ಬೆಳ್ತಂಗಡಿ : ಕರ್ನಾಟಕ ಟಿವಿ ವತಿಯಿಂದ ನೀಡಲಾದ ಲೀಡರ್ ಅವಾರ್ಡ್–2025ರ ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಪಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನ ಬೆಳ್ತಂಗಡಿ ವಲಯದ ವತಿಯಿಂದ ಗೌರವಿಸಲಾಯಿತು.
Sponsoredಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಶಾಸಕರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಲಯದ ಗೌರವಾಧ್ಯಕ್ಷ ವಿಲ್ಸನ್ ಗೋನ್ಸಾಲಿಸ್, ಅಧ್ಯಕ್ಷ ರವಿ ಪೂಜಾರಿ ನಾರಾವಿ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಜೊತೆ ಕಾರ್ಯದರ್ಶಿ ಗಣೇಶ್ ಹೆಗ್ಡೆ ನಾರಾವಿ, ಉಪಾಧ್ಯಕ್ಷ ಉಮೇಶ್ ಕುಲಾಲ್ ಗುರುವಾಯನಕೆರೆ, ಕೋಶಾಧಿಕಾರಿ ಸುಜಿತ್ ರೈ ಪದ್ಮುಂಜ ಸೇರಿದಂತೆ ಜಿಲ್ಲಾ ಹಾಗೂ ವಲಯದ ವಿವಿಧ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಮತ್ತು ಸದಸ್ಯರು ಉಪಸ್ಥಿತರಿದ್ದರು.
Marriage AdSponsored



