ಶನಿವಾರ, 24 ಅಕ್ಟೋಬರ್ 2026

₹3 ಲಕ್ಷದ ನೋಟುಗಳಿಂದ ಚಾಮುಂಡೇಶ್ವರಿ ದೇವಿಗೆ ಧನಲಕ್ಷ್ಮಿ ಅಲಂಕಾರ; ಭಕ್ತರ ಗಮನ ಸೆಳೆದ ವೈಭವ

 

ಮಂಡ್ಯ: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಶ್ರೀರಂಗಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಧನಲಕ್ಷ್ಮಿ ಅಲಂಕಾರ ನೆರವೇರಿಸಲಾಯಿತು. ವಿವಿಧ ಮುಖಬೆಲೆಯ ನೋಟುಗಳಿಂದ ಅಲಂಕರಿಸಲ್ಪಟ್ಟ ದೇವಿಯ ದರ್ಶನ ಭಕ್ತರ ಗಮನ ಸೆಳೆಯಿತು.

ಮಂಗಳೂರು: ಕೆಎಫ್‌ಸಿ ಹಳೆ ಮಾಂಸ ಪತ್ತೆ ಪ್ರಕರಣ: ಗ್ರಾಹಕರ ಆರೋಪಕ್ಕೆ ಸಂಸ್ಥೆಯ ಸ್ಪಷ್ಟನೆ

ಭಕ್ತರು ಕಾಣಿಕೆಯಾಗಿ ನೀಡಿದ್ದ ಸುಮಾರು ₹3 ಲಕ್ಷ ಹಣವನ್ನು ಬಳಸಿ ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀಶ ಅವರ ನೇತೃತ್ವದಲ್ಲಿ ಈ ವಿಶೇಷ ಅಲಂಕಾರ ಮಾಡಲಾಗಿದೆ. ₹10, ₹20, ₹50, ₹100, ₹200 ಹಾಗೂ ₹500 ಮುಖಬೆಲೆಯ ಹೊಸ ನೋಟುಗಳನ್ನು ಕಲಾತ್ಮಕವಾಗಿ ಜೋಡಿಸಿ ಗರ್ಭಗುಡಿ ಹಾಗೂ ದೇವಿಯ ಸುತ್ತಲೂ ಸಿಂಗರಿಸಲಾಗಿತ್ತು.

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಿಗೆ ವಿಶೇಷ ಅರ್ಚನೆ, ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ನಾಡಿನಲ್ಲಿ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ಬೆಳೆಯಬೇಕು. ರೈತರು ಹಾಗೂ ಜನಸಾಮಾನ್ಯರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಮಂಗಳೂರು: ಕೆಎಫ್‌ಸಿ ಹಳೆ ಮಾಂಸ ಪತ್ತೆ ಪ್ರಕರಣ: ಗ್ರಾಹಕರ ಆರೋಪಕ್ಕೆ ಸಂಸ್ಥೆಯ ಸ್ಪಷ್ಟನೆ

ನೋಟುಗಳಿಂದ ಕಂಗೊಳಿಸುತ್ತಿದ್ದ ದೇವಿಯ ಅಲಂಕಾರ ಭಕ್ತರನ್ನು ಆಕರ್ಷಿಸಿದ್ದು, ವಿಶೇಷ ದರ್ಶನ ಪಡೆಯಲು ದೇವಾಲಯಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.