ಪ್ರೀತಿ, ಪ್ರೇಮದ ವಿಚಾರದಲ್ಲಿ ಮುನಿಸು ಕೋಪಗಳು ಸರ್ವೇಸಾಮಾನ್ಯ. ಇಂತಹ ಸಂದರ್ಭ ದಲ್ಲಿ ಪ್ರೇಮಿಗಳು ಏನಾದರೂ ದುಡುಕಿನ ನಿರ್ಧಾರವನ್ನು ಕೈಗೊಳ್ಳುವುದು. ಅದರಲ್ಲೂ ಹರೆಯದ ಯುವಕ ಯುವತಿಯರಲ್ಲಂತೂ ಇದು ಇದ್ದೇ ಇರುತ್ತದೆ. ಆದರೆ ಇಲ್ಲೊಂದೆಡೆ ತನ್ನ ಗರ್ಲ್ ಫ್ರೆಂಡ್ ಮಾತನಾಡುತ್ತಿಲ್ಲ ಎಂದು 41 ವರ್ಷದ ವ್ಯಕ್ತಿ ನೇಣು ಬಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ವೈಯಾಲಿಕಾವಲ್ ಪ್ಯಾಲೇಸ್ ಗುಟ್ಟಹಳಿಯಲ್ಲಿ ನಡೆದಿದೆ. ಡಾರ್ಜಿಲಿಂಗ್ ಮೂಲದ ಸುದೀಪ್ (41) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ಸೂಟ್‌ಕೇಸಲ್ಲಿ ನಗದು ಹಣ ಇಟ್ಟು ದೇವಸ್ಥಾನದ ಎದುರಿನ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೈಯಾಲಿಕಾವಲ್ ಪೊಲೀಸರು, ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಸುದೀಪ್ ತನ್ನ ಗರ್ಲ್‌ಫ್ರೆಂಡ್ ಮಾತನಾಡ್ತಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.



