ಭಾನುವಾರ, 25 ಅಕ್ಟೋಬರ್ 2026
Trending

5G ಸೇವೆಯಿಂದ ಗ್ರಾಹಕರಿಗೆ ಸಿಗಲಿದೆ ಭರ್ಜರಿ ಸೇವೆ | ಏನೆಲ್ಲಾ ಗೊತ್ತೇ?

5G ಸೇವೆ ಭಾರತದಲ್ಲಿ ಆರಂಭವಾಗಿದೆ. ತಂತ್ರಜ್ಞಾನದ ಹೊಸ ರೀತಿಯಾದ 5Gಯಿಂದ ಹಲವಾರು ಪ್ರಯೋಜನಗಳನ್ನು ಜನ ಪಡೆಯಲಿದ್ದಾರೆ ಜನರು. ಈ 5G ಸೇವೆಯನ್ನು ಯಾರು ಪಡೆಯುತ್ತಾರೆ? ಇದರ ಪ್ರಯೋಜನ ಏನು? ಇಲ್ಲಿದೆ ಉತ್ತರ

Sponsored

5G ಸೇವೆ ದೊರಕಿದ ನಂತರ, ಗ್ರಾಹಕರು ಹೆಚ್ಚು ಇಂಟರ್ನೆಟ್ ವೇಗವನ್ನು ಪಡೆಯುತ್ತೀರಿ. ನಂತರ ನೀವು ಇಂಟರ್ನೆಟ್ ವೇಗದ ಸಮಸ್ಯೆ ಇರುವುದಿಲ್ಲ.

ಹೆಚ್ಚಿನ ವೇಗದ ಇಂಟರ್ನೆಟ್ ನ್ ಗೆ ಜನ ಕಾಯುತ್ತಿದ್ದ ಸಮಯ ಹತ್ತಿರ ಬಂದಿದೆ ಎಂದೇ ಹೇಳಬಹುದು. ಇದರಿಂದಾಗಿ ಜನರು ಯಾವುದೇ ಸಮಯದಲ್ಲಿ ಈ ಸೇವೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.

5G ಸೇವೆಯ ಆಗಮನದ ನಂತರ, ಈಗ ಜನರು ಕಾಲ್ ಡ್ರಾಪ್ ಸಮಸ್ಯೆಯಿಂದ ಮುಕ್ತರಾಗುತ್ತಾರೆ. 4ಜಿ ಸೇವೆಯಲ್ಲಿ ಕಾಲ್ ಡ್ರಾಪ್ ಸಮಸ್ಯೆ ಇದ್ದಿದ್ದು, ಕಳೆದ ಎರಡು-ಮೂರು ವರ್ಷಗಳಲ್ಲಿ ಈ ಸಮಸ್ಯೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆದರೆ ಜನರು 5G ಸೇವೆಯಲ್ಲಿ ಅಂತಹ ಸಮಸ್ಯೆ ಇರಲ್ಲ.

ಕಾಲ್ ಡ್ರಾಪ್ ಜೊತೆಗೆ, ಇದರೊಂದಿಗೆ ಸ್ಪಷ್ಟವಾದ ಆಡಿಯೋ ಕೊರತೆ ಕೂಡಾ ಕರೆಗೆ ತೊಂದರೆಯಾಗುತ್ತಿತ್ತು. 5G ಸೇವೆಯಿಂದ ನೀವು ಕರೆ ಮಾಡುವಾಗ ಮುಂದಿನ ಹಂತದ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತು ಸ್ಪಷ್ಟ ಆಡಿಯೋ ಕೂಡಾ ಇರುತ್ತದೆ.

5G ಸೇವೆಯನ್ನು ಪ್ರಾರಂಭಿಸಿದ ನಂತರ ಸೂಪರ್ ಫಾಸ್ಟ್ ಡೌನ್ಲೋಡ್ ವೇಗ ಇರುತ್ತದೆ. ಗುಣಮಟ್ಟದ ಸಿನಿಮಾ ಮತ್ತು ವೀಡಿಯೊಗಳು ಕ್ಷಣಮಾತ್ರದಲ್ಲಿ ಡೌನ್ಲೋಡ್ ಆಗುತ್ತವೆ.

ಹಾಗೆನೇ 4G ತಂತ್ರಜ್ಞಾನದಲ್ಲಿ ವೀಡಿಯೊ ಕರೆಗಳಲ್ಲಿ ಸಮಸ್ಯೆ ಇತ್ತು. ಇಂಟರ್ನೆಟ್ ಸಂಪರ್ಕ ಎಷ್ಟೇ ಉತ್ತಮವಾಗಿದ್ದರೂ, ವೀಡಿಯೋ ಯಾವಾಗಲೂ ನಿಧಾನವಾಗಿರುತ್ತದೆ. ಆದರೆ 5G ಸೇವೆಯಿಂದ ಈಗ ವೀಡಿಯೊ ಕರೆ ಕ್ವಾಲಿಟಿ ಉತ್ತಮವಾಗಲಿದೆ. ಮತ್ತು ವೀಡಿಯೋದ ಗುಣಮಟ್ಟವೂ ಉತ್ತಮವಾಗಿರುವುದರ ಜೊತೆಗೆ ನೀವು 5Gಯ ಸೂಪರ್ ಅನುಭವವನ್ನು ಪಡೆಯಲಿದ್ದೀರಿ.