ಪುತ್ತೂರು: ಹತ್ತು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಆರೋಪಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಪುತ್ತೂರಿನ ಪೋಕ್ಸೋ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿದೆ.
2020ರ ಫೆ.14 ರಂದು ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹತ್ತು ವರ್ಷದ ಬಾಲಕಿ ತನ್ನ ತಾಯಿ ಹೇಳಿದಂತೆ ಅಂಗಡಿಗೆ ಹೋಗಿದ್ದು, ಅಂಗಡಿ ಮಾಲೀಕ ಅಬ್ದುಲ್ಲಾ (ದಿ.ಕುಂಞಪ್ಪ ಬ್ಯಾರಿ ಅವರ ಪುತ್ರ) ಎಂಬಾತ ಚಿಲ್ಲರೆ ನೀಡುವ ನೆಪದಲ್ಲಿ ಅಂಗಡಿಯೊಳಗೆ ಕರೆದೊಯ್ದಿದ್ದು, ಬಾಲಕಿಗೆ ತಿಂಡಿ ಜ್ಯೂಸ್ ಕೊಡುವುದಾಗಿ ಪುಸಲಾಯಿಸಿ ಅಸಭ್ಯ ವರ್ತನೆ ಮಾಡಿದ್ದಲ್ಲದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಷಯವನ್ನು ಯಾರಿಗೂ ತಿಳಿಸಬಾರದಾಗಿ ಬೆದರಿಕೆ ಹಾಕಿದ್ದನು.
ನ್ಯಾಯಾಲಯವು ಆರೋಪಿಗೆ ಐದು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. 35,000 ರೂ. ದಂಡ ವಿಧಿಸಲಾಗಿದ್ದು, ಅದರಲ್ಲಿ 20,000 ರೂ.ಗಳನ್ನು ಸಂತ್ರಸ್ತ ಬಾಲಕಿಗೆ ನೀಡಲು ಆದೇಶಿಸಲಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಬಾಲಕಿಗೆ 1.50ಲಕ್ಷ ರೂ ಪರಿಹಾರ ನೀಡಲು ನ್ಯಾಯಾಲಯವು ನಿರ್ದೇಶನ ನೀಡಿದೆ.



