ಶನಿವಾರ, 24 ಅಕ್ಟೋಬರ್ 2026

56 ಇಂಚಿನ ಎದೆ ಎಲ್ಲಿ ಹೋಯಿತು?-ಮೋದಿ ವಿರುದ್ಧ ಖರ್ಗೆ ಕಿಡಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ, ” 56 ಇಂಚಿನ ಎದೆ ಎಲ್ಲಿ ಹೋಯಿತು?” ಎಂದು ಕಿಡಿಕಾರಿದ್ದಾರೆ. ʼನೀವೇ ನೇಮಿಸಿದ ಟ್ರಸ್ಟ್‌, ಮಂದಿರದ ಹಣ ದೋಚಿತು, ನೀಟ್‌ ಹಗರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೊಳಗಾದರುʼ ಎಂದು ಹೇಳಿದರು.

56 ವರ್ಷದ ಯುವಕ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಲೇವಡಿ ಮಾಡಿದ್ದ ಮೋದಿ ಹೇಳಿಕೆಯನ್ನು ಖರ್ಗೆ ಖಂಡಿಸಿದ್ದು, ʼಇತರರನ್ನು ಕೆಣಕುವುದು ಮತ್ತು ಪರೋಕ್ಷವಾಗಿ ಟೀಕಿಸುವುದೇ ಪ್ರಧಾನಿಯ ಏಕೈಕ ಕೆಲಸ. ಮೊದಲು ಜನರಿಗೆ ನಿಮ್ಮ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿ ಎಂದು ಸವಾಲು ಹಾಕಿದರು.