ಸೋಮವಾರ, 26 ಅಕ್ಟೋಬರ್ 2026
Trending

ಬೆಳ್ತಂಗಡಿ : ಸೋಮಂತಡ್ಕದಲ್ಲಿ ಆಟೋರಿಕ್ಷಾ ಪಲ್ಟಿ, ಪ್ರಯಾಣಿಕನಿಗೆ ಗಂಭೀರ ಗಾಯ

ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದಲ್ಲಿ ಆಟೋ ರಿಕ್ಷಾವೊಂದು ಪಲ್ಟಿಯಾಗಿ ಪ್ರಯಾಣಿಕ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ.

Sponsored

ಗಾಯಗೊಂಡ ಪ್ರಯಾಣಿಕನನ್ನು ಕಕ್ಕಿಂಜೆ ನಿವಾಸಿ ಡೀಕಯ್ಯ ಎಂದು ಗುರುತಿಸಲಾಗಿದೆ.

Advertisement
Advertisement

ಹೇಮಂತ್ ಕಕ್ಕಿಂಜೆ ಎಂಬವರಿಗೆ ಸೇರಿದ ಆಟೋ ಇದಾಗಿದ್ದು, ನಾಯಿ ಅಡ್ಡ ಬಂದ ಕಾರಣ ಆಟೋರಿಕ್ಷಾ ಪಲ್ಟಿಯಾಗಿದೆ. ಆಟೋರಿಕ್ಷಾ ಮಾತ್ರ ಸಂಪೂರ್ಣ ಜಖಂಗೊಂಡಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಆದರೆ ಪ್ರಯಾಣಿಕನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ತುರ್ತು ಸೇವೆಗೆ ಆಗಮಿಸಿದ ಖುಷಿ ಅಂಬುಲೆನ್ಸ್ ಮೂಲಕ ಅವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Advertisement