Cocoa Market Price: ಇಳಿಕೆ ಕಂಡ ಕೊಕ್ಕೋ ಧಾರಣೆ -ಕೆ.ಜಿ.ಗೆ 100 ರೂ ಇಳಿಕೆ

Cocoa Market Price: ಅಚ್ಚರಿಯಂತೆ ದಿಢೀರ್ ಏರಿಕೆ ಕಂಡಿದ್ದ ಕೊಕ್ಕೋ ಧಾರಣೆ ಈಗ ಇಳಿಕೆಯಾಗಿದೆ.

ಕೊಕ್ಕೋಗೆ ಐತಿಹಾಸಿಕವಾಗಿ ಏರಿಕೆಯಾಗಿದ್ದ ಬೆಲೆ ಇದೀಗ ಇಳಿಕೆ ಕಾಣುತ್ತಿದೆ. ಕೊಕ್ಕೋ ಕೆ.ಜಿ.ಗೆ 320 ರೂ. ವರೆಗೆ ಏರಿಕೆ ಕಂಡಿದ್ದ ಹಸಿ ಕೊಕ್ಕೋ ಧಾರಣೆ ಇದೀಗ 220 ರೂ.ಗೆ ಇಳಿದಿದೆ.ಕೆ.ಜಿ.ಗೆ 100 ರೂ.ಗಳಷ್ಟು ಇಳಿಕೆ ಕಂಡಿದೆ.

ಬುಧವಾರ ಕ್ಯಾಂಪ್ಕೋ ಸಂಸ್ಥೆ 150-220 ವರೆಗೆ ಹಸಿ ಕೊಕ್ಕೋ ಖರೀದಿಸಿದೆ. ಒಣ ಕೊಕ್ಕೊ ಧಾರಣೆ 650- 700 ರೂ.ಗಳಷ್ಟಿತ್ತು.

ಕೊಕ್ಕೋ ಧಾರಣೆ ಏರಿಕೆಯಾಗಿದ್ದರೂ ಹಲವು ಕೃಷಿಕರು ಅದಕ್ಕೂ ಮೊದಲೇ ತಮ್ಮ ಅಡಿಕೆ ತೋಟದಲ್ಲಿದ್ದ ಕೊಕ್ಕೋ ಗಿಡಗಳನ್ನು ಕಡಿದಿದ್ದರು.ಬೆಲೆ ಏರಿಕೆಯಾದ ಸಮಯದಲ್ಲಿ ಹಲವು ಕೃಷಿಕರು ಕೈ ಕೈ ಹಿಚುಕಿದ್ದೂ ಇದೆ.ಒಟ್ಟಾರೆಯಾಗಿ ಏರಿಕೆಯಾಗಿದ್ದ ಕೊಕ್ಕೋ ಧಾರಣೆ ಇದೀಗ ಇಳಿಕೆಯಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಅಡಿಕೆ ಹೆಚ್ಚಿನ ಧಾರಣೆ ಆದ ಸಂದರ್ಭದಲ್ಲಿ ಹೆಚ್ಚಿನ ರೈತರು ಅಡಿಕೆ ತೋಟದ ನಡುವೆ ಇದ್ದ ಕೊಕ್ಕೋ ಗಿಡಗಳನ್ನು ಕಡಿದು ಅಡಿಕೆ ಗಿಡ ನಾಟಿ ಮಾಡಿದ್ದರು.

Leave A Reply

Your email address will not be published.