈಕ್ಷಣಿಕ ಅಧಿವೇಶನವನ್ನು ‘ಕಟ್ಟುನಿಟ್ಟಾಗಿ ಅನುಸರಿಸಲು’ (CBSE Warns For Schools) ಸಿಬಿಎಸ್‌ಇ ಶಾಲಾ ಮುಖ್ಯಸ್ಥರಿಗೆ ತಿಳಿಸಿದ್ದು, ಏಪ್ರಿಲ್ 1 ರ ಮೊದಲು ಅಧಿವೇಶನವನ್ನು ಆರಂಭ ಮಾಡುವುದನ್ನು ತಡೆಯಲು ಸೂಚಿಸಿದೆ. ಈ ಕುರಿತು ಸಿಬಿಎಸ್ಇ ಅಧಿಸೂಚನೆಯನ್ನು ಹೊರಡಿಸಿದೆ.

ಸಿಬಿಎಸ್‌ಇ ಹೆಚ್ಚಿನ ಶಾಲೆಗಳು ಅವಧಿಗೂ ಮೊದಲೇ ಶೈಕ್ಷಣಿಕ ಅವಧಿಯನ್ನು ಪ್ರಾರಂಭ ಮಾಡಿ, ಬೇಗ ಕೋರ್ಸ್‌ವರ್ಕ್ ಅನ್ನು ಮುಗಿಸುವುದರಿಂದ ಜೀವನ ಕೌಶಲ್ಯ, ಮೌಲ್ಯ ಶಿಕ್ಷಣ, ಆರೋಗ್ಯ( Health) ಮತ್ತು ದೈಹಿಕ ಶಿಕ್ಷಣ ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುವುದಿಲ್ಲ ಎಂದು ಸಿಬಿಎಸ್‌ಇ ತಿಳಿಸಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಮಾನ ಅವಕಾಶ ನೀಡಬೇಕೆಂದು ಸಿಬಿಎಸ್‌ಇ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೆಚ್ಚಿನ ಸಿಬಿಎಸ್ಸಿ (CBSE Schools) ಶಾಲೆಗಳು ಕೋರ್ಸ್‌ವರ್ಕ್ ಅನ್ನು ಸರಿಹೊಂದಿಸಲು ಶೈಕ್ಷಣಿಕ ಅವಧಿಯನ್ನು(CBSE Academic Session)ಮೊದಲೇ ಆರಂಭಿಸುತ್ತಿದೆ. ಕೆಲವು ಸಂಯೋಜಿತ ಶಾಲೆಗಳು ತಮ್ಮ ಶೈಕ್ಷಣಿಕ ಅವಧಿಯನ್ನು ಕಡಿಮೆ ಅವಧಿಯಲ್ಲಿ ಇಡೀ ವರ್ಷದ ಕೋರ್ಸ್‌ವರ್ಕ್ ಅನ್ನು ಪೂರ್ಣಗೊಳಿಸಲು ಯತ್ನಿಸುವುದರಿಂದ ವಿದ್ಯಾರ್ಥಿಗಳಿಗೆ(Students) ಕಲಿಕೆಯ (Study Impact)ಮೇಲೆ ಪ್ರಭಾವ ಬೀರುತ್ತದೆ. ಕಲಿಕೆಯ ವೇಗಕ್ಕೆ ತಡೆಯಾಗುವ ಜೊತೆಗೆ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗುವುದನ್ನು ಮನಗಂಡ ಮಂಡಳಿ ಅಧಿಕೃತ ಪ್ರಕಟಣೆ ಯಲ್ಲಿ ಈ ವಿಚಾರವನ್ನು ತಿಳಿಸಿದೆ. ವರ್ಷದ ಮೊದಲು ಶೈಕ್ಷಣಿಕ ಅವಧಿಗಳನ್ನು ಪ್ರಾರಂಭಿಸುವುದನ್ನು ತಡೆಯುವ ಸಲುವಾಗಿ ಮಂಡಳಿ, ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗಿನ ಶೈಕ್ಷಣಿಕ ಅಧಿವೇಶನವನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಿ ಮಂಡಳಿಯ ಜೊತೆಗೆ ಸಂಯೋಜಿತವಾಗಿರುವ ಶಾಲೆಗಳ ಪ್ರಾಂಶುಪಾಲರು(Principals) ಮತ್ತು ಸಂಸ್ಥೆಗಳ ಮುಖ್ಯಸ್ಥರಿಗೆ ನೊಟೀಸ್ ನೀಡಿದೆ.

Leave A Reply

Your email address will not be published.